ಹಿಂದೂಗಳಿಂದ ಕಸಿದಿರುವ ಎಲ್ಲಾ ದೇವಸ್ಥಾನಗಳನ್ನು ಮರಳಿ ಪಡೆಯಲು ಕೇಂದ್ರೀಯ ಕಾನೂನನ್ನು ರೂಪಿಸಬೇಕು !

‘ತಾಜಮಹಲ್’ಅಲ್ಲ ‘ತೇಜೋಮಹಾಲಯ’, ‘ಕುತುಬಮಿನಾರ್’ಅಲ್ಲ ‘ವಿಷ್ಣುಸ್ತಂಭ !’ ಈ ಕುರಿತು ವಿಶೇಷ ಸಂವಾದ !

Online News Today Team

ಹಿಂದೂಗಳಿಂದ ಕಸಿದಿರುವ ಎಲ್ಲಾ ದೇವಸ್ಥಾನಗಳನ್ನು ಮರಳಿ ಪಡೆಯಲು ಕೇಂದ್ರೀಯ ಕಾನೂನನ್ನು ರೂಪಿಸಬೇಕು ! – ನ್ಯಾಯವಾದಿ ಸತೀಶ ದೇಶಪಾಂಡೆ, ಇತಿಹಾಸ ಅಭ್ಯಾಸಕರು

ಕುತುಬುದ್ದೀನ್ ಐಬಕ್ ಈತ ಕುತುಬಮಿನಾರ್ ನಿರ್ಮಿಸಿದ್ದ ಎಂಬುದು ಅಪ್ಪಟ ಸುಳ್ಳು ಪ್ರಚಾರವಾಗಿದೆ, ಇದು ಅನೇಕ ಸಾಕ್ಷ್ಯಗಳ ಆಧಾರದಲ್ಲಿ ಸಾಬೀತಾಗಬಹುದು. ಪ್ರಸಿದ್ಧ ಇತಿಹಾಸಕಾರ ಮಾನ್ಯ ಪು.ನಾ. ಓಕ್ ಅವರ ಸಂಶೋಧನೆಯಿಂದಾಗಿ ಇದು ‘ತಾಜಮಹಲ್’ ಅಲ್ಲ ‘ತೇಜೋಮಹಾಲಯ’ ಎಂದು ಖಡಾಖಂಡಿವಾಗಿ ಹೇಳಬಹುದು.

ಶಹಜಹಾನನು ತಾಜಮಹಲ್ ನಿರ್ಮಿಸಿರುವುದರ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಇಸ್ಲಾಮಿಕ್ ಆಕ್ರಮಣಕಾರರು ಸಾವಿರಾರು ಹಿಂದೂ ದೇವಾಲಯಗಳನ್ನು ನಾಶ ಮಾಡಿದರು ಮತ್ತು ವಶಪಡಿಸಿಕೊಂಡರು. ಒಂದೊಂದೇ ದೇವಸ್ಥಾನಕ್ಕಾಗಿ ೩೦-೩೫ ವರ್ಷಗಳ ನ್ಯಾಯಾಂಗ ಹೋರಾಟ ಮಾಡುವ ಬದಲು ಹಿಂದೂ ದೇವಾಲಯಗಳನ್ನು ಮರಳಿ ಪಡೆಯಲು ಸಂಸತ್ತಿನಲ್ಲಿ ಕಾನೂನು ರೂಪಿಸಬೇಕು.

ಹಿಂದುತ್ವವಾದಿ ಪಕ್ಷಕ್ಕೆ ಬಹುಮತ ಇರುವುದರಿಂದ ಇದು ಸುಲಭವಾಗಿ ಸಾಧ್ಯ, ಎಂದು ಇತಿಹಾಸ ಅಧ್ಯಯನಕಾರರು ಹಾಗೂ ನ್ಯಾಯವಾದಿ ಸತೀಶ ದೇಶಪಾಂಡೆ ಇವರು ಸ್ಪಷ್ಟವಾಗಿ ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ತಾಜಮಹಲ್’ ಅಲ್ಲ ‘ತೇಜೋಮಹಾಲಯ’, ‘ಕುತುಬಮಿನಾರ್’ ಅಲ್ಲ ‘ವಿಷ್ಣುಸ್ತಂಭ’ !’ ಎಂಬ ವಿಶೇಷ ಆನ್‌ಲೈನ್ ಸಂವಾದದಲ್ಲಿ ಮಾತನಾಡುತ್ತಿದ್ದರು,

‘ಭಾರತೀಯ ಪುರಾತತ್ವ ಇಲಾಖೆಯು ೧೯೭೦ ರಿಂದ ಇಲ್ಲಿಯವರೆಗೆ ಇಂಟಕ್ ಮತ್ತು ಆಗಾಖಾನ್ ಕಮಿಟಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮತ್ತೊಂದೆಡೆ ಪಠ್ಯಪುಸ್ತಕಗಳಿಂದ ಹಿಂದೂಗಳಿಗೆ ಸುಳ್ಳು ಇತಿಹಾಸವನ್ನು ಕಲಿಸಲಾಗುತ್ತಿದೆ. ನಮ್ಮ ದೇವಾಲಯಗಳು ಮತ್ತು ಇತಿಹಾಸವನ್ನು ಮರೆಮಾಚಲು ಯೋಜಿತ ಪ್ರಯತ್ನಗಳನ್ನು ಮಾಡಲಾಯಿತು.

ಸರಕಾರವು ಹಿಂದೂಗಳ ಐತಿಹಾಸಿಕ ಪರಂಪರೆ ಮತ್ತು ದೇವಾಲಯಗಳನ್ನು ಸಂಶೋಧಿಸಬೇಕು ಮತ್ತು ಅವುಗಳನ್ನು ಎಲ್ಲರಿಗಾಗಿ ಮುಕ್ತಗೊಳಿಸಬೇಕು; ಆದರೆ ದೇಶದ ಪುರಾತತ್ವ ಇಲಾಖೆಯೂ ರಾಜಕೀಯದಲ್ಲಿ ಸಿಲುಕಿದೆ. ಅಲ್ಪಸಂಖ್ಯಾತರ ಓಲೈಕೆಯಿಂದಾಗಿ ಮುಸಲ್ಮಾನ ಆಕ್ರಮಣಕಾರರು ವಶಕ್ಕೆ ಪಡೆದಿದ್ದ ಅನೇಕ ಹಿಂದೂ ವಾಸ್ತುಗಳು ಇಂದಿಗೂ ಹಾಗೆಯೇ ಇದೆ’, ಎಂದು ‘ದೌಪದಿ ಡ್ರೀಮ್ ಟ್ರಸ್ಟ್’ನ ಸಂಸ್ಥಾಪಕಿ ನೀರಾ ಮಿಶ್ರಾ ಹೇಳಿದರು.

ಈ ಸಮಯದಲ್ಲಿ ‘ದೆಹಲಿ ಉಚ್ಚ ನ್ಯಾಯಾಲಯ’ದ ನ್ಯಾಯವಾದಿ ಅಮಿತಾ ಸಚದೇವಾ ಇವರು ಮಾತನಾಡುತ್ತಾ, ಇಂದು ಇಸ್ಲಾಮಿಕ್ ರಾಜರು ನಿರ್ಮಿಸಿರುವುದಾಗಿ ಹೇಳಲಾಗುತ್ತಿರುವ ಧಾರ್ಮಿಕ ಸ್ಥಳಗಳು ವಾಸ್ತವದಲ್ಲಿ ಪ್ರಾಚೀನ ಹಿಂದೂಗಳ ಧಾರ್ಮಿಕ ಸ್ಥಳಗಳಾಗಿವೆ.

ಹೆಚ್ಚಿನ ಹಿಂದೂಗಳಿಗೆ ಇದು ತಿಳಿದಿಲ್ಲ. ಆದ್ದರಿಂದ ಹಿಂದೂಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಇಂದು ದೇವಸ್ಥಾನಗಳಲ್ಲಿನ ಹಣ ಸರಕಾರದ ಭ್ರಷ್ಟಾಚಾರಕ್ಕೆ ಬಳಕೆಯಾಗುತ್ತಿದೆ. ಇದನ್ನು ಹಿಂದೂಗಳು ವಿರೋಧಿಸಬೇಕು. ಕುತುಬಮಿನಾರ್ ಅನ್ನು ಹಿಂದೂ ಮತ್ತು ಜೈನರ 27 ದೇವಾಲಯಗಳನ್ನು ಕೆಡವಿ ನಿರ್ಮಿಸಲಾಗಿದೆ, ಎಂದು ಭಾರತೀಯ ಪುರಾತತ್ವ ಇಲಾಖೆಯೇ ಪ್ರಕಟಿಸಿದ ಪುಸ್ತಕದಲ್ಲಿ ಹೇಳಲಾಗಿದೆ; ಆದರೆ ಅದು ನ್ಯಾಯಾಲಯದಲ್ಲಿ ಈ ಪುಸ್ತಕದಲ್ಲಿನ ಸತ್ಯದ ವಿರುದ್ಧವಾದ ನಿಲುವನ್ನು ತಳೆದಿದೆ. ಇದರ ವಿರುದ್ಧ ಧ್ವನಿ ಎತ್ತಬೇಕು’ ಎಂದು ಹೇಳಿದರು.

A central law should be enacted to reclaim all the temples that have been torn down by the Hindus

Follow Us on : Google News | Facebook | Twitter | YouTube