Welcome To Kannada News Today

Big News : ಇಂದಿನಿಂದ ಮಾಸ್ಕ್ ಧರಿಸದೆ ಹೋದ್ರೆ 1 ಸಾವಿರ ದಂಡ

ಬೆಂಗಳೂರಿನಲ್ಲಿ ಮಾಸ್ಕ್ ಧರಿಸದವರಿಗೆ 1 ಸಾವಿರ ರೂ. ದಂಡ ಪ್ರಯೋಗ ಮಾಡಲು ಬಿಬಿಎಂಪಿಯಿಂದ ನಿನ್ನೆ ಸಂಜೆಯಿಂದಲೇ ಅಧಿಕೃತವಾಗಿ ಮಾರ್ಷಲ್​ಗಳಿಗೆ ಸೂಚನೆ.

( Kannada News ) ಬೆಂಗಳೂರು : ದಂಡಂ ದಶಗುಣಂ ಅನ್ನೋ ಮಾತು ಬಳಸದ ಹೊರತು ಯಾವುದೇ ನಿಯಮ ಫಾಲನೆ ಮಾಡೋಲ್ಲ ಅನ್ನೋದು ಸರ್ಕಾರಕ್ಕೆ ಗೊತ್ತಾದಂತಿದೆ, ಅದಕ್ಕೆ ಈ ಮಾಸ್ಕ್ ದಂಡ.

ಅಂದಹಾಗೆ ಇನ್ನು ಮೇಲೆ ನಾವು ನೀವೆಲ್ಲ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೆ, ಒಂದು ಸಾವಿರ ದಂಡ ಬೇಕಾಗುತ್ತದೆ, ಅಷ್ಟೇ ಅನ್ಕೊಂಡ್ರಾ…. ಇದೆ ರೀತಿ ಪದೇ ಪದೇ ಇದೆ ನಿರ್ಲಕ್ಷ್ಯ ತೋರಿದ್ರೆ ಕ್ರಿಮಿನಲ್ ಮೊಕದ್ದಮೆಯನ್ನು ಸಹ ಎದುರಿಸಬೇಕಾಗುತ್ತದೆ.

ಇನ್ಮುಂದೆ ರಾಜ್ಯಾದ್ಯಂತ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ನಿರ್ಲಕ್ಷ್ಯ ತೋರಿಸಿದರೆ ದುಬಾರಿ ದಂಡ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದಾಗಲೇ ಈ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಣೆ ಮಾಡಿದ್ದು, ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸಲಿಲ್ಲವಾದರೆ 1,000 ರೂ. ಹಾಗೂ ಇತರೆ ಪ್ರದೇಶಗಳಲ್ಲಿ ಮಾಸ್ಕ್ ಧರಿಸದಿದ್ರೆ 500 ರೂ. ದಂಡ ವಿಧಿಸಲಾಗುತ್ತದೆ.

ಈ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವರ ಪತ್ತೆಹಚ್ಚಲೆಂದೇ ಬಿಬಿಎಂಪಿ ಮಾರ್ಷಲ್​ಗಳನ್ನು ನೇಮಕಮಾಡಿಕೊಂಡಿದ್ದು, ಆ ಮಾರ್ಷಲ್​ಗಳಿಗೆ ಗಸ್ತು ತಿರುಗಲು ವಾಹನವನ್ನು ಸಹ ನೀಡಲಾಗಿದೆ. ಅಷ್ಟೇ ಅಲ್ಲದೆ ಈ ಬಗ್ಗೆ ಸರ್ಕಾರ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಬಿಬಿಎಂಪಿಗೆ ಸೂಚನೆ ನೀಡಿದೆ.

ಇನ್ನಾದರೂ ಹುಷಾರ್, ಮನೆಯಿಂದ ಹೊರಹೋಗುವ ಮುನ್ನ ಮಾಸ್ಕ್ ಧರಿಸಿರುವಿರೇ ಎಂದು ಖಾತ್ರಿ ಪಡಿಸಿಕೊಳ್ಳಿ, ಇಲ್ಲವಾದರೆ ದಂಡ ಕಟ್ಟಲು ಸಿದ್ದರಾಗಿ….

Contact for web design services Mobile