ಸರ್ಕಾರಿ ಶಾಲೆ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಮತ್ತೊಂದು ಸಿಹಿಸುದ್ದಿ! ಪ್ರತಿ ಶನಿವಾರ ಇದೆ ಸರ್ಪ್ರೈಸ್

ಗ್ರಾಮೀಣ ಭಾಗದ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗಾಗಿ ಸರಕಾರ ಹೊಸ ಸೌಲಭ್ಯ ವನ್ನು ಘೋಷಣೆ ಮಾಡಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.

Bengaluru, Karnataka, India
Edited By: Satish Raj Goravigere

ಇಂದು ಪ್ರತಿಯೊಬ್ಬರು ಕೂಡ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾರೆ. ಹೌದು ಇಂದು ಸರಿಯಾದ ಶಿಕ್ಷಣ (Education) ಪಡೆದರೆ ಅಷ್ಟೇ ಮುಂದೆ ಉತ್ತಮ ಜಾಬ್ ಗಿಟ್ಟಿಸಿಕೊಳ್ಳಲು ಸಾಧ್ಯ ಇರಲಿದೆ. ಹಾಗಾಗಿ ಪ್ರತಿಯೊಬ್ಬ ಮಕ್ಕಳಿಗೆ ಶಿಕ್ಷಣ ಬಹಳ ಮುಖ್ಯ.

ಇಂದು ಸರಕಾರ ಕೂಡ ಕಡ್ಡಾಯ ಶಿಕ್ಷಣ ಮಾಡಿದ್ದು ಮಕ್ಕಳನ್ನು ಸರಕಾರಿ ಶಾಲೆಯತ್ತ (Government School) ಆಕರ್ಷಣೆ ಮಾಡಲು ಹಲವು ರೀತಿಯ ಯೋಜನೆಯನ್ನು ರೂಪಿಸುತ್ತಲೇ ಬಂದಿದೆ. ಈಗಾಗಲೇ ಬಡವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ (Free Education) ನೀಡ್ತಾ ಇದೆ.‌

Government School

ಅದೇ ರೀತಿ ಗ್ರಾಮೀಣ ಭಾಗದ ಕನ್ನಡ ಮಾಧ್ಯಮದಲ್ಲಿ (Kannada Medium) ಓದುವ ವಿದ್ಯಾರ್ಥಿಗಳಿಗಾಗಿ ಸರಕಾರ ಹೊಸ ಸೌಲಭ್ಯ ವನ್ನು ಘೋಷಣೆ ಮಾಡಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.

ನಕಲಿ ದಾಖಲೆ ನೀಡಿ ಬೋಗಸ್ ಲೇಬರ್ ಕಾರ್ಡ್ ಪಡೆದಿರುವವರಿಗೆ ಸರ್ಕಾರದಿಂದ ಖಡಕ್ ಸೂಚನೆ!

ಇಂದು ಎಲ್ಲ ಕಡೆ ಇಂಗ್ಲೀಷ್ ವ್ಯಾಮೋಹ ಹೆಚ್ಚಾಗಿದೆ ಎನ್ನಬಹುದು. ಹೌದು ಇಂಗ್ಲೀಷ್ ಮಾಧ್ಯಮದ (English Medium) ಮಕ್ಕಳ ಜೊತೆ ಕನ್ನಡ ಮಾಧ್ಯಮ ಮಕ್ಕಳು ಬೆರೆಯಲು ಹಿಂಜರಿಯುತ್ತಾರೆ. ಇಂಗ್ಲಿಷ್ ‌ಕಲಿಕೆಯಿಂದ ಹಿಂದಿರುವ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಕಷ್ಟವಾಗ್ತ ಇದೆ. ಹೀಗಾಗಿ ಸರಕಾರ ಹೊಸ ಸೌಲಭ್ಯ ಘೋಷಣೆ ಮಾಡಿದೆ.

ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಸಂಖ್ಯೆ ಕೂಡ ಹೆಚ್ಚಾಗಿದ್ದು ರಾಜ್ಯದ ಸರ್ಕಾರಿ ಶಾಲೆಗಳನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಹೊಸ ಹೆಜ್ಜೆಯನ್ನ ಇಡಲು‌ ಮುಂದಾಗಿದೆ. ಅದಕ್ಕಾಗಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್‌ ಇಂಗ್ಲಿಷ್‌ ತರಗತಿಗಳನ್ನು (Spoken English Class) ಆರಂಭಿಸಲು ಶಿಕ್ಷಣ ಇಲಾಖೆಯು ಮುಂದಾಗಿದೆ

ಹೌದು 1 ರಿಂದ 8ನೇ ತರಗತಿಯ ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲು ಮುಂದಾಗಿದ್ದು ಇದರಿಂದ ಸರಕಾರಿ ಶಾಲಾ ಮಕ್ಕಳಿಗೆ ಹೆಚ್ಚು ಉಪಯೋಗವಾಗಲಿದೆ. ಖಾಸಗಿ ಶಾಲೆಯಲ್ಲಿ‌ ಸಿಗುವಂತಹ ಸೌಲಭ್ಯ ಗಳು ಸರಕಾರಿ ಶಾಲೆಯಲ್ಲೂ ಸಿಕ್ಕರೂ ವಿದ್ಯಾರ್ಥಿಗಳ ಕಲಿಕೆಗೆ ಸುಲಭ ವಾಗಲಿದೆ. ಹಾಗಾಗಿ ಇದೀಗ ವಾರದಲ್ಲಿ ಒಂದು ದಿನ ಶನಿವಾರ ಅಥವಾ ವಾರದಲ್ಲಿ ಎರಡು ದಿನ ಮಕ್ಕಳಿಗೆ ಸ್ಪೋಕನ್‌ ಇಂಗ್ಲಿಷ್ (Spoken English Class) ನೀಡಲು ಮುಂದಾಗಿದೆ

ಇಂತಹ ಮಹಿಳೆಯರಿಗೆ ಇನ್ಮುಂದೆ ಸಿಗೋದಿಲ್ಲ ಗೃಹಲಕ್ಷ್ಮಿ ಹಣ! ಏನಿದು ಸರ್ಕಾರದ ಹೊಸ ರೂಲ್ಸ್

Another Good news from the education department for government school childrenಸರಕಾರಿ ಶಾಲೆಗಳಲ್ಲಿ‌ ದಾಖಲಾತಿ ಹೆಚ್ಚಳಕ್ಕೂ ಪ್ರಯತ್ನ

ಇಂದು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಸಂಖ್ಯೆ ಹೆಚ್ಚಾಗಿದೆ.‌ ಹೌದು ಖಾಸಗಿ ಶಾಲೆಯಲ್ಲಿ ಸಿಗುವ ಶಿಕ್ಷಣ ಸರಕಾರಿ‌ ಶಾಲೆಯಲ್ಲಿ ಸಿಗುವುದಿಲ್ಲ ಎಂದು‌ ಪೋಷಕರು ಇಂಗ್ಲೀಷ್ ಮದ್ಯಮಕ್ಕೆ ಕಳುಹಿಸುತ್ತಾರೆ. ಆದರೆ ಇಂತಹ ಸೌಲಭ್ಯ ಜಾರಿ ಬಂದರೆ ಸರಕಾರಿ ಶಾಲೆಯಲ್ಲಿ ದಾಖಲಾತಿ ಸಂಖ್ಯೆ ಕೂಡ ಹೆಚ್ಚಾಗಲಿದೆ. ಮಕ್ಕಳಿಗೆ ಇಂಗ್ಲಿಷ್ ಹೇಳಿ ಕೊಡಲು ಅಗತ್ಯ ಇದ್ದರೆ ಸಂಪನ್ಮೂಲ ವ್ಯಕ್ತಿ ಆಯ್ಕೆಗೂ ಅವಕಾಶ ಕಲ್ಪಿಸಿ ಕೊಡಲಾಗಿದೆ.

ಸೆಪ್ಟೆಂಬರ್ 30ರ ನಂತರ ಮುಲಾಜಿಲ್ಲದೆ ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್! ಸರ್ಕಾರ ಖಡಕ್ ನಿರ್ಧಾರ

ಒಟ್ಟಿನಲ್ಲಿ ಕನ್ನಡ ಮಾಧ್ಯಮ ಮಕ್ಕಳಿಗೆ ಈ ಸೌಲಭ್ಯ ಬಹಳಷ್ಟು ಪ್ರಯೋಜನಕಾರಿಯಾಗಿದ್ದು ಮುಂದೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕೂಡ ಸಹಾಯಕ ವಾಗಲಿದೆ

Another Good news from the education department for government school children