Karnataka Corona: ಕರ್ನಾಟಕದಲ್ಲಿ 288 ಹೊಸ ಕೊರೊನಾ ಪ್ರಕರಣಗಳು! ಬೆಂಗಳೂರಿನಲ್ಲಿ ಎಷ್ಟು?
Karnataka Corona Updates: ಕರ್ನಾಟಕದಲ್ಲಿ ಹೊಸದಾಗಿ 288 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ.
Corona Cases in Karnataka: ಕರ್ನಾಟಕದಲ್ಲಿ ನಿನ್ನೆ 10,701 ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ 288 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಲ್ಲಿ ಬೆಂಗಳೂರು (Bengaluru) ನಗರದಲ್ಲಿ 143, ಬಳ್ಳಾರಿಯಲ್ಲಿ 18, ಚಿಕ್ಕಮಗಳೂರಿನಲ್ಲಿ 13, ಶಿವಮೊಗ್ಗದಲ್ಲಿ 46, ಮೈಸೂರಿನಲ್ಲಿ 46 ಜನರು ಕೊರೊನಾ ಸೋಂಕಿಗೆ ಒಳಪಟ್ಟಿದ್ದಾರೆ..
ಬೆಂಗಳೂರು ಗ್ರಾಮಾಂತರದಲ್ಲಿ 11 ಮಂದಿ, ಕಲಬುರಗಿಯಲ್ಲಿ 9 ಮಂದಿ, ಕೋಲಾರದಲ್ಲಿ 6 ಮಂದಿ, ಚಿತ್ರದುರ್ಗದಲ್ಲಿ 4 ಮಂದಿ ಹಾಗೂ ದಾವಣಗೆರೆಯಲ್ಲಿ 3 ಮಂದಿಗೆ ಸೋಂಕು ತಗುಲಿದೆ.
ರಾಜ್ಯದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 1,37ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿನ ಪ್ರಮಾಣ 2.23. ನಿನ್ನೆ ಒಂದೇ ದಿನ 158 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸುತ್ತೇವೆ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕರ್ನಾಟಕದಲ್ಲಿ ಪ್ರತಿದಿನ ಕೊರೊನಾ ಪ್ರಕರಣಗಳು 300 ರ ಸಮೀಪದಲ್ಲಿದೆ. ವಿಧಾನಸಭಾ ಚುನಾವಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆರೋಗ್ಯ ಇಲಾಖೆಯನ್ನು ಆತಂಕಕ್ಕೆ ದೂಡಿದೆ.
ಹೊಸ ನಿರ್ಬಂಧಗಳು
ಮುಂದಿನ ದಿನಗಳಲ್ಲಿ ಚುನಾವಣಾ ಪ್ರಚಾರದ ಕಾವು ಶುರುವಾಗಲಿದೆ. ಈ ಸಮಯದಲ್ಲಿ ಒಂದೆಡೆ ಹೆಚ್ಚು ಜನ ಜಮಾಯಿಸಿದರೆ ಕೊರೊನಾ ಹರಡುವ ಭೀತಿ ಎದುರಾಗಿದೆ. ವೈರಸ್ ಹರಡುವುದು ಮುಂದುವರಿದರೆ, ಆರೋಗ್ಯ ಇಲಾಖೆ ಹೊಸ ನಿರ್ಬಂಧಗಳನ್ನು ವಿಧಿಸುವ ನಿರೀಕ್ಷೆಯಿದೆ.
288 new corona cases in Karnataka
Follow us On
Google News |