ಬೆಂಗಳೂರು ಸೇಪ್ ಸಿಟಿಯೋ? ಹಗರಣಗಳ ಸಿಟಿಯೋ? ಮೋಹನ್ ದಾಸರಿ ಪ್ರಶ್ನೆ

ಒಂದು ಸಿಸಿ ಟಿವಿ ಕ್ಯಾಮರಾ ಬೆಲೆ ದೆಹಲಿಯಲ್ಲಿ 40 ಸಾವಿರ ಬೆಂಗಳೂರಿನಲ್ಲಿ 8 ಲಕ್ಷ ಏನಿದರ ಮರ್ಮ, ಈ ಮೂಲಕ ಬೆಂಗಳೂರು ಸೇಪ್ ಸಿಟಿಯೋ? ಹಗರಣಗಳ ಸಿಟಿಯೋ? ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಪ್ರಶ್ನೆ ಮಾಡಿದ್ದಾರೆ

ಬೆಂಗಳೂರು ಸೇಪ್ ಸಿಟಿಯೋ? ಹಗರಣಗಳ ಸಿಟಿಯೋ? ಮೋಹನ್ ದಾಸರಿ ಪ್ರಶ್ನೆ

(Kannada News) : ಬೆಂಗಳೂರು : ಒಂದು ಸಿಸಿ ಟಿವಿ ಕ್ಯಾಮರಾ ಬೆಲೆ ದೆಹಲಿಯಲ್ಲಿ 40 ಸಾವಿರ ಬೆಂಗಳೂರಿನಲ್ಲಿ 8 ಲಕ್ಷ ಏನಿದರ ಮರ್ಮ, ಈ ಮೂಲಕ ಬೆಂಗಳೂರು ಸೇಪ್ ಸಿಟಿಯೋ? ಹಗರಣಗಳ ಸಿಟಿಯೋ? ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಪ್ರಶ್ನೆ ಮಾಡಿದ್ದಾರೆ

₹612 ಕೋಟಿ ಮೊತ್ತದ  ನಿಧಿಯನ್ನು ಬಳಸಿಕೊಂಡು ಬೆಂಗಳೂರು ವ್ಯಾಪ್ತಿಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸಿಸಿ ಟಿವಿ ಕ್ಯಮೆರಾ ನಿಗಾ ವ್ಯವಸ್ಥೆ ರೂಪಿಸುವ ಯೋಜನೆಗೂ ಮಸಿ ಬಳಿದ ರಾಜ್ಯ ರ‍್ಕಾರ ಹಾಗೂ ಅಧಿಕಾರಿಗಳ ನಡೆಗೆ ನಾಚಿಕೆಯಾಗಬೇಕು ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಕಿಡಿಕಾರಿದರು.

ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ದೆಹಲಿಯ ಆಮ್ ಆದ್ಮಿ ಪಕ್ಷ ಮಾಡಿದ ಮೊಟ್ಟ ಮೊದಲ ಕೆಲಸ ಎಂದರೆ ನರ‍್ಭಯಾ ನಿಧಿ ಬಳಸಿಕೊಂಡು ಪ್ರಮುಖ ಸ್ಥಳಗಳಲ್ಲಿ ಮೊದಲ ಹಂತದಲ್ಲಿ ಸುಮಾರು 1.4 ಲಕ್ಷ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದು, ದೆಹಲಿಯಲ್ಲಿ ಅಳವಡಿಸಿರುವ ಅತ್ಯುತ್ತಮ ಗುಣ ಮಟ್ಟದ ಸಿಸಿ ಟಿವಿ ಕ್ಯಾಮೆರಾ ಬೆಲೆ 40 ಸಾವಿರ, ಆದರೆ ನಮ್ಮಲ್ಲಿ 8 ಲಕ್ಷ! ಏನಿದರ ಮರ್ಮ ಎಂದು ಪ್ರಶ್ನಿಸಿದರು.

ಅತ್ಯುತ್ತಮ ಸರ್ಕಾರಿ ಸಂಸ್ಥೆ ಬಿಇಎಲ್ ದೆಹಲಿಯಲ್ಲಿ ಉತ್ತಮ ಗುಣಮಟ್ಟದ ಸೇವೆ ನೀಡಿದ್ದು, 1.4 ಲಕ್ಷ ಕ್ಯಾಮೆರಾಗಳಿಗೆ ಖರ್ಚಾಗಿರುವುದು 572 ಕೋಟಿ, ಬೆಂಗಳೂರಿನಲ್ಲಿ ಅಳವಡಿಸುತ್ತಿರುವ ಕೇವಲ 7500 ಕ್ಯಾಮೆರಾಗಳಿಗೆ ಏಕೆ 619 ಕೋಟಿ ಎಂದು ಪ್ರಶ್ನಿಸಿದರು.

ಹಗರಣದ ವಿರುದ್ದ ಮಾತನಾಡಿದ ಐಪಿಎಸ್ ಅಧಿಕಾರಿ ರೂಪ ಹಾಗೂ ಈ ಅಕ್ರಮದ ಆರೋಪ ಹೊತ್ತಿರುವ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರ ಈ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ,

ಆದ ಕಾರಣ ಸೂಕ್ತ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸುತ್ತಿದೆ ಎಂದರು. ಈ ಭ್ರಷ್ಟಾಚಾರದ ವಿರುದ್ದ ಆಮ್ ಆದ್ಮಿ ಪಕ್ಷದಿಂದ ಶನಿವಾರ (09.01.2020) ಬೆಳಿಗ್ಗೆ 11 ಗಂಟೆಗೆ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮೋಹನ್ ದಾಸರಿ ಅವರು ಮಾಹಿತಿ ನೀಡಿದರು.

Web Title : Bangalore is Safe City? Question by Mohan Dasari

Scroll Down To More News Today