ಕೈ ಬಳೆಯ ಬೆಲೆ ವಿಚಾರಿಸಿದ ಸಿಎಂ

ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರೊಬ್ಬರು ಧರಿಸಿದ್ದ ಕೈ ಬಳೆಯ ಬೆಲೆಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ವಿಚಾರಿಸಿದರು

( Kannada News Today ) : ಬೆಂಗಳೂರು  : ಕೈ ಬಳೆಯ ಬೆಲೆ ವಿಚಾರಿಸಿದ ಸಿಎಂ : ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರೊಬ್ಬರು ಧರಿಸಿದ್ದ ಕೈ ಬಳೆಯ ಬೆಲೆಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ವಿಚಾರಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿದ್ದ ಏಕಲವ್ಯ ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ, ಕ್ರೀಡಾ ಪೋಷಕ ಮತ್ತು ಎನ್‌ಎಸ್‌ಎಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ , ಏನಮ್ಮಾ, ಎಲ್ಲಿ ಮಾಡಿಸಿಕೊಂಡೆ ಈ ಬಳೆಯನ್ನ? ಎಂದು ಪ್ರಶಸ್ತಿ ಪುರಸ್ಕೃತರಾದ ಖುಷಿ ದಿನೇಶ್ ಅವರನ್ನು ಕೇಳಿದರು.

ಬಳೆನಾ ಇದು? ಆರ್ಡರ್ ಕೊಟ್ಟು ಮಾಡಿಸಿಕೊಂಡಿದ್ದಾ? ಅಥವಾ ರೆಡಿಮೇಡ್ ಖರೀದಿ ಸಿದ್ದಾ? ಎಷ್ಟು ಈ ಬಳೆಯ ಬೆಲೆ? ಎಂದು ಪ್ರಶಸ್ತಿ ಬಳೆಯನ್ನು ಕುತೂಹಲದಿಂದಲೇ ನೋಡಿದರು.

ಸಮಾರಂಭಗಳಿಗೆ ಆರ್ಟಿಫಿಯಲ್ ಬಳೆ ಹಾಕಬಾರದು. ಚಿನ್ನದ ಬಳೆ ಹಾಕಿಕೊಂಡು ಬರ ಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು.

ನಂತರ ಪ್ರಶಸ್ತಿ ಪುರಸ್ಕೃತರನ್ನು ಉದ್ದೇಶಿಸಿ, ನಿಮ್ಮ ಹೆಸರೇನು? ಯಾವ ಕ್ರೀಡೆಗೆ ನಿಮಗೆ ಪ್ರಶಸ್ತಿ ಲಭಿಸಿದೆ? ಎಂದು ವಿಚಾರಿಸಿಕೊಂಡರು.

ಖುಷಿ ದಿನೇಶ್ ತಮಗೆ ಸ್ವಿಮ್ಮಿಂಗ್‌ನಲ್ಲಿ ನನಗೆ ಏಕಲವ್ಯ ಪ್ರಶಸ್ತಿ ಎಂದು ಸಿಕ್ಕಿದೆ ಸರ್ ಎಂದು ಸಿಎಂ ಪ್ರಶ್ನೆಗಳಿಗೆ ಉತ್ತರಿಸಿದರು. ಖುಷಿ ದಿನೇಶ್ ಧರಿಸಿದ್ದ ಬಳೆ ವಿಶೇಷವಾಗಿದ್ದರಿಂದ ಮುಖ್ಯಮಂತ್ರಿಗಳ ಗಮನ ಸೆಳೆ ದಿತ್ತು.

Scroll Down To More News Today