ನಟ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಜುಲೈ 28 ರಂದು ವಿಕ್ರಾಂತ್ ರೋಣ ಚಿತ್ರ ಥಿಯೇಟರ್‌ಗೆ ಬರಲಿದೆ.

ವಿಶೇಷವೆಂದರೆ 'ವಿಕ್ರಾಂತ್ ರೋಣ' ಚಿತ್ರ ವಿದೇಶದಲ್ಲಿ 1200ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗುತ್ತಿದೆ.

ಚಿತ್ರವನ್ನು 3D ಮತ್ತು 2D ಎರಡರಲ್ಲೂ ನಿರ್ಮಿಸಲಾಗಿದೆ.

ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್‌ ಕಾಣಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ವೈರಲ್ ಫೀವರ್ ನಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು.

ಆಸ್ಪತ್ರೆಗೂ ದಾಖಲಾಗಿದ್ದರು ಎಂಬ ಸುದ್ದಿಯೂ ಮುನ್ನೆಲೆಗೆ ಬಂದಿದೆ.

ಹೀಗಿರುವಾಗ ಚಿತ್ರದ ನಾಲ್ಕನೇ ಹಾಡು ‘ಗುಮ್ಮ ಬಂದ ಗುಮ್ಮ..’ ಬಿಡುಗಡೆ ಮಾಡಲಾಗಿದೆ.

ಚಿತ್ರದ ಟ್ರೈಲರ್ ಸೇರಿದಂತೆ ಹಾಡುಗಳು ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಮಾಡಿವೆ.

ನಟ ಕಿಚ್ಚ ಸುದೀಪ್ ಅಭಿಮಾನಿಗಳು ಕುತೂಹಲದಿಂದ ಚಿತ್ರ ಬಿಡುಗಡೆ ಎದುರು ನೋಡುತ್ತಿದ್ದಾರೆ.

ಹಾಡನ್ನು ನೋಡಲು ಕ್ಲಿಕ್ಕಿಸಿ

ಸುದ್ದಿ ಮಾಹಿತಿ ಮತ್ತು ಮನೋರಂಜನೆಗೆ ವೆಬ್ ತಾಣಕ್ಕೆ ಭೇಟಿ ನೀಡಿ

https://kannadanews.today