Kongadiappa College : ಕೊಂಗಾಡಿಯಪ್ಪ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಪದವಿ ಪ್ರದಾನ ಸಮಾರಂಭ

Kongadiappa College of Education Doddaballapur : ಉತ್ತಮ ಶಿಕ್ಷಕರನ್ನು ಸಮಾಜಕ್ಕೆ ಬಳುವಳಿಯಾಗಿ ನೀಡುವುದು ನಮ್ಮ ಉದ್ದೇಶ

Online News Today Team

Kongadiappa College of Education Doddaballapur : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಶ್ರೀ ಕೊಂಗಾಡಿಯಪ್ಪ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ 2017 -19 ,2018- 20, 2019 – 21 ನೇ ಸಾಲಿನ ಬಿಎಡ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವನ್ನು ದಿನಾಂಕ 31 3 2022 ನೇ ಗುರುವಾರದಂದು ಸುವರ್ಣ ಮಹೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಪದವಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಹಾರ ನೀಡುವ ಮೂಲಕ ರಾಜ್ಯದಲ್ಲಿಯೇ ಹೆಸರು ಪಡೆದಿರುವ ನಮ್ಮ ಕೊಂಗಾಡಿಯಪ್ಪ ಶಿಕ್ಷಣ ಮಹಾವಿದ್ಯಾಲಯ ನೆರೆ ಸಂತ್ರಸ್ತರ ನೋವಿಗೆ ಮಿಡಿದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5ಲಕ್ಷ ರೂ ನೀಡುವ ಮೂಲಕ ಹಾಗೂ ಕೋವಿಡ್ ಸಂದರ್ಭದಲ್ಲಿ ಬಡಜನರಿಗೆ 6 ಲಕ್ಷ ರೂ ಧನಸಹಾಯ ಹಾಗೂ ದಿನಸಿ ಕಿಟ್ ಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪ್ರತಿ ವರ್ಷವೂ ಸಹ ಶ್ರೀ ಕೊಂಗಾಡಿಯಪ್ಪ ನವರ ಜನ್ಮದಿನಾಚರಣೆ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸುತ್ತಾ ಬಂದಿದ್ದೇವೆ. 2016 – 17 ನೇ ಸಾಲಿನಲ್ಲಿ ಪ್ರಾರಂಭವಾದ ಬಿಎಡ್ ಕಾಲೇಜು 4 ಬ್ಯಾಚು ಗಳನ್ನು ಯಶಸ್ವಿಯಾಗಿ 100% ಪಲಿತಾಂಶ ವನ್ನು ಹಾಗೂ ವಿಶ್ವವಿದ್ಯಾಲಯದಿಂದ 2 ಮತ್ತು 5ನೇ ರ್ಯಾಂಕ್ ಪಡೆಯುವುದರೊಂದಿಗೆ ಜನಮನ್ನಣೆ ಗಳಿಸಿದೆ.

ಉತ್ತಮ ಶೈಕ್ಷಣಿಕ ವಾತಾವರಣ, ಗ್ರಂಥಾಲಯ, ಪ್ರಯೋಗಾಲಯ ,ಸಮರ್ಪಣಾಭಾವದ ಅಧ್ಯಾಪಕವರ್ಗ ವನ್ನು ಹೊಂದಿರುವ ಕಾಲೇಜು. ಶಿಕ್ಷಕರ ಅರ್ಹತಾ ಪರೀಕ್ಷೆಯ ತರಬೇತಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡುವುದರೊಂದಿಗೆ ಸಮುದಾಯ ಜೀವನ ಶಿಬಿರ, ವಿಚಾರಸಂಕಿರಣ ,ಉದ್ಯೋಗ ಮೇಳ ,ಇತ್ಯಾದಿ ವಿನೂತನ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಗುರುತಿಸಿಕೊಂಡಿದೆ ಎಂದು ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್ ತಿಳಿಸಿದರು

ಬಿಎಡ್ ಕಾಲೇಜಿನಲ್ಲಿ ಪ್ರಥಮ ಘಟಿಕೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು, ಕೋವಿಡ್ ಕಾರಣದಿಂದ ವಿಳಂಬವಾಗಿ ಈಗ ತನ್ನ ಎರಡನೇ ಘಟಿಕೋತ್ಸವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊಫೆಸರ್ ನಿರಂಜನ್ ರವರು ಮತ್ತು ತಲ್ಲಂ ವೆಂಕಟೇಶ್ ವಾಣಿಜ್ಯೋದ್ಯಮಿಗಳು ಇವರ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಕಾರ್ಯದರ್ಶಿಗಳಾದ ಎಂ ಅಶ್ವಥಯ್ಯ ತಿಳಿಸಿದರು .

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕೊಂಗಾಡಿಯಪ್ಪ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

ಹರೀಶ್, ದೊಡ್ಡಬಳ್ಳಾಪುರ

Graduation Ceremony of Kongadiappa College of Education Doddaballapur

Follow Us on : Google News | Facebook | Twitter | YouTube