‘ಇಂಡಿಯನ್ ಹಾತ್ ಫೆಸ್ಟಿವಲ್’ ಗೆ ಚೈತ್ರಾ ವಾಸುದೇವನ್ ಚಾಲನೆ

ಇಂಡಿಯನ್ ಹಾತ್ ಫೆಸ್ಟಿವಲ್ : ದೇಶದ ವಿವಿಧ ಭಾಗಗಳ 50 ಕ್ಕೂ ಹೆಚ್ಚು ಕರಕುಶಲಕರ್ಮಿಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ

Online News Today Team

ಬೆಂಗಳೂರು (Bengaluru) : ಬೆಂಗಳೂರು ದಕ್ಷಿಣ ಭಾಗದ ಕಲಾಸಕ್ತರಿಗೆ ದೇಶದ ವಿವಿಧ ಭಾಗಗಳ 50 ಕ್ಕೂ ಹೆಚ್ಚು ಕರಕುಶಲ ಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟ ಮೇಳವಾದ “ಇಂಡಿಯನ್ ಹಾತ್ ಫೆಸ್ಟಿವಲ್“ ಗೆ ಚಿತ್ರನಟಿ ಮತ್ತು ರೂಪದರ್ಶಿ ಚೈತ್ರಾ ವಾಸುದೇವನ್ ಚಾಲನೆ ನೀಡಿದರು.

ಹೆಚ್ಎಸ್ಆರ್ ಲೆಔಟ್ ನ ವೈಟ್ ಹೌಸ್ ಕನ್ವೆಕ್ಷನ್ ಸೆಂಟರ್ ನಲ್ಲಿ ಜೂನ್ 29 ರಿಂದ ಇಂಡಿಯನ್ ಹಾತ್ ಫೆಸ್ಟಿವಲ್ ಆರಂಬವಾಗಿದ್ದು, ಜುಲೈ 3 ರವರೆಗೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯುತ್ತಿದ್ದು, ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ.

ಇಂಡಿಯನ್ ಹಾತ್ ಫೆಸ್ಟಿವಲ್

ಮೇಳವನ್ನು ಉದ್ಘಾಟಿಸಿ ಮಾತನಾಡಿದ ಚೈತ್ರಾ ವಾಸುದೇವನ್ ಅವರು, ಇಲ್ಲಿ ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಹ ಉತ್ಪನ್ನಗಳನ್ನು ನಮ್ಮ ಕುಶಲಕರ್ಮಿಗಳು ತಯಾರಿಸಿದ್ದಾರೆ. ಒಂದಕ್ಕಿಂತ ಒಂದು ಉತ್ಪನ್ನ ಕಲಾಸಕ್ತರನ್ನು ಆಕರ್ಷಿಸುತ್ತದೆ. ದೇಶದ ವಿವಿಧ ರಾಜ್ಯಗಳ ಕುಶಲಕರ್ಮಿಗಳು, ಕಲಾವಿದರು ತಯಾರಿಸಿರುವ ಕಲಾಕೃತಿಗಳನ್ನು ನೇರವಾಗಿ ಜನರ ಕೈಗೆ ತಲುಪಿಸಲಾಗುತ್ತಿದೆ ಎಂದರು.

ಈ ಮೇಳದಲ್ಲಿ 75 ಕ್ಕೂ ಹೆಚ್ಚು ಮಳಿಗೆಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರುಗಳು ತಮ್ಮ ಕಲೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ.  ನಿಮ್ಮ ಮನೆಯ ಗಾರ್ಡನ್ ಅಲಂಕರಿಸಲು, ನಿಮಗೊಪ್ಪುವ ಹ್ಯಾಂಡ್ ಲೂಮ್ ಸ್ಯಾರಿಯನ್ನು ಸೆಲೆಕ್ಟ್ ಮಾಡಲು, ಕುರ್ತಿಗಳು ಮತ್ತು ಆಭರಣಗಳನ್ನು ಕೊಳ್ಳಲು ಅತ್ಯುತ್ತಮ ಮೇಳ ಇದಾಗಿದೆ.

ಚೈತ್ರಾ ವಾಸುದೇವನ್

ಈ ಮೇಳದಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ. ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿವೆ.

Drive by Chaitra Vasudevan to Indian Hath FestivalDrive by Chaitra Vasudevan to Indian Hath Festival

Follow Us on : Google News | Facebook | Twitter | YouTube