ಗಂಗಮ್ಮನಗುಡಿ ರಹಸ್ಯ : ಎಣ್ಣೆ ಪಾರ್ಟಿ ವೇಳೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

ಗೆಳೆಯರೇ ಕೊಲೆಗೈದಿರುವ ಘಟನೆ ಬೆಂಗಳೂರು ಗಂಗಮ್ಮನಗುಡಿಯಲ್ಲಿ‌ ನಡೆದಿದ್ದು, ಕಾರ್ತಿಕ್(25) ಹತ್ಯೆಯಾದ ಯುವಕ.

ಗಂಗಮ್ಮನಗುಡಿ ರಹಸ್ಯ : ಎಣ್ಣೆ ಪಾರ್ಟಿ ವೇಳೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

( Kannada News Today ) : ಬೆಂಗಳೂರು : ಏನೇನುಕ್ಕೋ ಪೈಪೋಟಿ ಮಾಡೋದು ನೋಡಿದ್ದೇವೆ, ಕೇಳಿದ್ದೇವೇ, ಆದ್ರೆ ಈ ಸ್ಟ್ರೋರಿ ಸ್ವಲ್ಪ ಡಿಫರೆಂಟ್, ಇಲ್ಲಿ ಕೊಲೆಯಾಗಿರೋ ಯುವಕ ಕೊಲೆಯಾಗಿದ್ದು ಅವನ ಗೆಳೆಯರಿಂದಲೇ ಅನ್ನೋದು ಟ್ವಿಸ್ಟ್.

ಹೌದು, ಎಣ್ಣೆ ನೆತ್ತಿಗೇರುತ್ತಿದ್ದಂತೆ ವಾದ ಶುರುವಾಗಿ ಕೊಲೆಯಲ್ಲಿ ಅಂತ್ಯ ಆಗಿದೆ, ಅದು ಕಾರಣ ಮಾತ್ರ ಕೆಲಸಕ್ಕೆ ಬಾರದ್ದು, ಏರಿಯಾದಲ್ಲಿ ನಂದೇ ಹವಾ ಇರಬೇಕು ಅಂತ ಅವ್ನು, ಇಲ್ಲಾ ಹವಾ ಮಾಡೋದಾದ್ರೆ ನಾನೇ ಮಾಡ್ಬೇಕು ಅಂತ ಇವನು..

ಕೊನೆಗೆ ಅಲ್ಲಿ ಒಂದು ಡೆಡ್ ಬಾಡಿ ಬಿದ್ದ ಮೇಲೆ ಎಲ್ಲಾ ಗಪ್ ಚುಪ್….

ಇನ್ನು ಸ್ಟೋರಿಗೆ ಹೋಗೋದಾದ್ರೆ ಬೆಂಗಳೂರಿನ ಗಂಗಮ್ಮನಗುಡಿ ಪ್ರದೇಶದಲ್ಲಿ ಯುವಕರ ಗುಂಪೊಂದು ಆತನ ಸ್ನೇಹಿತನನ್ನೇ ಹತ್ಯೆ ಮಾಡಿದೆ. ಕಾರ್ತಿಕ್ (25) ಎಂಬಾತನೇ ಕೊಲೆಯಾದ ಹೈದ.

ದೀಪಾವಳಿ ಆಲ್ವಾ, ಹಬ್ಬದ ವಿಶೇಷ ಎಲ್ರೂ ಎಣ್ಣೆ ಪಾರ್ಟಿ ಮಾಡವ್ರೆ, ನಶೆ ಸ್ವಲ್ಪ ಸ್ವಲ್ಪ ಏರ್ತಾ ಇದ್ದಂತೆ, ಅವರವರ ನಡುವೆ ಕಿರಿಕ್ ಸ್ಟಾರ್ಟ್ ಆಗಿದೆ.

ಹಂಗೆ ಮಾತಾಡ್ತಾ, ಮಾತಾಡ್ತಾ ಈ ಏರಿಯಾದಲ್ಲಿ ಹವಾ ಮೇಂಟೈನ್ ಮಾಡೋದ್ರ ಬಗ್ಗೆ ಮಾತು ಬೆಳೆದಿದೆ, ಹವಾ ಮಾಡೋದಾದ್ರೆ ನಾನ್ ಮಾಡಬೇಕು ಅಂತ ಅವನು, ಇಲ್ಲಾ ಏನಿದ್ರೂ ಹವಾ ನಂದೇ ಆಗಿರಬೇಕು ಅಂತ ಇವ್ನು.

ಕೊನೆಗೆ ಅಶೋಕ್ ಅಂಡ್ ಗ್ಯಾಂಗ್ ಕೋಪ ನೆತ್ತಿಗೇರಿ ಕಾರ್ತಿಕ್ ಅನ್ನು ತರಕಾರಿ ಕತ್ತರಿಸುವ ಚಾಕುವಿನಿಂದ ಕ್ರೂರವಾಗಿ ಕೊಂದಿದ್ದಾರೆ.

ಸದ್ಯ, ಈ ಪ್ರಕರಣವನ್ನು ಗಂಗಮ್ಮನಗುಡಿ ಠಾಣೆಯಲ್ಲಿ ದಾಖಲಿಸಲಾಗಿದೆ. ಅಶೋಕ್ ಮತ್ತು ಆತನ ಪುಡಿ ಗ್ಯಾಂಗ್ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Web Title : A young man Killed By His friends in Bangalore Gangammanagudi

Scroll Down To More News Today