Bengaluru: ಟಿಪ್ಪರ್ ಲಾರಿ ಡಿಕ್ಕಿಯಾಗಿ 7 ಕಾರುಗಳು ಜಖಂ, ಬೆಂಗಳೂರು ಹೊರವಲಯ ದೇವನಹಳ್ಳಿ ಬಳಿ ಸರಣಿ ಅಪಘಾತ!

ದೇವನಹಳ್ಳಿ ಬಳಿ ಟಿಪ್ಪರ್ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ (Accident) ಬಿಎಂಡಬ್ಲ್ಯು ಸೇರಿದಂತೆ 7 ಕಾರುಗಳು ಜಖಂಗೊಂಡಿವೆ (7 cars damaged) ಈ ಸರಣಿ ಅಪಘಾತದಿಂದ ಭಾರೀ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.

Devanahalli / Bengaluru (Kannada News) ದೇವನಹಳ್ಳಿ ಬಳಿ ಟಿಪ್ಪರ್ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ (Accident) ಬಿಎಂಡಬ್ಲ್ಯು ಸೇರಿದಂತೆ 7 ಕಾರುಗಳು ಜಖಂಗೊಂಡಿವೆ (7 cars damaged) ಈ ಸರಣಿ ಅಪಘಾತದಿಂದ ಭಾರೀ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.

ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ ಪ್ರದೇಶದಲ್ಲಿ ಸಿಗ್ನಲ್‌ನಲ್ಲಿ ಕಾರು, ದ್ವಿಚಕ್ರವಾಹನ, ಆಟೊಗಳಂತಹ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ನಿಂತಿದ್ದವು. ಆಗ ಬೆಂಗಳೂರಿನಿಂದ ದೇವನಹಳ್ಳಿ ಕಡೆಗೆ ಟಿಪ್ಪರ್ ಲಾರಿಯೊಂದು ಬರುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಲಾರಿ ಸಿಗ್ನಲ್‌ನಲ್ಲಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ.

ಸಿಗ್ನಲ್‌ನಲ್ಲಿದ್ದ ಏಳು ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಈ ಅವಘಡದಲ್ಲಿ ಬಿಎಂಡಬ್ಲ್ಯು ಐಷಾರಾಮಿ ಕಾರು, ಸ್ಯಾಂಟ್ರೋ ಕಾರು, ಎಟಿಯೋಸ್ ಲಿವಾ ಕಾರು, ಸ್ವಿಫ್ಟ್ ಕಾರು ಸೇರಿದಂತೆ 7 ಕಾರುಗಳು ಮುಂಭಾಗ ಹಾಗೂ ಹಿಂಭಾಗ ಜಖಂಗೊಂಡಿವೆ. ಲಾರಿಯ ಮುಂಭಾಗಕ್ಕೂ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Bengaluru: ಟಿಪ್ಪರ್ ಲಾರಿ ಡಿಕ್ಕಿಯಾಗಿ 7 ಕಾರುಗಳು ಜಖಂ, ಬೆಂಗಳೂರು ಹೊರವಲಯ ದೇವನಹಳ್ಳಿ ಬಳಿ ಸರಣಿ ಅಪಘಾತ! - Kannada News

Accident Near Devanahalli - Bengaluruಈ ಸರಣಿ ಅಪಘಾತಗಳಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಕಿಲೋಮೀಟರ್ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ವಾಹನ ಸವಾರರು ಪರದಾಡಿದರು. ಈ ಬಗ್ಗೆ ಮಾಹಿತಿ ಪಡೆದ ದೇವನಹಳ್ಳಿ ಸಂಚಾರ ಪೊಲೀಸರು (Devanahalli Traffic Police) ಸ್ಥಳಕ್ಕೆ ಧಾವಿಸಿ ಸಂಚಾರ ಮುಕ್ತಗೊಳಿಸಿದರು

ನಂತರ ಪೊಲೀಸರು ಅಪಘಾತಕ್ಕೆ ಕಾರಣವಾದ ಲಾರಿಯನ್ನು ಜಪ್ತಿ ಮಾಡಿದ್ದಾರೆ. ನಂತರ ಪೊಲೀಸರು ಅಪಘಾತಕ್ಕೀಡಾದ ಕಾರನ್ನು ಹೊರತೆಗೆದು ಸಂಚಾರ ಸುಗಮಗೊಳಿಸಿದರು. ಅಪಘಾತದಿಂದ ಸುಮಾರು ಒಂದು ಗಂಟೆ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

7 cars including a BMW were damaged in an accident near Bengaluru Devanahalli

Follow us On

FaceBook Google News

Advertisement

Bengaluru: ಟಿಪ್ಪರ್ ಲಾರಿ ಡಿಕ್ಕಿಯಾಗಿ 7 ಕಾರುಗಳು ಜಖಂ, ಬೆಂಗಳೂರು ಹೊರವಲಯ ದೇವನಹಳ್ಳಿ ಬಳಿ ಸರಣಿ ಅಪಘಾತ! - Kannada News

Read More News Today