ದೊಡ್ಡಬಳ್ಳಾಪುರ: 726ನೇ ದಿನಕ್ಕೆ ಕಾಲಿಟ್ಟ ಅನ್ನ ದಾಸೋಹ ಕಾರ್ಯಕ್ರಮ

ಇಂದು 726 ನೇ ದಿನದ ಅನ್ನದಾಸೋಹ ದಾನಿಗಳಾಗಿ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಶಶಿಕಲಾ ನಾಗರಾಜು ಮತ್ತು ಕುಟುಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Online News Today Team

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದರ್ಗಜೋಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 726 ದಿನಗಳಿಂದ ಸತತವಾಗಿ ಸಾಗುತ್ತಿರುವ ಅನ್ನ ದಾಸೋಹ ಕಾರ್ಯಕ್ರಮ.

ಇಂದು 726 ನೇ ದಿನದ ಅನ್ನದಾಸೋಹ ದಾನಿಗಳಾಗಿ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಶಶಿಕಲಾ ನಾಗರಾಜು ಮತ್ತು ಕುಟುಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೊರೋನಾ ಸಂದರ್ಭದಲ್ಲಿ ಮೊದಲಾದ ಅನ್ನ ದಾಸೋಹ ಕಾರ್ಯಕ್ರಮ ಇಂದಿಗೂ ಕೂಡ ಸತತವಾಗಿ ಸಾಗುತ್ತಿದ್ದು ಸ್ಥಳೀಯ ಕಡುಬಡವರಿಗೆ ನಿರಾಶ್ರಿತರಿಗೆ ಹಸಿವನ್ನು ನೀಗಿಸುವ ಕಾರ್ಯಕ್ರಮ ಇದಾಗಿದೆ. ಅನ್ನ ದಾಸೋಹ ಕಾರ್ಯಕ್ರಮದ ರೂವಾರಿ ಮಲ್ಲೇಶ್ ಮಾತನಾಡಿ ದಾನಿಗಳ ನೆರವಿನಿಂದ ಈ ಕಾರ್ಯಕ್ರಮವು ಸಾಗುತ್ತಿದ್ದು ಹಸಿದ ಹೊಟ್ಟೆಗಳಿಗೆ ಊಟ ನೀಡುವ ಕಾರ್ಯಕ್ರಮ ಇದಾಗಿದೆ ಈ ಕಾರ್ಯಕ್ರಮಕ್ಕೆ ದಾನಿಗಳು ಮನಸ್ಪೂರ್ವಕವಾಗಿ ಭಾಗವಹಿಸುತ್ತಿದ್ದು ಹಸಿದ ಹೊಟ್ಟೆಗಳಿಗೆ ಆಹಾರ ನೀಡುವ ಕೆಲಸ ಇಲ್ಲಿ ನಡೆಯುತ್ತಿದೆ ಈ ಕಾರ್ಯವು ಮುಂದೆಯೂ ಕೂಡ ಹೀಗೆ ಸಾಗುವುದು ಎಂದು ತಿಳಿಸಿದರು.726ನೇ ದಿನಕ್ಕೆ ಕಾಲಿಟ್ಟ ಅನ್ನ ದಾಸೋಹ ಕಾರ್ಯಕ್ರಮ

726 ನೇ ದಿನದ ದಾನಿಗಳಾದ ಶಶಿಕಲ ನಾಗರಾಜು ಮಾತನಾಡಿ ಈ ಕಾರ್ಯಕ್ಕೆ ನಾವು ಸದಾ ಬೆಂಬಲವಾಗಿದ್ದು ಬಡವರ ಹಸಿವು ನೀಗಿಸುವ ಕೆಲಸಕ್ಕೆ ಮುಂದಾಗಿದ್ದೇವೆ. ಮುಂದೆಯೂ ಕೂಡ ಮಲ್ಲೇಶ್ ಮತ್ತು ತಂಡಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ, ಸಮಾಜಮುಖಿ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ದೊರೆಯುವುದು ಎಂದು ತಿಳಿಸಿದರು .

ಕಾರ್ಯಕ್ರಮದಲ್ಲಿ ಮನೋಜ್ ನಾಗರಾಜ್ ಶ್ರೀಮತಿ ಆಶಾ, ಮಲ್ಲೇಶ್ ಮತ್ತು ತಂಡ ಉಪಸ್ಥಿತರಿದ್ದರು.

ಹರೀಶ್, ದೊಡ್ಡಬಳ್ಳಾಪುರ

Follow Us on : Google News | Facebook | Twitter | YouTube