ಪ್ರಜೆಗಳಿಗೆ, ಪ್ರಜಾಪ್ರಭುತ್ವಕ್ಕೆ, ಸದನಕ್ಕೆ ಮಾಡಿದ ಅಗೌರವ: ವಿಧಾನ ಪರಿಷತ್ತನ್ನು ಅಮಾನತ್ತಿನಲ್ಲಿಡಿ: ಆಮ್ ಆದ್ಮಿ ಪಕ್ಷ ಆಗ್ರಹ

ಜನಪ್ರತಿನಿಧಿಗಳಿಗೆ ಗೌರವ - ಮರ್ಯಾದೆಗಳಿವೆ ಎಂಬುದನ್ನ ಅರಿಯದ ಅರಿವುಗೇಡಿಗಳಿಂದ ಇಂದು ವಿಧಾನಪರಿಷತ್‌ನಲ್ಲಿ ನಡೆದ ಘಟನೆ ನಿಜಕ್ಕೂ ಮತದಾರರಾದ ನಾವೆಲ್ಲರೂ ತಲೆತಗ್ಗಿಸಬೇಕಾದ ವಿಚಾರ. ಈ ಘಟನೆ ಪ್ರಜೆಗಳಿಗೆ, ಪ್ರಜಾಪ್ರಭುತ್ವಕ್ಕೆ, ಸದನಕ್ಕೆ ಮಾಡಿದ ಅಗೌರವ ಎಂದು ಬೆಂಗಳೂರು ಆಮ್ ಆದ್ಮಿ ಪಕ್ಷ ಕಿಡಿಕಾರಿದೆ.

(Kannada News) : ಜನಪ್ರತಿನಿಧಿಗಳಿಗೆ ಗೌರವ – ಮರ್ಯಾದೆಗಳಿವೆ ಎಂಬುದನ್ನ ಅರಿಯದ ಅರಿವುಗೇಡಿಗಳಿಂದ ಇಂದು ವಿಧಾನಪರಿಷತ್‌ನಲ್ಲಿ ನಡೆದ ಘಟನೆ ನಿಜಕ್ಕೂ ಮತದಾರರಾದ ನಾವೆಲ್ಲರೂ ತಲೆತಗ್ಗಿಸಬೇಕಾದ ವಿಚಾರ. ಈ ಘಟನೆ ಪ್ರಜೆಗಳಿಗೆ, ಪ್ರಜಾಪ್ರಭುತ್ವಕ್ಕೆ, ಸದನಕ್ಕೆ ಮಾಡಿದ ಅಗೌರವ ಎಂದು ಬೆಂಗಳೂರು ಆಮ್ ಆದ್ಮಿ ಪಕ್ಷ ಕಿಡಿಕಾರಿದೆ.

ಸದನವು ನಮ್ಮ ಪ್ರಜಾಪ್ರಭುತ್ವದ ಪ್ರಾತಿನಿಧಿಕ ಕೇಂದ್ರ. ಅಲ್ಲಿ ಜನರಿಗಾಗಿ ದನಿ ಮೊಳಗಬೇಕೇ ಹೊರತು ಅಧಿಕಾರದ ಆಸೆಗಾಗಿ ಅಲ್ಲ. ಇಂತಹ ಸಂಕಷ್ಟದ ಹೊತ್ತಿನಲ್ಲಿ ಜನರ ಸಮಸ್ಯೆಗಳನ್ನು ಚರ್ಚೆ ಮಾಡದೆ ಕೇವಲ ಸಭಾಪತಿ ಸ್ಥಾನಕ್ಕಾಗಿ ಕೊರಳಪಟ್ಟಿ ಹಿಡಿದುಕೊಂಡು ಹೊಡೆದಾಡುವ ಮಟ್ಟಕ್ಕೆ ವಿಧಾನ ಪರಿಷತ್ ಹೋಗುತ್ತದೆ ಎಂದರೆ ಅದರ ಔಚಿತ್ಯದ ಬಗ್ಗೆ ನಿಜಕ್ಕೂ ಪ್ರಶ್ನೆ ಮೂಡುತ್ತದೆ.

ಚಿಂತಕರ, ಸಾಹಿತಿಗಳ, ಕ್ರೀಡಾಪಟುಗಳ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಂದ ತುಂಬಿ ವಿಧಾನ ಸಭೆಗಿಂತ ಹೆಚ್ಚಿನ ತೂಕ‌ ಹೊಂದಿದ್ದ ವಿಧಾನ ಪರಿಷತ್ ಇಂದು ಈ ಅಧೋಗತಿಗೆ ಇಳಿಯಲು ಜೆಸಿಬಿ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳೇ ಕಾರಣ.

ಮಾರ್ಷಲ್‌ಗಳ ಕೊರಳ ಪಟ್ಟಿ ಹಿಡಿದು ಎಳೆದಾಡಿದ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರನ್ನು ಹಾಗೂ ಅವಕಾಶವಾದಿ ರಾಜಕಾರಣ ಮಾಡುತ್ತಿರುವ ಎಲ್ಲಾ ಸದಸ್ಯರನ್ನು ಉಚ್ಚಾಟಿಸಬೇಕಾಗಿ ಅಥವಾ ಅಮಾನತ್ತಿನಲ್ಲಿ ಇಡಬೇಕಾಗಿ ರಾಜ್ಯಪಾಲರಲ್ಲಿ ಮವಿ ಮಾಡುತ್ತೇವೆ ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

Scroll Down To More News Today