ಕೋವಿಡ್-19 : ಬೆಂಗಳೂರಿನಲ್ಲಿ 38 ವಾರ್ಡ್​​ಗಳು ಹಾಟ್​ಸ್ಪಾಟ್​​​, ಕೇಕೆ ಹಾಕುತ್ತಿದೆ ಕೊರೋನಾ

Coronavirus, 38 Wards Hotspot in Bangalore

ಬೆಂಗಳೂರು : ದೇಶದಾದ್ಯಂತ ಮಹಾಮಾರಿ ಕೇಕೆ ಹಾಕುತ್ತಿದೆ, ಭಲಿಷ್ಟ ರಾಷ್ತ್ರಗಳು ಸಹ ಈ ಕೊರೋನಾ ಸೃಷ್ಟಿಸಿರೋ ಅವಾಂತರಕ್ಕೆ ಪತರಗುಟ್ಟಿ ಹೋಗಿವೆ. ಆಸರೆಗಾಗಿ ಜನ ಕೈ ಚಾಚುತ್ತಿದ್ದರೆ, ಹಸಿದ ಅದೆಷ್ಟೋ ಹೊಟ್ಟೆಗಳು ಪರಿತಪಿಸುತ್ತಿವೆ.

ಕರ್ನಾಟಕ ರಾಜ್ಯಾದಂತ ಅದರಲ್ಲೂ ನಂಬರ್ ಒನ್ ಸ್ಥಾನದಲ್ಲಿರೋ ಬೆಂಗಳೂರು ಆತಂಕ ಸೃಷ್ಟಿಸಿದೆ. ಲಾಕ್ ಡೌನ್ ನಡುವೆಯೂ ಕೊರೋನಾ ವೈರಸ್​​ ಅಟ್ಟಹಾಸ ಮುಂದುವರಿದಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಬೀದರ್​​​, ಸೇರಿದಂತೆ ಕಲಬುರ್ಗಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಈ ಮಧ್ಯೆ ಬೃಹತ್​​ ಬೆಂಗಳೂರು ಮಹಾನಗರ ಪಾಲಿಕೆಯು ನಗರದಲ್ಲಿ ಒಟ್ಟಾರೆ 38 ವಾರ್ಡ್​​ಗಳನ್ನು ಹಾಟ್​​ಸ್ಪಾಟ್ ಎಂದು ಗುರುತಿಸಿದೆ. ಈ ಸಂಬಂಧ ಬೊಮ್ಮನಹಳ್ಳಿ- 2, ಮಹದೇವಪುರ- 6, ಪೂರ್ವ ವಲಯ- 9, ದಕ್ಷಿಣ ವಲಯ- 12, ಯಲಹಂಕ- 2, ಪಶ್ಚಿಮ ವಲಯ- 7 ವಾರ್ಡ್​​​ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಹಾಟ್ ಸ್ಪಾಟ್ ಎಂದು ಗುರುತಿಸಲ್ಪಟ್ಟ ಸ್ಥಳಗಳಲ್ಲಿ ತೀವ್ರ ನಿಗಾವಹಿಸಲಾಗುವುದು, ಕಟ್ಟು ನಿಟ್ಟಿನ ಲಾಕ್ ಡೌನ್ ಏರ್ಪಡಿಸಲಾಗುವುದು, ಒಟ್ಟಾರೆ ಈ ಹಾಟ್ ಸ್ಪಾಟ್ ಗಳಿಂದ ಬೇರೆ ಸ್ಥಳಗಳಿಗೆ ಸೋಂಕು ಹರಡದಂತೆ ಎಚ್ಚರವಹಿಸಲಾಗಿದೆ.

ಇನ್ನು, ಹಾಟ್​ಸ್ಪಾಟ್​ ಜತೆಗೆ ರೆಡ್​​ ಜೋನ್​​​, ಗ್ರೀನ್​​​ ಜೋನ್​​, ಆರೆಂಜ್​​ ಜೋನ್​ ಎಂದು ಪ್ರದೇಶಗಳನ್ನು ಸದ್ಯದಲ್ಲೇ ಗುರುತಿಸಿ, ಅದರ ಅನುಸಾರ ಕ್ರಮಗಳನ್ನು ವಹಿಸಲಾಗುತ್ತದೆ.

Scroll Down To More News Today