Viral Video: ಅಪಘಾತ ಮಾಡಿ ವೃದ್ಧನನ್ನು ರಸ್ತೆಯಲ್ಲಿ ಎಳೆದೊಯ್ದ ಬೈಕ್ ಸವಾರ
Biker Dragged Old Man: ಅಪಘಾತದ ನಂತರ ಬೆಂಗಳೂರು ರಸ್ತೆಯಲ್ಲಿ ಬೈಕ್ ಸವಾರನೊಬ್ಬ ವೃದ್ಧನನ್ನು ಎಳೆದೊಯ್ದ ಘಟನೆ ನಡೆದಿದೆ
Biker Dragged Old Man (Kannada News): ಬೆಂಗಳೂರು ಮಾಗಡಿ ರಸ್ತೆಯಲ್ಲಿ (Bengaluru Magadi Road) ಸಾಹಿಲ್ ಎಂಬ ಬೈಕ್ ಸವಾರ ಕಿಂಚಿತ್ತೂ ಮಾನವೀಯತೆ ಇಲ್ಲದೆ ವರ್ತಿಸಿದ್ದಾನೆ, ಅಪಘಾತ ಮಾಡಿದ್ದೂ (Accident) ಅಲ್ಲದೆ ವೃದ್ಧ ವ್ಯಕ್ತಿಯನ್ನು ರಸ್ತೆಯಲ್ಲಿ ಎಳೆದೊಯ್ದ ಭಯಾನಕ ಘಟನೆ ನಡೆದಿದೆ. ಸಾಹಿಲ್ ಏಕಾಏಕಿ ಬಂದು ಕಾರಿಗೆ ಡಿಕ್ಕಿ ಹೊಡೆದು (Scooter Rider) ಓಡಲು ಯತ್ನಿಸಿದ್ದಾನೆ. ಆದರೆ ಕಾರಿನ ಮಾಲೀಕ ತಡೆಯಲು ಯತ್ನಿಸಿದ್ದು ಈ ವೇಳೆ ಸ್ಕೂಟಿ ಹಿಂಬದಿ ಹಿಡಿದುಕೊಂಡ ವೃದ್ಧನನ್ನು (Dragged Old Man on Road) ಎಳೆದೊಯ್ದಿದ್ದಾನೆ. ಹಲವರು ಆತನನ್ನು ಹಿಂಬಾಲಿಸಿ ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವೃದ್ಧನನ್ನು ರಸ್ತೆಯಲ್ಲಿ ಎಳೆದೊಯ್ದ ಬೈಕ್ ಸವಾರ
ಅಷ್ಟರಲ್ಲಿ ಆ ಮೂಲಕ ಹೋಗುತ್ತಿದ್ದ ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನ ವ್ಯಕ್ತಿ ಅವನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ವೃದ್ಧನ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಪೊಲೀಸರು ಸಂತ್ರಸ್ತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.
Biker Dragged Old Man On Bengaluru Road After Accident
A horrible incident reported in #Bengaluru, a scooter rider hit a SUV on Tuesday afternoon, when questioned the scooter rider tried to escape & dragged the SUV driver for almost a km from Magadi Road toll gate to Hosahalli metro station. Police have detained him.@DeccanHerald pic.twitter.com/ekyOZT9wEZ
— Chaithanya (@ChaithanyaSwamy) January 17, 2023