ನಾಳೆ ಕಾಲೇಜುಗಳಿಗೆ ರಜೆ, ಸರ್ಕಾರದ ನಿರ್ಧಾರಕ್ಕೆ ಡಿಕೆ ಶಿವಕುಮಾರ್ ಕಿಡಿ

ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿಯವರ ಸಂಚಾರದ ಹಿನ್ನೆಲೆ ಕೆಲವು ಕಾಲೇಜುಗಳಿಗೆ ರಜೆ ಘೋಷಣೆಯಾದ ಹಿನ್ನೆಲೆ, ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

Online News Today Team

ಬೆಂಗಳೂರು (Bengaluru): ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2022 (International Yoga Day 2022) ಅಂಗವಾಗಿ ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿಯವರ ಸಂಚಾರದ ಹಿನ್ನೆಲೆ (PM Modi Bangalore Visit) ಕೆಲವು ಕಾಲೇಜುಗಳಿಗೆ ರಜೆ (Holiday For Collages) ಘೋಷಣೆಯಾದ ಹಿನ್ನೆಲೆ, ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಮೈಸೂರು ಭೇಟಿಗಾಗಿ (Mysore Visit) ಸಕಲ ಸಿದ್ಧತೆ ನಡೆದಿದೆ… ಈ ಹಿನ್ನೆಲೆಯಲ್ಲಿ ಮೋದಿ ಅವರು ಸಂಚರಿಸುವ ರಸ್ತೆಗಳ ಕಾಲೇಜುಗಳಿಗೆ ರಜೆ ನೀದಲಾಗಿದೆ. ಸರ್ಕಾರ ಕೈಗೊಂಡಿರುವ ಈ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಲೇಜುಗಳಿಗೆ ರಜೆ ಏಕೆ? ವಿದ್ಯಾರ್ಥಿಗಳು ಟೆರರಿಸ್ಟ್ ಅಂದು ಕೊಂಡಿದ್ದೀರಾ? ರಸ್ತೆಯಲ್ಲಿ ಅವರಿಗೆ ಯಾವ ಸೆಕ್ಯೂರಿಟಿ ಬೇಕಾದರೂ ಕೊಡಿ…. ರೋಡ್ ಶೋ ಮಾಡಿ… ರಾಜಕೀಯ ಮಾಡಿ. ಆದರೆ ವಿದ್ಯಾರ್ಥಿಗಳನ್ನು ಏಕೆ ಅನುಮಾನಿಸುತ್ತೀರಿ? ನಮ್ಮ ವಿದ್ಯಾರ್ಥಿಗಳು ಭಯೋತ್ಪಾದಕರೇ? ಎಂದು ಪ್ರಶ್ನಿಸಿದ್ದಾರೆ.

ಮೋದಿ ಬರುತ್ತಿರುವುದು ಜನರ ಹಿತಕ್ಕಾಗಿ ಅಲ್ಲ ನಾಯಕರ ಹಿತಕ್ಕಾಗಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

DK Shivakumar is angry for Given Holiday for colleges on the roads Modi travels

Follow Us on : Google News | Facebook | Twitter | YouTube