ಕೋಟೆ ನಾಡಿನಲ್ಲಿ ಇತಿಹಾಸ ನಿರ್ಮಿಸಿದ ಕಮಲದ ಮಡಿಲಿಗೆ ಪುನಃ ಕೋಟೆ

BJP made history in Bagalkot

ಕೋಟೆ ನಾಡಿನಲ್ಲಿ ಇತಿಹಾಸ ನಿರ್ಮಿಸಿದ ಕಮಲದ ಮಡಿಲಿಗೆ ಪುನಃ ಕೋಟೆ – BJP made history in Bagalkot

ಕೋಟೆ ನಾಡಿನಲ್ಲಿ ಇತಿಹಾಸ ನಿರ್ಮಿಸಿದ ಕಮಲದ ಮಡಿಲಿಗೆ ಪುನಃ ಕೋಟೆ

ಬಾಗಲಕೋಟೆ ಲೋಕ ಸಮರದಲ್ಲಿ ಕೋಟೆ ಕಮಲದ ಮಡಿಲಿಗೆ ಪುನಃ ಸೇರಿದೆ. ಬಿಜೆಪಿಯಿಂದ ಶ್ರೀ ಪಿಸಿ ಗದ್ದಿಗೌಡರ್ ರಣರಂಗದಲ್ಲಿ ಇದ್ದು ಅವರ ಎದುರಾಳಿಯಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ವೀಣಾ ಕಾಶಪ್ಪನವರ್ ಅವರ ಎದುರಾಳಿಯಾಗಿ ಅಖಾಡಕ್ಕಿಳಿದಿದ್ದರು.

ಬಾಗಲಕೋಟ ಲೋಕಸಮರದ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಇವೆ.ಅದರಲ್ಲಿ ಜಮಖಂಡಿ ಬದಾಮಿ ಹೊರತುಪಡಿಸಿದರೆ ಇನ್ನುಳಿದ ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಶ್ರೀ ಪಿಸಿ ಗದ್ದಿಗೌಡರ್ ಅವರಿಗೆ ಗೆಲುವು ಖಚಿತ ಎಂದುಕೊಂಡು ನಾಯಕರಿಗೆ ಸವಾಲಾಗಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ವೀಣಾ ಕಾಶಪ್ಪನವರ್ ರಣರಂಗದಲ್ಲಿ ಪೈಪೋಟಿಯಾಗಿ ಉಳಿದಿದ್ದರು.

ಆದರೆ ಸತತ 2004,2009, 2014ರ ಈ ಮೂರು ವರ್ಷಗಳಲ್ಲಿ ಸತತವಾಗಿ ಮೂರು ಬಾರಿ ಆಯ್ಕೆ ಆದಿ ಸೋಲಿಲ್ಲದ ಸರದಾರ ಎಂದೆನಿಸಿ ಕೊಂಡಿದ್ದಾರೆ.

ಕಾರಣ ಸತತ ಮೂರು ಲೋಕಸಮರದ ಯುದ್ಧದಲ್ಲಿ ಗೆದ್ದು ಜನರ ಅಭಿವೃದ್ಧಿಪರ ಕಾರ್ಯಗಳತ್ತ ಗಮನ ನೀಡುವುದರ ಜೊತೆಗೆ ಜನರ ಆಗುಹೋಗುಗಳ ಅಭಿಲಾಷೆಗಳ ಬಗ್ಗೆ ಚರ್ಚಿಸಿ ಜನರ ಆಶಾಕಿರಣ ನಾಯಕರಾಗಿದ್ದ ಶ್ರೀ ಪಿಸಿ ಗದ್ದಿಗೌಡರ್ 2019ರ ಲೋಕಸಮರದ ಫಲಿತಾಂಶದಲ್ಲೂ ಸಹ ಗೆಲುವನ್ನು ಕಂಡು ಕೋಟೆ ನಾಡಿನಲ್ಲಿ ಇತಿಹಾಸ ನಿರ್ಮಿಸಿದ ರಾಜಕೀಯ ನಾಯಕರಾಗಿದ್ದಾರೆ.////