10th Annual Indian Education Awards -2020 : ಯೂರೊ ಕಿಡ್ಸ್ ಪ್ರಿ-ಸ್ಕೂಲ್‍ಗೆ ಗೌರವ

EuroKids Pre-School win big at the 10th Annual Indian Education Awards 2020

KNT [ Kannada News Today ] : 10th Annual Indian Education Awards – 2020

10ನೇ ವಾರ್ಷಿಕ ಇಂಡಿಯನ್ ಎಜ್ಯುಕೇಶನ್ಸ್ ಅವಾರ್ಡ್ಸ್ -2020ಯಲ್ಲಿ ಯೂರೊ ಕಿಡ್ಸ್ ಪ್ರಿ-ಸ್ಕೂಲ್‍ಗೆ ಅತ್ಯುತ್ತಮ ಆರಂಭಿಕ ಶಿಕ್ಷಣಕ್ಕಾಗಿ ವಿನೂತನ ಪಠ್ಯಕ್ರಮ ಅಳವಡಿಸಿಕೊಂಡಿರುವುದಕ್ಕೆ ಇಂಡಿಯನ್ ಎಜ್ಯುಕೇಶನ್ಸ್ ಅವಾರ್ಡ್ಸ್ ಗೆದ್ದಿದೆ. ಬೆಂಗಳೂರಿನ ತಾಜ್ ಯಶವಂತಪುರದಲ್ಲಿ 26ನೇ ಫೆಬ್ರುವರಿ 2020ರಂದು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಯೂರೊ ಕಿಡ್ಸ್ ಪ್ರಿಸ್ಕೂಲ್ ನಿರಂತರವಾಗಿ ವಿನೂತನ ಹಾಗೂ ಸದಾ ಪ್ರಸ್ತುತವೆನಿಸುವ ಕಲಿಕಾ ಅಭ್ಯಾಸ ವಿಧಾನಗಳನ್ನು ಅಳವಡಿಸಿಕೊಂಡು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿದೆ. ಯೂರೊ ಕಿಡ್ಸ್ ಪ್ರಿಸ್ಕೂಲ್‍ನ ತಜ್ಞರು ವಿನ್ಯಾಸಗೊಳಿಸಿದ, ವಿವೇಚನಾಯುಕ್ತ ಪಠ್ಯಕ್ರಮ “ಎನ್ಯುನೋವಾ” ಮಕ್ಕಳಿಗೆ ವಿವೇಚನಾಶೀಲ ಅಭ್ಯಾಸ ಕ್ರಮವಾದ ಏಕಾಗ್ರತೆ, ಸ್ಥಿತಿಸ್ಥಾಪಕತ್ವ ಮತ್ತು ದಯೆ ಮೂಲಕ ಭೋದಿಸುತ್ತದೆ.

ಇದು ಆರಂಭಿಕ ವರ್ಷಗಳಲ್ಲಿ ಕಲಿಕೆಯ ಮೂಲಾಧಾರವಾಗಿದ್ದು, ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಭದ್ರವಾದ ಬುನಾದಿಯನ್ನು ಕಟ್ಟಲು ಇದು ನೆರವಾಗುತ್ತದೆ. ಯೂರೊಕಿಡ್ಸ್ ಆರಂಭಿಕ ಹಂತದ ಮಕ್ಕಳ ಆರೈಕೆಯ ಮರುವ್ಯಾಖ್ಯಾನ ಮಾಡಿದ್ದು, ಕಳೆದ 18 ವರ್ಷಗಳಿಂದ ಶಿಕ್ಷಣ ಕ್ಷೇತ್ರವನ್ನು ಮೋಜು ಆಧರಿತ ಕಲಿತಾ ಪರಿಸರವಾಗಿ ರೂಪಿಸಲು ಒತ್ತು ನೀಡಿದೆ.

ಇದನ್ನೂ ಓದಿ : VCCircle Awards 2020, ಯೂರೋಕಿಡ್ಸ್ ಇಂಟರ್‌ನ್ಯಾಷನಲ್ ಗೆ ‘ವರ್ಷದ ಶಿಕ್ಷಣ ಸಂಸ್ಥೆ’ ಪ್ರಶಸ್ತಿ

ಇಂಡಿಯನ್ ಎಜ್ಯುಕೇಶನ್ ಕಾಂಗ್ರೆಸ್-2020 ಎಜ್ಯುಟೆಕ್ ಧ್ಯೇಯವನ್ನು ಹೊಂದಿದ್ದು, ಹೆಚ್ಚುಹೆಚ್ಚಾಗಿ ತಂತ್ರಜ್ಞಾನ ಚಾಲಿತ ಶಿಕ್ಷಣ ಸಮುದಾಯಕ್ಕೆ ಅನುಗುಣವಾಗಿ ಇದನ್ನು ರೂಪಿಸಲಾಗಿದೆ. ಇಲ್ಲಿ ವೃತ್ತಿಪರರು ಮತ್ತು ತಂತ್ರಜ್ಞಾನ ದೇಶಕ್ಕೆ ವಿದ್ಯಾರ್ಥಿಗಳನ್ನು ತೆರೆದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ.

ಈ ಮೂಲಕ ತಮ್ಮ ಯೋಚನೆಗಳನ್ನು ಹಂಚಿಕೊಳ್ಳಲು, ವೃತ್ತಿಪರವಾಗಿ ಬೆಲೆಯಲು ಮತ್ತು ಒತ್ತಡದ ಸವಾಲುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ನೆರವಾಗುತ್ತದೆ. ಶಿಕ್ಷಣ ಕ್ಷೇತ್ರದ ತಜ್ಞರು ಈ ಸಮಾವೇಶದಲ್ಲಿ ಪಾಲ್ಗೊಂಡು, ಭವಿಷ್ಯದ ಹಾದಿಯ ಬಗ್ಗೆ ಮಹತ್ವದ ವಿಚಾರ ವಿನಿಮಯ ಮಾಡಿಕೊಂಡರು.

Web Title : EuroKids Pre-School win big at the 10th Annual Indian Education Awards 2020
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | TwitterYouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.
(ಕನ್ನಡ ಸುದ್ದಿಗಳು Kannada News Today, KNT News Network)