Welcome To Kannada News Today

ಪಾದರಾಯನಪುರದಲ್ಲಿ ರಂಪಾಟ, ಕುರ್ಚಿ, ಪೆಂಡಾಲ್, ಬ್ಯಾರಿಕೇಡ್ ದ್ವಂಸ

ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್‌ ಮೇಲೆ ದಾಳಿ, ಪಾದರಾಯನಪುರದಲ್ಲಿ ಉದ್ವಿಗ್ನ ಪರಿಸ್ಥಿತಿ

🌐 Kannada News :

ಪಾದರಾಯನಪುರದಲ್ಲಿ ಕಿಡಿಗೇಡಿಗಳಿಂದ ರಂಪಾಟ, ಕುರ್ಚಿ, ಪೆಂಡಾಲ್, ಬ್ಯಾರಿಕೇಡ್ ದ್ವಂಸ

ಪಾದರಾಯನಪುರದಲ್ಲಿ ಕಿಡಿಗೇಡಿ ಜನರು ಏಕಾಏಕಿ ದೊಡ್ಡ ರಂಪಾಟ ನಡೆಸಿದ್ದಾರೆ. ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ಪೆಂಡಾಲ್ಗಳನ್ನು ಧ್ವಂಸಗೊಳಿಸಿದ್ದಾರೆ… ಟೇಬಲ್ ಕುರ್ಚಿಗಳನ್ನು ನೋಡದೆ ಎಲ್ಲ ಹೊಡೆದು ಹಾಕಿದ್ದಾರೆ… ಕ್ವಾರಂಟೈನ್ ನಲ್ಲಿದ್ದ ಕೆಲವರನ್ನು ಬೇರೆಡೆ ಶಿಫ್ಟ್ ಮಾಡಲು ಆಶಾ ಕಾರ್ಯಕರ್ತರು ಅಧಿಕಾರಿಗಳು ಸ್ಥಳಕ್ಕೆ ಹೋದಾಗ ಹೀಗೊಂದು ಘಟನೆ ನಡೆದಿದೆ. ಈ ಬಗ್ಗೆ ತೀವ್ರವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ..

ಹೌದು ಪಾದರಾಯನಪುರ ಸ್ಥಳೀಯರು ರೌಡಿಗಳ ರೀತಿ ವರ್ತನೆ ಮಾಡಿದ್ದಾರೆ.  ಪುಂಡಾಟ ನಡೆಸಿ ಎಲ್ಲವನ್ನು ಧ್ವಂಸ ಮಾಡಿದ್ದಾರೆ.  ಪೊಲೀಸ್ ಸಿಬ್ಬಂದಿ, ಕುರ್ಚಿ ಟೇಬಲ್ ಗಳನ್ನೆಲ್ಲಾ ಎಸೆದು ದರ್ಪ ಮೆರೆದಿದ್ದಾರೆ.  ಸದ್ಯ ಸ್ಥಳದಲ್ಲಿ ಕೆಎಸ್ ಆರ್ ಪಿ ತುಕಡಿಯನ್ನು ಈಗ ನಿಯೋಜನೆ ಮಾಡಲಾಗಿದೆ.

ಪಾದರಾಯನಪುರದಲ್ಲಿ ಕೊರೊನಾ ಶಂಕಿತರ ಗಲಾಟೆ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿರವರು, ಜನರ ಈ ವರ್ತನೆಯನ್ನು ಖಂಡಿಸಿದ್ದಾರೆ. ನಮ್ಮ ರಕ್ಷಣೆಗೆ ನಿಂತ ವೈದ್ಯರು, ದಾದಿಯರು, ಪೊಲೀಸರ ಮೇಲೆ ಆಕ್ರಮಣ ಸಹಿಸುವ ವಿಚಾರವಲ್ಲ, ರಕ್ಷಣೆಗೆ ಹೋದವರ ಮೇಲೆ ಈ ರೀತಿ ಗುಂಡಾಗಿರಿ ಸರಿಯಲ್ಲ ಎಂದಿದ್ದಾರೆ.

ಅಲ್ಲದೆ, ಕೊರೋನಾ ಬಿಕ್ಕಟ್ಟಿನಲ್ಲಿ, ಸರ್ಕಾರ ಕೊಡುವ ದುಡ್ಡು, ಯೋಜನೆ ಅಥವಾ ಇನ್ನಾವುದೇ ಪರಿಹಾರ ಕೊಟ್ಟಾಗ ತೆಗುದುಕೊಳ್ಳಲು ಮುಂದಾಗುವ ಈ ಜನ, ಸೋಂಕು ಪರೀಕ್ಷೆ ಎಂದಾಗ ಯಾಕೆ ಈ ರೀತಿ ವರ್ತಿಸುತ್ತಾರೆ ಎಂದು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬೆಂಗಳೂರಿನ ಪಾದರಾಯನಪುರದಲ್ಲಿ ಪುಂಡರ ಗಲಾಟೆ- ರಕ್ಷಣೆಗೆ ಬಂದವರ ಮೇಲೆ ಅಟ್ಯಾಕ್

ಈ ಭಾಗದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಅನ್ನೋ ಕಾರಣಕ್ಕೆ ಇಡೀ ಪ್ರದೇಶವನ್ನೇ ಸೀಲ್‌ ಡೌನ್ ಮಾಡಲಾಗಿತ್ತು. ಸೋಂಕಿನ ಶಂಕೆ ಇರುವ ಕಾರಣ ಒಂದಷ್ಟು ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲು ನಿರ್ಧರಿಸಿ ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳು ಮುಂದಾಗಿದ್ದೇ ತಡ ಜನರು ರಂಪಾಟ ನಡೆಸಿದ್ದಾರೆ.

ಕ್ವಾರಂಟೈನ್ ನಲ್ಲಿದ್ದ ಜನರಲ್ಲಿ ಕೆಲವರನ್ನು ಬೇರೆಡೆ ಶಿಫ್ಟ್ ಮಾಡಲು ಅಧಿಕಾರಿಗಳು ಹಾಗು ಆಶಾ ಕಾರ್ಯಕರ್ತರು ಸ್ಥಳಕ್ಕೆ ಬಂದಾಗ ಈ ಘಟನೆ ನಡೆದಿದೆ, ಅನ್ಯ ರಾಜ್ಯಗಳಲ್ಲಿ ನಡೆಯುವ ಕೋಮು ಗಲಭೆಯಂತೆ, ಏಕಾಏಕಿ ಗುಂಡಾಗಿರಿ ಮಾಡಿದವರನ್ನು ಕೂಡಲೇ ಬಂಧಿಸಬೇಕೆಂದು ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ದಾಳಿಕೋರರ ವಿರುದ್ಧ ಸರ್ಕಾರ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳುತ್ತೆ ಅನ್ನೋದನ್ನು ಕಾದುನೋಡಬೇಕಿದೆ.

#ಪಾದರಾಯನಪುರ #ಪಾದರಾಯನಪುರದಲ್ಲಿ #padarayanapura

Web Title : clash with police and bbmp while moving to quarantine in padarayanapura, bengaluru

📣 ಇನ್ನಷ್ಟು ಕನ್ನಡ ಬೆಂಗಳೂರು ನ್ಯೂಸ್ ಗಳಿಗಾಗಿ Bangalore News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today