ಗವಿಪುರಂ ಗುಟ್ಟಹಳ್ಳಿ ಗವಿ ಗಂಗಾಧರೇಶ್ವರ ದೇವಸ್ಥಾನದ ಬಳಿ ಗೋಡೆ ಕುಸಿತ

ಭಾರಿ ಮಳೆಯಿಂದಾಗಿ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನದ ಬಳಿ ಗೋಡೆ ಕುಸಿತ ಘಟನೆ ಸಂಭವಿಸಿದೆ.

( Kannada News Today ) : ಬೆಂಗಳೂರು : ಗವಿ ಗಂಗಾಧರೇಶ್ವರ ದೇವಸ್ಥಾನದ ಬಳಿ ಗೋಡೆ ಕುಸಿತ : ಅತ್ತ ಜೋರಾಗಿ ಬರದು, ಇತ್ತ ಸುಮ್ಮನೂ ಇರದು ಎಂಬ ಹಾಡು ಕೇಳಿದ್ದೀರಲ್ಲ….. ಅದೇ ರೀತಿ ಮಳೆ ಒಮ್ಮೆಲೇ ಬಂದು ನಿಲ್ಲುತ್ತಿಲ್ಲ, ಬರದೇ ಸಹ ಇರುತ್ತಿಲ್ಲ, ಒಂದೇ ಸಮನೆ ಸುರಿದು ಜನರ ನೆಮ್ಮದಿ ಕೆಡಿಸಿದೆ.

ಇದನ್ನೂ ಓದಿ : ಕೋಲಾರದಲ್ಲಿ ಗೋಡೆ ಕುಸಿದು ಬಾಲಕ ಸಾವು

ಬೆಂಗಳೂರು ಸಿಲಿಕಾನ್ ಸಿಟಿಯಲ್ಲಿ ಮಳೆರಾಯನ ಆರ್ಭಟ ಕೊಂಚ ಹೆಚ್ಚಾಗೇ ಇದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಬೆಂಗಳೂರು ನಗರದ ಹಲವಾರು ಬಡಾವಣೆಗಳಿಗೆ ನೀರು ನುಗ್ಗಿದೆ, ಮಳೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ.

ಗವಿಪುರಂ ಗುಟ್ಟಹಳ್ಳಿ ಗವಿ ಗಂಗಾಧರೇಶ್ವರ ದೇವಸ್ಥಾನದ ಬಳಿ ಗೋಡೆ ಕುಸಿತ - Kannada News

ಇನ್ನಷ್ಟು ಬೆಂಗಳೂರು ಸುದ್ದಿಗಳಿಗಾಗಿ Bangalore News in Kannada ಕ್ಲಿಕ್ಕಿಸಿ

ನಿನ್ನೆಯೂ ಸಹ ರಾತ್ರಿ ಸುರಿದ ನಿರಂತರ ಮಳೆಗೆ ನಗರದ ಇತಿಹಾಸ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನದ ಬಳಿ ಗೋಡೆ ಕುಸಿದಿದೆ. ಗವಿಪುರಂ ಗುಟ್ಟಹಳ್ಳಿಯಲ್ಲಿರುವ ದೇವಸ್ಥಾನದ ಗೋಡೆ ಭಾರಿ ಮಳೆಯ ಪರಿಣಾಮ ಭಾಗಶಃ ಕುಸಿದಿದೆ ಎಂದು ತಿಳಿದು ಬಂದಿದೆ. ಜೊತೆಗೆ, ದೇವಸ್ಥಾನಾದ ಒಳ ಆವರಣದಲ್ಲೂ ಗೋಡೆಗಳಿಗೆ ಹಾನಿ ಸಂಭವಿಸಿರುವುದರ ಬಗ್ಗೆ ವರದಿಯಾಗಿದೆ.

Follow us On

FaceBook Google News

Read More News Today