ಸೊಸೆಯನ್ನು ಬೆಂಬಲಿಸುವಂತೆ ಡಿ.ಕೆ.ರವಿ ತಾಯಿ ಮನವಿ

ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಐಎಎಸ್ ಅಧಿಕಾರಿ ಡಿ.ಕೆ. ರವಿ ಪತ್ನಿ ಕುಸುಮಾ ಪರ ರವಿ ತಾಯಿ ಗೌರಮ್ಮ ಮತಯಾಚಿಸಿದ್ದಾರೆ

( Kannada News Today ) : ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಐಎಎಸ್ ಅಧಿಕಾರಿ ಡಿ.ಕೆ. ರವಿ ಪತ್ನಿ ಕುಸುಮಾ ಪರ ರವಿ ತಾಯಿ ಗೌರಮ್ಮ ಮತಯಾಚಿಸಿದ್ದಾರೆ.

ಕುಸುಮಾ ಕಾಂಗ್ರೆಸ್‌ನಿಂದ ಅಭ್ಯರ್ಥಿ ಎಂದು ತಿಳಿದ ತಕ್ಷಣ ಕುಸುಮಾ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದ ರವಿ ತಾಯಿ, ಸೊಸೆ ತಮ್ಮನ್ನು ಭೇಟಿ ಮಾಡದೇ ನಿರ್ಲಕ್ಷ್ಯ ಮಾಡಿದ್ದು, ಅವಳಿಗೆ ತಮ್ಮ ಮಗನ ಹೆಸರು ಹೇಳಲು ಅರ್ಹತೆಯಿಲ್ಲ. ಈ ಚುನಾವಣೆಯಲ್ಲಿ ತಮ್ಮ ಮಗನ ಹೆಸರು ಬಳಕೆ ಮಾಡಿದರೆ ತಾವು ಸುಮ್ಮನಿರುವುದಿಲ್ಲ ಎಂದು ಹೇಳಿದ್ದರು.

ಬಿಜೆಪಿ ಅದನ್ನೇ ಅಸ್ತಸ್ತ್ರವಾಗಿ ಬಳಸಿ ಕುಸುಮಾ ಯಾವುದೇ ಕಾರಣಕ್ಕೂ ಡಿ.ಕೆ. ರವಿ ಹೆಸರು ಬಳಸಿಕೊಳ್ಳಬಾರದು ಎಂದು ಆಗ್ರಹಿಸಿತ್ತು. ಇದೀಗ ಬದಲಾದ ಸನ್ನಿವೇಶದಲ್ಲಿ ಸೊಸೆ ಪರ ಡಿ.ಕೆ.ರವಿ ತಾಯಿ ಮತಯಾಚಿಸಿ ಅಚ್ಚರಿಪಡಿಸಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಈ ಕುರಿತು ಟ್ವೀಟ್ ಮಾಡಿದ್ದಕ್ಕೆ ಕಾಂಗ್ರೆಸ್ ಮಹಿಳಾ ಘಟಕ ಶೋಭಾ ಕರಂದ್ಲಾಜೆ ವಿರುದ್ಧ ತಿರುಗಿ ಬಿದ್ದಿತ್ತು.

Scroll Down To More News Today