ಫ್ಲೈಓವರ್ ಮೇಲಿಂದ ನೋಟು ಚೆಲ್ಲಿದ ವ್ಯಕ್ತಿ, ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಫ್ಲೈ ಓವರ್ ಬಳಿ ನೋಟುಗಳ ಸುರಿಮಳೆ
Cash thrown from flyover: ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಫ್ಲೈ ಓವರ್ ಮೇಲಿಂದ ವ್ಯಕ್ತಿಯೊಬ್ಬ 10 ರೂಪಾಯಿ ನೋಟುಗಳನ್ನು ಎಸೆದಿದ್ದಾನೆ, ಸದ್ಯ ಈ ಘಟನೆಯ ವಿಡಿಯೋ ವೈರಲ್ ಆಗಿದೆ
Story Highlights
- ಫ್ಲೈಓವರ್ ಮೇಲಿಂದ ನೋಟು ಚೆಲ್ಲಿದ ವ್ಯಕ್ತಿ
- ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಫ್ಲೈ ಓವರ್ ಬಳಿ ನೋಟುಗಳ ಸುರಿಮಳೆ
- ಫ್ಲೈ ಓವರ್ ನಿಂದ ವ್ಯಕ್ತಿಯೊಬ್ಬ ರೂ.10 ನೋಟುಗಳನ್ನು ಎಸೆದಿದ್ದಾನೆ
- ಹಣ ಎಸೆದು ಸುದ್ದಿಯಾಗಿದ್ದ ಆತ ಅರುಣ್ ಎಂಬಾತ
Cash thrown from flyover (Kannada News): ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಫ್ಲೈಓವರ್ ಮೇಲಿಂದ ವ್ಯಕ್ತಿಯೊಬ್ಬ 10 ರೂಪಾಯಿ (10 Rupees Notes) ನೋಟುಗಳನ್ನು ಎಸೆದಿದ್ದಾನೆ, ಸದ್ಯ ಈ ಘಟನೆಯ ವಿಡಿಯೋ ವೈರಲ್ ಆಗಿದೆ (Video Goes Viral). ಫ್ಲೈ ಓವರ್ ನಿಂದ ವ್ಯಕ್ತಿಯೊಬ್ಬ ರೂ.10 ನೋಟುಗಳನ್ನು ಎಸೆದಿದ್ದಾನೆ. ಈ ವೇಳೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದರಿಂದ ಅಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ನಗರದ ಜನನಿಬಿಡ ಮಾರುಕಟ್ಟೆಯಲ್ಲಿ ಸೇತುವೆ ಮೇಲಿಂದ ನೋಟುಗಳನ್ನು ಎಸೆದಿದ್ದಾನೆ. ವ್ಯಕ್ತಿ ನೋಟುಗಳನ್ನು ಎಸೆಯುತ್ತಿದ್ದಾಗ ಕೆಲವರು ವಿಡಿಯೋ ಮಾಡಿದ್ದಾರೆ. ಕೆಲವರು ಆತನ ಬಳಿ ಹೋಗಿ ಹಣ ಕೊಡುವಂತೆ ಬೇಡಿಕೊಂಡರು.
ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಫ್ಲೈ ಓವರ್ ಬಳಿ ನೋಟುಗಳ ಸುರಿಮಳೆ
ಸೇತುವೆಯಿಂದ ಹಣವನ್ನು ಎಸೆದ ವ್ಯಕ್ತಿ ಯಾರು ಮತ್ತು ಅವನು ಏಕೆ ಮಾಡಿದನು ಎಂಬುದು ತಿಳಿಯುವಷ್ಟರಲ್ಲಿ ಆತ ಅಲ್ಲಿಂದ ಪರಾರಿಯಾಗಿದ್ದ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಹುಡುಕಾಟ ನಡೆಸಲು ಪ್ರಾರಂಭಿಸಿದರು.
ಕೊನೆಗೆ ಆತ ಯಾರು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ, ಕೆ.ಆರ್. ಮಾರುಕಟ್ಟೆ ಫ್ಲೈಓವರ್ (KR Market Flyover) ಮೇಲಿಂದ ಹಣ ಎಸೆದು ಸುದ್ದಿಯಾಗಿದ್ದ ಆತ ಅರುಣ್ (Arun) ಎಂಬಾತ ಎಂದು ತಿಳಿದು ಬಂದಿದೆ.
An unknown person allegedly threw cash (Rs. 10 notes)from KR Puram flyover in #Bengaluru. There was rush from people to collect the cash. It lead to frenzy. Cops are investigating and trying to identify the person #Karnataka pic.twitter.com/kx8mSxklsR
— Imran Khan (@KeypadGuerilla) January 24, 2023
ಫ್ಲೈಓವರ್ ಮೇಲಿಂದ ನೋಟು ಎಸೆದ ವ್ಯಕ್ತಿಗೆ ಪೊಲೀಸರು ನೋಟಿಸ್
ಸದ್ಯ ಪೊಲೀಸರು ಆತನಿಗೆ ನೋಟಿಸ್ (Police Notice & Registered Case) ನೀಡಿದ್ದಾರೆ. ಆತನ ಮೇಲೆ ಕೇಸ್ ಕೂಡ ದಾಖಲಾಗಿದೆ. ಈಗ ಎರಡು ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಒಂದರಲ್ಲಿ ೨೦೦ ರೂಪಾಯಿ, ಇನ್ನೊಂದರಲ್ಲಿ ೧೦೦ ರೂಪಾಯಿ ವರೆಗೆ ದಂಡವನ್ನು ಕಟ್ಟಿಸಿಕೊಳ್ಳಬಹುದಾಗಿದೆ. ಒಂದು ವೇಳೆ ೧೦೦ ರೂಪಾಯಿ ಕಟ್ಟಲು ಸಾಧ್ಯವಾಗದಿದ್ದರೆ ೮ ದಿನ ಸೆರೆವಾಸವನ್ನು ಅನುಭವಿಸಬೇಕಿದೆ.
Bengaluru Man Throws Cash Of Rs 10 From Bangalore KR Market Flyover