ಕೋಟೆ ಕದನದಲ್ಲಿ ಪಿಸಿ ಗದ್ದಿಗೌಡರ್ ಮತ್ತೆ ಹವಾ

PC Gaddigoudar is Lead in Bagalkot

ಕೋಟೆ ಕದನದಲ್ಲಿ ಪಿಸಿ ಗದ್ದಿಗೌಡರ್ ಮತ್ತೆ ಹವಾ

ಬಾಗಲಕೋಟೆ : ವಾಸ್ತುಶಿಲ್ಪಗಳ ನಾಡು ಬಾಗಲಕೋಟೆಯ ಲೋಕ ಸಮರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಪಿಸಿ ಗದ್ದಿಗೌಡರ್ ಮತ್ತು ಅಭ್ಯರ್ಥಿ ಶ್ರೀಮತಿ ವೀಣಾ ಕಾಶಪ್ಪನವರ್ ನಡುವೆ ನಡೆದ ಕೋಟೆ ಕದನದಲ್ಲಿ ಫಲಿತಾಂಶದ ನಿರೀಕ್ಷೆಯಲ್ಲಿ ಕೋಟಿ ನಾಡಿನಲ್ಲಿ ಕೋಟೆಯ ಮೇಲೆ ಯಾರ ಬಾವುಟ ಎಂಬುದು ಪ್ರಶ್ನೆಯಾಗಿದೆ?

ಸತತ ಮೂರು ಬಾರಿ ಜಯ ಗಳಿಸಿರುವ ಶ್ರೀ ಪಿ ಸಿ ಗದ್ದಿಗೌಡರ್ ಲೋಕಸಮರದ ಫಲಿತಾಂಶದಲ್ಲಿ ಸಹ ಮುನ್ನಡೆಯಲ್ಲಿ ಇದ್ದಾರೆ.

ಬಾಗಲಕೋಟೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಹೊಂದಿದ್ದು ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರಿದ್ದು 2 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ನಾಯಕರಿದ್ದು ಆಯಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸತತ ಪ್ರಯತ್ನಿಸಿರುವುದು ಗಮನಾರ್ಹ.

ಮೈತ್ರಿ ಅಭ್ಯರ್ಥಿ ಶ್ರೀಮತಿ ವೀಣಾ ಕಾಶಪ್ಪನವರ್ ಅನ್ನ ಗೆಲ್ಲಿಸಲು ಬಡವರ ಬಂಧು, ಮಾಜಿ ಮುಖ್ಯಮಂತ್ರಿಗಳು ಬದಾಮಿ ಶಾಸಕರಾದ ಶ್ರೀ ಸಿದ್ದರಾಮಯ್ಯ ಅವರು ಸತತ ಬಿರುಸಿನ ಪ್ರಚಾರ ನಡೆಸಿದರೂ ಸಹ ಬಿಜೆಪಿ ಕೋಟೆಯಲ್ಲಿ ಕೈ ಬಾವುಟ ಹಾರಿಸಲು ಅವರ ತಂತ್ರಗಾರಿಕೆ ಜನರ ಮೇಲೆ ಯಾವುದೇ ಪರಿಣಾಮವನ್ನು ಬೀರಲಿಲ್ಲ ಎಂಬುದು ಫಲಿತಾಂಶದಲ್ಲಿ ನಿರೀಕ್ಷೆಯಲ್ಲಿ ನೋಡಬಹುದಾಗಿದೆ.

ಮೋದಿ ಅಬ್ಬರದ ಫಲವಾಗಿ ಮತ್ತು ಸತತ ಮೂರು ಸಾರಿ ಗೆಲುವನ್ನ ಸಾಧಿಸಿ ಗೆಲುವಿನ ಸರ್ದಾರ ಎನಿಸಿಕೊಂಡು ಅಭಿವೃದ್ಧಿಪರ ಕಾರ್ಯಯೋಜನೆಗಳ ಮಾಡಿದರು ಪಿಸಿ ಗದ್ದಿಗೌಡರ್ ಅವರು ಮಾಡಿದ ಸಾಧನೆಗಳಿಂದಾಗಿ ಕೋಟಿ ನಾಡಿನಲ್ಲಿ ಮತ್ತೆ ಬಿಜೆಪಿ ಮುನ್ನಡೆಯನ್ನು ಸಾಧಿಸುತ್ತಿದ್ದು ರಾಜ್ಯದ ಜನತೆ ಗಮನ ಸೆಳೆಯುತ್ತಿದೆ.////

Latest News

Latest News