Aravind Limbavali; ಮನವಿ ಕೊಡಲು ಬಂದ ಮಹಿಳೆ ಮೇಲೆ ಅರವಿಂದ ಲಿಂಬಾವಳಿ ದರ್ಪ
Aravind Limbavali; ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರ ಬಳಿಗೆ ಮನವಿ ಕೊಡಲು ಬಂದ ಮಹಿಳೆ ಮೇಲೆ ಕೂಗಾಡಿರುವ ಘಟನೆ ಭಾರೀ ಟೀಕೆಗೆ ಕಾರಣವಾಗಿದೆ.
Aravind Limbavali : ಸಾಮಾನ್ಯವಾಗಿ ತಮ್ಮ ಕ್ಷೇತ್ರದ ಶಾಸಕರು ಕಂಡಾಗ ಸಾರ್ವಜನಿಕರು ಸಮಸ್ಯೆಗಳನ್ನು ಹೇಳಿಕೊಳ್ಳುವುದು, ಮನವಿ ಸಲ್ಲಿಸೋದು ಸಾಮಾನ್ಯ. ಕಾರಣ ಅವರ ಸಮಸ್ಯೆಗೆ ಅವರು ಸ್ಪಂದಿಸದೆ ಇನ್ಯಾರು ಸ್ಪಂದಿಸುತ್ತಾರೆ ? ಈಗೆ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ (MLA Aravind Limbavali) ಅವರ ಬಳಿಗೆ ಮನವಿ ಕೊಡಲು ಬಂದ ಮಹಿಳೆ ಮೇಲೆ ಕೂಗಾಡಿರುವ ಘಟನೆ ಭಾರೀ ಟೀಕೆಗೆ ಕಾರಣವಾಗಿದೆ.
ಶಾಸಕ ಅರವಿಂದ ಲಿಂಬಾವಳಿ ಬಳಿ ಮನವಿ ಕೊಡಲು ಬಂದಿದ್ದ ಮಹಿಳೆಗೆ ಅವಾಜ್ ಹಾಕಿ ಈಕೆಯನ್ನು ಪೊಲೀಸ್ ಠಾಣೆಯಲ್ಲಿ ಕೂರಿಸ್ರಿ ಅಂತ ಗದರಿದ್ದಾರೆ, ಆದರೆ ಆ ಮಹಿಳೆಯ ಮಾತನ್ನೇ ಕೇಳದೆ ಏಕಾಏಕಿ ಓರ್ವ ಜನಪ್ರತಿನಿಧಿ ಈಗೆ ವರ್ತಿಸಿದ್ದು ಎಷ್ಟು ಸರಿ ಎಂದು ಸ್ಥಳೀಯರು ಆಕ್ರೋಶಗೊಂಡಿದ್ದಾರೆ.
ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ, ಅಂತೆಯೇ ವರ್ತೂರು ಕೆರೆಯ ಕೋಡಿಯಿಂದ ಸಮಸ್ಯೆ ಸೃಷ್ಟಿಯಾಗಿದೆ. ಹಾನಿಗೊಳಗಾದ ಪ್ರದೇಶಗಳ ಭೇಟಿಗೆ ತೆರಳಿದ್ದ ಶಾಸಕರಿಗೆ ಮಹಿಳೆ ಮನವಿ ಸಲ್ಲಿಸಲು ಬಂದಿದ್ದರು, ಈ ವೇಳೆ ಶಾಸಕರು ಮಹಿಳೆಯೊಂದಿಗೆ ಈ ರೀತಿ ವರ್ತಿಸಿದ್ದಾರೆ.
BJP MLA Aravind Limbavali Yelling on Women
Follow us On
Google News |