'ಕೆಜಿಎಫ್ ಚಾಪ್ಟರ್-2' (KGF Chapter 2) ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿದೆ.

ಚಿತ್ರವು ಸೌತ್ ನಾರ್ತ್ ಎಲ್ಲ ಕಡೆ ಎಲ್ಲಾ ಭಾಷೆಯಲ್ಲೂ ಕಲೆಕ್ಷನ್ ಮಳೆ ಸುರಿಸಿತು.

ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಸುಮಾರು ರೂ.1250 ಕೋಟಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.

ಬಾಲಿವುಡ್ ನಲ್ಲಿ ಸಹ ಈ ಚಿತ್ರ ಹೊಸ ದಾಖಲೆಗಳನ್ನು ಸೃಷ್ಟಿಸಿದೆ.

ಪ್ರಶಾಂತ್ ನೀಲ್ ಅವರ ಮೇಕಿಂಗ್ ಮತ್ತು ಯಶ್ ಅವರ ನಟನೆ ಪ್ರೇಕ್ಷಕರನ್ನು ಬೆರಗುಗೊಳಿಸಿತು.

ಈ ಚಿತ್ರವು ಪ್ರಸ್ತುತ ಅಮೆಜಾನ್‌ನಲ್ಲಿ ಕನ್ನಡ ಜೊತೆಗೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮ್ ಆಗುತ್ತಿದೆ.

ವಿಶೇಷವಾಗಿ ಶುಕ್ರವಾರಕ್ಕೆ ಕೆಜಿಎಫ್-2 ಚಿತ್ರ 100 ದಿನ ಪೂರೈಸಿದೆ (Completes 100 Days).

ಈ ಸಂದರ್ಭದಲ್ಲಿ, ಪ್ರಶಾಂತ್ ನೀಲ್ (Prashannth Neel) ಟ್ವಿಟರ್ ನಲ್ಲಿ ವಿಶೇಷ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

#100MonsterDaysOfKGF2 ಎಂದು ಟ್ಯಾಗ್ ಮಾಡಿರುವ ಈ ವಿಡಿಯೋ ವೈರಲ್ ಆಗಿದೆ.

ಪ್ರಶಾಂತ್ ನೀಲ್ ಮಾಡಿರುವ ಪೋಸ್ಟ್ ನೋಡಲು ಕ್ಲಿಕ್ಕಿಸಿ

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today