ಅನ್ನದಾಸೋಹ ಸಮಿತಿಯೊಂದಿಗೆ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಜಯಂತೋತ್ಸವದ ಆಚರಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದರ್ಗಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸತತವಾಗಿ ನಡೆಯುತ್ತಿರುವ ಅನ್ನದಾಸೋಹ ಕಾರ್ಯಕ್ರಮದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆಯನ್ನು ದಾನಿಗಳ ನೆರವಿನಿಂದ ಆಚರಿಸಲಾಯಿತು

Online News Today Team

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದರ್ಗಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸತತವಾಗಿ ನಡೆಯುತ್ತಿರುವ ಅನ್ನದಾಸೋಹ ಕಾರ್ಯಕ್ರಮದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆಯನ್ನು ದಾನಿಗಳ ನೆರವಿನಿಂದ ಆಚರಿಸಲಾಯಿತು.

ಕರುನಾಡ ವಿಜಯ ಸೇನೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಘಟಕದ ವತಿಯಿಂದ ಭಾರತ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಜಯಂತೋತ್ಸವ ವನ್ನು ನಿರ್ಗತಿಕ ಕಡುಬಡವರಿಗೆ ಆಹಾರ ಹಂಚುವ ಮೂಲಕ ಆಚರಿಸಲಾಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪ ನಮನ ಸಲ್ಲಿಸುವ ಮೂಲಕ ಪ್ರಾರಂಭಿಸಲಾಯಿತು.

ದಾನಿಗಳಾದ ರಾಜಘಟ್ಟ ದೀಪುಗೌಡ ರವರು ಮಾತನಾಡಿ ಅಂಬೇಡ್ಕರ್ ರವರು ಶೋಷಿತ ವರ್ಗಗಳ ನಾಯಕ ಮಾತ್ರವಲ್ಲ ಅವರು ಎಲ್ಲಾ ಸಮುದಾಯಕ್ಕೂ ಸೇರಿದ ನಾಯಕರಾಗಿದ್ದಾರೆ ಭಾರತದಲ್ಲಿ ಜೀವಿಸುವ ಪ್ರತಿಯೊಬ್ಬರಿಗೂ ಅವರು ಬರೆದಿರುವ ಸಂವಿಧಾನ ಅತ್ಯವಶ್ಯಕವಾಗಿದೆ.

ಅಂಬೇಡ್ಕರ್ ರವರ ಹುಟ್ಟುಹಬ್ಬದ ದಿನವನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸುತ್ತಿರುವುದು ಸಂತೋಷದ ವಿಷಯವಾಗಿದೆ ಆ ಮಹಾನಾಯಕರ ಹುಟ್ಟುಹಬ್ಬದ ದಿನದಂದು ಅನ್ನ ದಾಸೋಹ ಕಾರ್ಯಕ್ರಮ ಏರ್ಪಡಿಸಿದ್ದು ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಮುಂದಿನ ದಿನಗಳಲ್ಲಿ ನಮ್ಮ ಕೈಲಾದ ಸಹಾಯವನ್ನು ಮಲ್ಲೇಶ್ ಮತ್ತು ತಂಡಕ್ಕೆ ನೀಡುವುದಾಗಿ ತಿಳಿಸಿದರು.

ಡಾ. ಬಿಆರ್ ಅಂಬೇಡ್ಕರ್ ಜಯಂತೋತ್ಸವದ ಆಚರಣೆ
ಡಾ. ಬಿಆರ್ ಅಂಬೇಡ್ಕರ್ ಜಯಂತೋತ್ಸವದ ಆಚರಣೆ

ಕಾರ್ಯಕ್ರಮದ ಆಯೋಜಕರಾದ ಮಲ್ಲೇಶ್ ಮಾತನಾಡಿ ದಾನಿಗಳ ನೆರವು ಸದಾ ಹೀಗೆ ಈ ಕಾರ್ಯಕ್ರಮಕ್ಕೆ ಸಿಗಲಿ ಹಸಿದ ಹೊಟ್ಟೆಗಳನ್ನು ದಾನಿಗಳ ಮನಸ್ಸು ಅರಿತು ಮುಂದೆ ಬಂದರೆ ಎಷ್ಟೋ ಕುಟುಂಬಗಳಿಗೆ ಆಧಾರವಾಗುತ್ತದೆ ಅಂಬೇಡ್ಕರ್ ಅವರ ಮಾತು ನಡವಳಿಕೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕರುನಾಡ ವಿಜಯ ಸೇನೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರಾದ ಶಶಿಧರ್ ಬಿಆರ್, ಪ್ರಧಾನ ಕಾರ್ಯದರ್ಶಿಯಾದ ಕನಕರಾಜು, ಯುವಘಟಕ ಮುಖಂಡರುಗಳಾದ ಪ್ರಶಾಂತ್ ಗೌಡ, ಅಂಜನ್, ಸುರೇಶ್, ಪವನ್, ಸುದೀಪ್ , ಅಶೋಕ್ , ಕಾರ್ತಿಕ್, ಆಕಾಶ್ ನಾಗ್, ಮಿಥುನ್ ಗೌಡ, ಪವನ್ ಗೌಡ, ಮನೋಹರ್ ಕೆಎಲ್, ಸಂತೋಷ್ ಗೌಡ, ನವೀನ್ ಗೌಡ ಮತ್ತು ಅನ್ನದಾಸೋಹ ಸಮಿತಿ ಮಲ್ಲೇಶ್ ಅನ್ನದಾಸೋಹ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹರೀಶ್, ದೊಡ್ಡಬಳ್ಳಾಪುರ

Follow Us on : Google News | Facebook | Twitter | YouTube