ನ್ಯೂ ಆರಿಜನ್ ಕಾಲೇಜು ವತಿಯಿಂದ ಸ್ವಚ್ಚತಾ ಅಭಿಯಾನ

Cleanup campaign by New Origen College

ನ್ಯೂ ಆರಿಜನ್ ಕಾಲೇಜು ವತಿಯಿಂದ ಸ್ವಚ್ಚತಾ ಅಭಿಯಾನ

ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಮನಪರಿವರ್ತನೆಯಾದಾಗ ಸ್ವಚ್ಚತಾ ಅಭಿಯಾನ ಯಶಸ್ವಿಯಾಗುತ್ತದೆ ಎಂದು ನೆರಿಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಯೋಗೇಶ್ ರೆಡ್ಡಿ ತಿಳಿಸಿದರು.

ಆನೇಕಲ್ : ಅವರು ತಾಲ್ಲೂಕಿನ ನೆರಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಣಿಘಟ್ಟಪುರ ಗ್ರಾಮದಲ್ಲಿ ನ್ಯೂ ಆರಿಜನ್ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ನೀಡಿದ ಮೊದಲ ಸಂದೇಶ ಸ್ವಚ್ಚಭಾರತ, ಅವರ ಸಂದೇಶದ ಬಳಿಕ ಜನರಲ್ಲಿ ಸ್ವಚ್ಚತೆಯ ಬಗ್ಗೆ ವಿಶೇಷ ಜಾಗೃತಿ ಮೂಡಿದೆ ಎಂದರು.

ಭೂಮಿಯ ಗರ್ಭದಲ್ಲಿ ಅನೇಕ ಬೆಂಕಿ ಜ್ವಾಲೆಗಳಿವೆ ಆದರೆ ಸಕಲ ಜೀವ ರಾಶಿಗಳು ಬದುಕಲು ಬೇಕಾದ ಪರಿಸರವನ್ನು ಒದಗಿಸುವುದು ಭೂಮಿ, ಆದರೆ ಪರಿಸರದಿಂದ ಎಲ್ಲವನ್ನು ಪಡೆದ ಮನುಷ್ಯ ಏಕೆ ಪರಿಸರ ಸಂರಕ್ಷಣೆ ಮಾಡಲು ಮುಂದಾಗುತಿಲ್ಲ ಏಂದರು.

ಸಾರ್ವಜನಿಕರು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಸರ ಸ್ವಚ್ಚತೆಗೆ ಮುಂದಾಗಬೇಕು ಹಾಗೂ ಹಸಿ ಕಸ ಮತ್ತು ಒಣಕಸವನ್ನು ಬೇರ್ಪಡಿಸಬೇಕು ಜೊತೆಗೆ ಮನೆಗೊಂದು ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕು ಎಂದು ಸಾರ್ವಜನಿಕರಿಗೆ ತಿಳಿ ಹೇಳಿದರು.

ನ್ಯೂ ಆರಿಜನ್ ಕಾಲೇಜಿನ ಶಿಕ್ಷಕರಾದ ಸಂಗೀತ ಮತ್ತು ಸುನೀತಾ ಮಾತನಾಡಿ ವಿದ್ಯಾರ್ಥಿಗಳು ಗೋಣಿಘಟ್ಟ ಪುರ ಗ್ರಾಮದ ಸಾರ್ವಜನಿಕರ ಸ್ಥಳಗಳು ಹಾಗೂ ದೇವಾಲಯ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳನ್ನು ಸ್ವಚ್ಚ ಗೊಳಿಸಿ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದ್ದು ಮುಂದಿನ ದಿನಗಳಲ್ಲಿ ಗ್ರಾಮವನ್ನು ದತ್ತು ಪಡೆದು ಗ್ರಾಮದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.

ನೆರಿಗಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಿಂಹಯ್ಯ, ಪಂಚಾಯಿತಿ ಸದಸ್ಯರಾದ ಭಾಗ್ಯ, ಮುಖಂಡರಾದ ಕರಗಪ್ಪಗೌಡ, ಸಂತೋಷ್ ಮತ್ತು ನ್ಯೂ ಆರಿಜನ್ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು./// ವರದಿ : ಮಲ್ಲಿಕಾರ್ಜುನ್ ಆರಾಧ್ಯ , ಆನೇಕಲ್

WebTitle : ನ್ಯೂ ಆರಿಜನ್ ಕಾಲೇಜು ವತಿಯಿಂದ ಸ್ವಚ್ಚತಾ ಅಭಿಯಾನ – Cleanup campaign by New Origen College

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್  : Anekal News Kannada | Anekal News Today