ಮಗಳ ವರ್ತನೆ ಬಗ್ಗೆ ಪೊಲೀಸರು ಮತ್ತು ಮಾಧ್ಯಮದವರ ಕ್ಷಮೆ ಯಾಚಿಸಿದ ಶಾಸಕ ಅರವಿಂದ ಲಿಂಬಾವಳಿ
BJP MLA Aravind Limbavali Daughter: ಶಾಸಕ ಅರವಿಂದ ಲಿಂಬಾವಳಿ ಅವರು ಸಂಚಾರಿ ಪೊಲೀಸರು ಹಾಗೂ ಮಾಧ್ಯಮದವರ ಬಳಿ ಕ್ಷಮೆ ಯಾಚಿಸಿದ್ದಾರೆ. ನಿಯಮ ಉಲ್ಲಂಘಿಸಿ ಕಾರು ಚಲಾಯಿಸಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿಯನ್ನು ಸಂಚಾರ ಪೊಲೀಸರು ತಡೆದಿದ್ದರು.
BJP MLA Aravind Limbavali Daughter – ಬೆಂಗಳೂರು: ಕರ್ನಾಟಕದ ಆಡಳಿತಾರೂಢ ಪಕ್ಷದ ಶಾಸಕ ಅರವಿಂದ ಲಿಂಬಾವಳಿ ಅವರು ಸಂಚಾರಿ ಪೊಲೀಸರು ಹಾಗೂ ಮಾಧ್ಯಮದವರ ಬಳಿ ಕ್ಷಮೆ ಯಾಚಿಸಿದ್ದಾರೆ. ನಿಯಮ ಉಲ್ಲಂಘಿಸಿ ಕಾರು ಚಲಾಯಿಸಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿಯನ್ನು ಸಂಚಾರ ಪೊಲೀಸರು ತಡೆದಿದ್ದರು.
ಇದರೊಂದಿಗೆ ಆಕೆ ಪೊಲೀಸರ ಮೇಲೆ ಹರಿಹಾಯ್ದಿದ್ದರು.. ಈ ಘಟನೆಯನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿಯುತ್ತಿದ್ದ ಮಾಧ್ಯಮದ ಸಿಬ್ಬಂದಿಯೊಂದಿಗೂ ಆಕೆ ಅಸಭ್ಯವಾಗಿ ವರ್ತಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರು ತಮ್ಮ ಮಗಳ ವರ್ತನೆಗೆ ಪೊಲೀಸರು ಹಾಗೂ ಪತ್ರಕರ್ತರ ಬಳಿ ಕ್ಷಮೆ ಯಾಚಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಬಿಎಂಡಬ್ಲ್ಯು ಕಾರನ್ನು ಚಲಾಯಿಸುವಾಗ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದಾರೆ. ಪೊಲೀಸರು ಆಕೆಯ ಕಾರನ್ನು ತಡೆದು… ಕೊನೆಗೆ ಸ್ವಲ್ಪ ಸಮಯದ ರಂಪಾಟದ ಬಳಿಕ ಹಳೆಯ ದಂಡಗಳು ಸೇರಿ 10 ಸಾವಿರ ದಂಡ ವಿಧಿಸಲಾಗಿದೆ. ತಾನು ಶಾಸಕ ಲಿಂಬಾವಳಿ ಪುತ್ರಿ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು. ಸದ್ಯ ತನ್ನ ಬಳಿ ಹಣವಿಲ್ಲ, ಈಗ ದಂಡ ಕಟ್ಟಲ್ಲ ಎಂದು ಪಟ್ಟು ಹಿಡಿದಿದ್ದರು.
ಇಡೀ ಘಟನೆಯನ್ನು ರೆಕಾರ್ಡ್ ಮಾಡುತ್ತಿದ್ದ ಮಾಧ್ಯಮ ಪ್ರತಿನಿಧಿಗಳ ವಿರುದ್ಧವೂ ಅವರು ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಗಳ ವರ್ತನೆಗೆ ಶಾಸಕರು ಕ್ಷಮೆ ಯಾಚಿಸಿದ್ದಾರೆ.
Bjp Mla Apologies After Daughter Abuses Cops
Follow us On
Google News |