ಕೆ.ಆರ್.ಪುರಂ : ಬಿಬಿಎಂಪಿ ಮಾರ್ಷಲ್​ ಮೇಲೆ ಹಲ್ಲೆ, ಆರೋಪಿಗಳ ಬಂಧನ

ಮಾಸ್ಕ್ ಧರಿಸದಿದ್ದಕ್ಕೆ ದಂಡ ಕಟ್ಟುವಂತೆ ಕೇಳಲಾಯಿತು. 1000 ಸಾವಿರ ದಂಡ ಕಟ್ಟುವಂತೆ ಹೇಳಿದ್ದಕ್ಕೆ ಜಗಳಕ್ಕೆ ನಿಂತ ಕೋಲಾರ ಮೂಲದ ಯುವಕರು

ಐಪಿಸಿ 353, 324, 506, 504 ಅಡಿಯಲ್ಲಿ ಪ್ರಕರಣ ದಾಖಲಿಸಿ ಮಾಸ್ಕ್ ಹಾಕದ್ದಕ್ಕೆ ದಂಡ ಕಟ್ಟುವಂತೆ ತಿಳಿಸಿದ್ದಾರೆ. 1000 ಸಾವಿರ ದಂಡ ಕಟ್ಟುವಂತೆ ಹೇಳಿದ್ದಕ್ಕೆ ಜಗಳಕ್ಕೆ ನಿಂತ ಆ ಯುವಕರು ಯಾಕೆ ದಂಡ ಕಟ್ಟಬೇಕು ಎಂದು ಪ್ರಶ್ನಿಸಿ ಅಂತಾ ಜಟಾಪಟಿ ಮಾರ್ಷಲ್ ಗಳ ಜೊತೆ ಜಗಳ ನಡೆಸಿದ್ದಾರೆ.

( Kannada News ) ಬೆಂಗಳೂರು – ಕೆ.ಆರ್.ಪುರಂ : ರಾಷ್ಟ್ರದಲ್ಲಿ ತಲೆ ಎತ್ತಿರುವ ಮಹಾಮಾರಿ ಇಂದ ಬಚಾವಾಗಲು ಇರೋ ಒಂದೇ ಒಂದು ಮಾರ್ಗ ಸಾಮಾಜಿಕ ಅಂತರ ಕಾಪಾಡಿಕೊಳ್ಳೋದು ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು. ಇದೆ ಕಾರಣಕ್ಕೆ ರಾಜ್ಯ ಸರ್ಕಾರ ಸದ್ಯದ ಪರಿಸ್ಥಿತಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಆದೇಶಿಸಿದೆ.

ಈ ಬಗ್ಗೆ ಬಿಬಿಎಂಪಿ ಇದೆ ಕಾರ್ಯಕ್ಕೆ ಮಾರ್ಷಲ್ ಗಳನ್ನೂ ನೇಮಕ ಮಾಡಿಕೊಂಡು, ಮಾಸ್ಕ್ ಇಲ್ಲದವರ ಮೇಲೆ ದಂಡವಿಧಿಸಲು ಮುಂದಾಗಿದೆ, ಆದರೆ ಕೋಲಾರ ಜಿಲ್ಲೆ ಮುಳಬಾಗಿಲ ನಿವಾಸಿಗಳಾದ ಅರುಣ್​, ಜಗದೀಶ್  ಮಾಸ್ಕ್​ ಇಲ್ಲದೇ ಬೈಕ್​ ಸಂಚಾರ ಮಾಡುತ್ತಿದ್ದದ್ದನ್ನು ಗಮನಿಸಿದ ಮಾರ್ಷಲ್ ಗಳು ಬೈಕ್ ಸವಾರರನ್ನು ತಡೆದ ಮಾಸ್ಕ್​ ಹಾಕುವಂತೆ ತಾಕೀತು ಮಾಡಿದ್ದಾರೆ.

ಅಲ್ಲದೇ, ಐಪಿಸಿ 353, 324, 506, 504 ಅಡಿಯಲ್ಲಿ ಪ್ರಕರಣ ದಾಖಲಿಸಿ ಮಾಸ್ಕ್ ಹಾಕದ್ದಕ್ಕೆ ದಂಡ ಕಟ್ಟುವಂತೆ ತಿಳಿಸಿದ್ದಾರೆ. 1000 ಸಾವಿರ ದಂಡ ಕಟ್ಟುವಂತೆ ಹೇಳಿದ್ದಕ್ಕೆ ಜಗಳಕ್ಕೆ ನಿಂತ ಆ ಯುವಕರು ಯಾಕೆ ದಂಡ ಕಟ್ಟಬೇಕು ಎಂದು ಪ್ರಶ್ನಿಸಿ ಮಾರ್ಷಲ್ ಗಳ ಜೊತೆ ಜಗಳ ನಡೆಸಿದ್ದಾರೆ.

ಅಲ್ಲದೇ ಇದೇ ವೇಳೆ ಮಾರ್ಷಲ್ ಗಳ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕೆಆರ್​ಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Scroll Down To More News Today