Welcome To Kannada News Today

ಬೆಂಗಳೂರಿನ 32 ಹಾಟ್​ಸ್ಪಾಟ್​​​ ಸ್ಥಳಗಳು ಇವೆ ನೋಡಿ, ಬಿಬಿಎಂಪಿ ಆದೇಶ

32 wards have been identified as hotspots In Bangalore

🌐 Kannada News :

ಬೆಂಗಳೂರಿನಲ್ಲಿ 32 ವಾರ್ಡ್​​ಗಳನ್ನು ಹಾಟ್​ಸ್ಪಾಟ್ ಎಂದು ಗುರುತಿಸಲಾಗಿದೆ.

ಬೆಂಗಳೂರು : ದೇಶದಾದ್ಯಂತ ಎರಡನೇ ಬಾರಿ ಲಾಕ್ ಡೌನ್ ವಿಸ್ತರಬೇ ಬಳಿಕವೂ ಕೊರೋನಾ ಆರ್ಭಟ ಮೆರೆದಿದೆ, ಸೋಂಕಿತರ ಅಂಕಿ ಬದಲಾಗುತ್ತಲೇ ಇದೆ, ಕರ್ನಾಟಕದಲ್ಲಿ ಕೊರೋನಾ ವೈರಸ್​​ ಸೋಂಕಿತರು ಕ್ರಮೇಣ ಹೆಚ್ಚುತ್ತಿದ್ದಾರೆ. ಬೆಂಗಳೂರು, ಮೈಸೂರು, ಬೆಳಗಾವಿ, ಬಾಗಲಕೋಟೆ, ಬೀದರ್​​​, ಕಲಬುರ್ಗಿ ಸೇರಿದಂತೆ ರಾಜ್ಯದ ಹಲವೆಡೆ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ.

ಈ ನಡುವೆ ನಿನ್ನೆ ಬೃಹತ್​​ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳುರು ನಗರದಲ್ಲಿ 38 ವಾರ್ಡ್​​ಗಳನ್ನು ಹಾಟ್​​ಸ್ಪಾಟ್ ಎಂದು ಗುರುತಿಸಿತ್ತು. ಇಂದು 6 ವಾರ್ಡ್ ಗಳನ್ನೂ ಕೈ ಬಿಟ್ಟ ಪಾಲಿಕೆ ಕೇವಲ 32 ವಾರ್ಡ್​ಗಳನ್ನು ಮಾತ್ರ ಹಾಟ್​​ಸ್ಪಾಟ್​​ ಎಂದು ಘೋಷಿಸಿದೆ.

ದಕ್ಷಿಣ ಮತ್ತು ಪೂರ್ವ ವಲಯ 9 ವಾರ್ಡ್ ಗಳು, ಮಹದೇವಪುರ ಮತ್ತು ಪಶ್ಚಿಮ ವಲಯ ತಲಾ 5 ವಾರ್ಡ್ ಗಳು, ಯಲಹಂಕ 2 ವಾರ್ಡ್ ಗಳು, ಬೊಮ್ಮನಹಳ್ಳಿ ಮತ್ತು ಆರ್ ಆರ್ ನಗರ ವಲಯದ ತಲಾ 1 ವಾರ್ಡ್​ಗಳು ಬೆಂಗಳೂರಿನ ಕೊರೋನಾ ಹಾಟ್​ಸ್ಪಾಟ್​​ಗಳು ಎಂದು ಗುರುತಿಸಲ್ಪಟ್ಟಿವೆ.

ಬೆಂಗಳೂರಿನ 32 ಹಾಟ್​ಸ್ಪಾಟ್​​​ ಸ್ಥಳಗಳು
ಬೆಂಗಳೂರಿನ 32 ಹಾಟ್​ಸ್ಪಾಟ್​​​ ಸ್ಥಳಗಳು

ಬೆಂಗಳೂರಿನ 32 ಹಾಟ್​ಸ್ಪಾಟ್​​​ ಸ್ಥಳಗಳು

  • ಬೊಮ್ಮನಹಳ್ಳಿ ಝೋನ್ ನ ಅಡಿ ಸಿಂಗಸಂದ್ರ ವಾರ್ಡ್ ಸೇರುತ್ತದೆ.
  • ಮಹದೇವಪುರ ಝೋನ್ ನ ಹಗದೂರು ವಾರ್ಡ್, ಗರುಡಾಚಾರ್ ಪಾಳ್ಯ ವಾರ್ಡ್, ವರ್ತೂರು ವಾರ್ಡ್, ಹೂಡಿ ವಾರ್ಡ್, ಹೊರಮಾವು ವಾರ್ಡ್ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.
  • ಇನ್ನು ಈಸ್ಟ್ ಝೋನ್ ನಲ್ಲಿ ವಸಂತ್ ನಗರ ವಾರ್ಡ್, ಲಿಂಗರಾಜಪುರ ವಾರ್ಡ್, ಜೀವನ್‌ಭಿಮಾ ನಗರ ವಾರ್ಡ್, ರಾಧಾಕೃಷ್ಣ ಟೆಂಪಲ್ ವಾರ್ಡ್, ಸಿ.ವಿ.ರಾಮನ್ ನಗರ ವಾರ್ಡ್, ರಾಮಸ್ವಾಮಿ ಪಾಳ್ಯ ವಾರ್ಡ್, ಮಾರುತ ಸೇವಾ ನಗರ ವಾರ್ಡ್, ದೊಮ್ಮಲೂರು ವಾರ್ಡ್, ಸಂಪಂಗಿರಾಮನಗರ ವಾರ್ಡ್ ಗಳು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.
  • ಸೌಥ್ ಝೋನ್ ನ ಸುಧಾಮನಗರ ವಾರ್ಡ್ ಸೇರಿದಂತೆ ಕರೀಸಂದ್ರ ವಾರ್ಡ್, ಈಜಿಪುರ ವಾರ್ಡ್, ಗುರಪ್ಪನಪಾಳ್ಯ ವಾರ್ಡ್, ಅತ್ತಿಗುಪ್ಪೆ ವಾರ್ಡ್, ಶಾಕಾಂಬರಿ ನಗರ ವಾರ್ಡ್, ಜೆ.ಪಿ.ನಗರ ವಾರ್ಡ್, ಬಾಪೂಜಿನಗರ ವಾರ್ಡ್, ಹೊಸಹಳ್ಳಿ ವಾರ್ಡ್ ಗಳನ್ನೂ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.
  • ವೆಸ್ಟ್ ಝೋನ್ ನ ಅಡಿಯಲ್ಲಿ ನಾಗಪುರ ವಾರ್ಡ್, ಸುಭಾಶ್ ನಗರ ವಾರ್ಡ್, ಶಿವನಗರ ವಾರ್ಡ್, ಪಾದರಾಯನಪುರ ವಾರ್ಡ್, ಕೆ.ಆರ್.ಮರ್ಕೆಟ್ ವಾರ್ಡ್ ಗಳು ಹಾತ್ ಸ್ಪಾಟ್.
  • ಯಲಹಂಕ ಝೋನ್ ನಲ್ಲಿ ಥಣಿಸಂದ್ರ ವಾರ್ಡ್, ಬ್ಯಾಟರಾಯನಪುರ ವಾರ್ಡ್
    ಆರ್ ಆರ್ ನಗರ ಝೋನ್ ಆರ್. ಆರ್. ನಗರ ವಾರ್ಡ್ ಗಳನ್ನು ಬಿಬಿಎಂಪಿ ಹಾಟ್ ಸ್ಪಾಟ್ ಎಂದು ಗುರುತಿಸಿದೆ.

Web Title : 32 wards have been identified as hotspots In Bangalore

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.