Prasanna Foundations: ಪ್ರಸನ್ನ ಫೌಂಡೇಶನ್ಸ್ ನ ಪ್ರಸನ್ನ ಪಿ ಗೌಡ ರವರ 43ನೇ ಹುಟ್ಟುಹಬ್ಬದ ಆಚರಣೆ
Prasanna Foundations : ಸಮಾಜಸೇವಕರಾದ ಪ್ರಸನ್ನ ಪಿ ಗೌಡ ರವರ 43ನೇ ಹುಟ್ಟುಹಬ್ಬದ ಆಚರಣೆ ಯನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ತಾಲ್ಲೂಕಿನ ಆಶಾ ಕಾರ್ಯಕರ್ತೆಯರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು.
ಸಮಾಜಸೇವಕರಾದ ಪ್ರಸನ್ನ ಪಿ ಗೌಡ ರವರ 43ನೇ ಹುಟ್ಟುಹಬ್ಬದ ಆಚರಣೆ ಯನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ತಾಲ್ಲೂಕಿನ ಆಶಾ ಕಾರ್ಯಕರ್ತೆಯರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು.
ಕೊರೋನಾ ಸಂದರ್ಭದಲ್ಲಿ ವೈದ್ಯರಿಗೆ ಸಹಕರಿಸಿ ಅತಿಹೆಚ್ಚು ಶ್ರಮಪಟ್ಟು ಹಲವು ಜೀವಗಳನ್ನು ಉಳಿಸಿದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಸನ್ನ ಪಿ ಗೌಡ ರವರಿಗೆ ಹಲವು ಗಣ್ಯರು ಶುಭಕೋರಿದರು.
ಸ್ಥಳೀಯ ನಾಯಕರು, ಸಮಾಜಸೇವಕರು, ಯುವ ಮುಖಂಡರು, ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಸನ್ನ ಫೌಂಡೇಶನ್ಸ್ ನ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಪ್ರಸನ್ನ ಫೌಂಡೇಶನ್ಸ್ ನ ಸಂಸ್ಥಾಪಕರಾದ ಪ್ರಸನ್ನ ಪಿ ಗೌಡ ಮಾತನಾಡಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸದಾ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದ್ದೇನೆ ಮುಂದೆಯೂ ಕೂಡ ನಮ್ಮ ಫೌಂಡೇಶನ್ ವತಿಯಿಂದ ಸಮಾಜಮುಖೀ ಕಾರ್ಯಗಳು ನಡೆಯುತ್ತವೆ, ಪ್ರಸನ್ನ ಫೌಂಡೇಶನ್ ನ ಮುಖ್ಯ ಉದ್ದೇಶ ಸಮಾಜಪರ ಕೆಲಸ ಕಾರ್ಯಗಳನ್ನು ಮಾಡುವುದು, ನೊಂದವರ ಬಡವರ ಕಷ್ಟಗಳಿಗೆ ಸ್ಪಂದಿಸುವುದೇ ಆಗಿದೆ ಎಂದರು.
ಮುಂದೆಯೂ ಸಹ ಈ ರೀತಿ ಕಾರ್ಯಗಳನ್ನು ನಡೆಸಲಾಗುವುದು . ತಾಲೂಕಿನ ಜನತೆ ಹಾಗೂ ನೊಂದಬಡವರ ಕಷ್ಟಗಳಿಗೆ ಸ್ಪಂದಿಸಲು ಪ್ರಸನ್ನ ಫೌಂಡೇಶನ್ಸ್ ನ ಕಚೇರಿಯನ್ನು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ತೆರೆಯಲಾಗಿದೆ.
ಈ ಹುಟ್ಟುಹಬ್ಬದ ಆಚರಣೆಯಿಂದಾಗಿ ಇನ್ನಷ್ಟು ಹುಮ್ಮಸ್ಸು ತುಂಬಿದೆ ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಇನ್ನಷ್ಟು ಸೇವೆ ಸಲ್ಲಿಸುವ ಕಾರ್ಯ ಪ್ರಸನ್ನ ಫೌಂಡೇಶನ್ ವತಿಯಿಂದ ನಡೆಯುವುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರು ,ಯುವ ಮುಖಂಡರು ,ಪ್ರಸನ್ನ ಫೌಂಡೇಶನ್ಸ್ ನ ಸದಸ್ಯರು, ಪದಾಧಿಕಾರಿಗಳು ಹಾಗೂ ತಾಲ್ಲೂಕಿನ ಜನತೆ ಉಪಸ್ಥಿತರಿದ್ದರು.
Celebrating 43rd Birthday of Prasanna P Gowda, Founder of Prasanna Foundations
ಹರೀಶ್, ದೊಡ್ಡಬಳ್ಳಾಪುರ
Follow Us on : Google News | Facebook | Twitter | YouTube