ಶಿವಾನಂದ ಸ್ಟೀಲ್ ಬ್ರಿಜ್ ಬಳಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ, ಬಂಧನ

ಶಿವಾನಂದ ಮೇಲ್ಸೇತುವೆಯ ಬಳಿ ಆಮ್ ಆದ್ಮಿ ಪಕ್ಷದ ನೂರಾರು ಕಾರ್ಯಕರ್ತರು 40% ಕಮಿಷನ್ ಮೇಲ್ಸೇತುವೆ ಎಂಬ ನಾಮ ಫಲಕವನ್ನು ಉದ್ಘಾಟಿಸುವ ಮೂಲಕ

ಬೆಂಗಳೂರು (Bengaluru) ಆಗಸ್ಟ್ 29: ಶಿವಾನಂದ ಮೇಲ್ಸೇತುವೆಯ ಬಳಿ ಆಮ್ ಆದ್ಮಿ ಪಕ್ಷದ ನೂರಾರು ಕಾರ್ಯಕರ್ತರು 40% ಕಮಿಷನ್ ಮೇಲ್ಸೇತುವೆ ಎಂಬ ನಾಮ ಫಲಕವನ್ನು ಉದ್ಘಾಟಿಸುವ ಮೂಲಕ ಬೆಂಗಳೂರಿಗರಿಗೆ ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ಪೊಲೀಸರು ಪಕ್ಷದ  ಕಾರ್ಯಕರ್ತರುಗಳನ್ನು ಬಂಧಿಸಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ವಹಿಸಿ ಮಾತನಾಡಿದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಈ ಸ್ಟೀಲ್ ಮೇಲ್ಸೇತುವೆ ಯು 19 ಕೋಟಿಗೆ ಆರಂಭಗೊಂಡು ಇಂದು 7 ವರ್ಷಗಳ ನತರ 39ಕೋಟಿ ವೆಚ್ಚ ಮಾಡಿಯೂ ಸಹ ಅತ್ಯಂತ ಕಳಪೆ ಕಾಮಗಾರಿಯ ಮೂಲಕ ಇಂದು ಬಿಜೆಪಿ ಸರಕಾರ ಬೆಂಗಳೂರಿಗರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ ಎಂದು ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

ಸುದೀಪ್ ಚಿತ್ರ ಕೋಟಿಗಬ್ಬ-3 ತೆಲುಗು ರಿಲೀಸ್ ಗೆ ರೆಡಿ

ಶಿವಾನಂದ ಸ್ಟೀಲ್ ಬ್ರಿಜ್ ಬಳಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ, ಬಂಧನ - Kannada News

ಬೆಂಗಳೂರಿನಲ್ಲಿ ಇದೇ ರೀತಿಯ ಅನೇಕ  ಕಾಮಗಾರಿಗಳನ್ನು ಬಿಜೆಪಿ ಸರ್ಕಾರವು 3ಮತ್ತು 4ಪಟ್ಟು ಹೆಚ್ಚಿಸಿ ಸಮಯ ವ್ಯರ್ಥ ಮಾಡಿ ಎಂದು 40 %ಕಮಿಷನ್ ದಂಧೆಯಲ್ಲಿ ಮುಳುಗಿರುವುದನ್ನು ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮೋಹನ್ ದಾಸರಿ ಎಚ್ಚರಿಸಿದರು.

ಪಕ್ಷದ ಬೆಂಗಳೂರು ಘಟಕದ ಸಂಘಟನಾ ಕಾರ್ಯದರ್ಶಿಗಳಾದ ಸುರೇಶ್ ರಾಥೋಡ್ ಮಾತನಾಡಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. 40% ಲಂಚವನ್ನ ಪಡೆದುಕೊಂಡು ರಾಜ್ಯವನ್ನು ಲೂಟಿ ಮಾಡುತ್ತಿದೆ. ಬಿಬಿಎಂಪಿ ಚುನಾವಣೆ ಎಲ್ಲಿ ಸೋಲನ್ನ ಅನುಭವಿಸುವ ಭಯದಿಂದ ಬಿಬಿಎಂಪಿ ಚುನಾವಣೆ ಮುಂದಕ್ಕೆ ತಳ್ಳುತ್ತಲೇ ಬರುತ್ತಿದೆ. ನಗರದ ನಾಗರೀಕರು ಜೆಸಿಬಿ ಪಕ್ಷಗಳಿಗೆ ಬುದ್ಧಿ ಕಲಿಸಲು ಸೂಕ್ತ ಸಮಯ ಕಾಯುತ್ತಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕುವುದರಿಂದ ಯಾವುದೇ ಲಾಭವಿಲ್ಲ. ನಮ್ಮ ಹೋರಾಟ ಇದೇ ರೀತಿ ಮುಂದುವರೆಯಲಿದೆ ಎಂದರು.

‘ಜವಾನ್’ ಚಿತ್ರಕ್ಕಾಗಿ ವಿಜಯ್ ಸೇತುಪತಿ ಶಾಕಿಂಗ್ ಸಂಭಾವನೆ

ಪ್ರತಿಭಟನೆಯಲ್ಲಿ  ಪಕ್ಷದ ಉಪಾಧ್ಯಕ್ಷ ವಿಜಯ್ ಶರ್ಮಾ, ಮುಖಂಡರುಗಳಾದ ಜಗದೀಶ್ ವಿ ಸದಂ, ಸುರೇಶ್ ರಾಥೋಡ್, ಚನ್ನಪ್ಪಗೌಡ ನಲ್ಲೂರು,ಶಾಶಾವಲಿ , ಉಷಾ ಮೋಹನ್, ಸುಹಾಸಿನಿ ಪಣಿರಾಜ್ ,ಗೋಪಿನಾಥ್ ಸೇರಿದಂತೆ ಅನೇಕ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

Aam Aadmi Party protest near Sivananda Steel Bridge

Follow us On

FaceBook Google News

Advertisement

ಶಿವಾನಂದ ಸ್ಟೀಲ್ ಬ್ರಿಜ್ ಬಳಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ, ಬಂಧನ - Kannada News

Read More News Today