Bengaluru Rains ಜಲ ದಿಗ್ಬಂಧನದಲ್ಲಿ ಬೆಂಗಳೂರು

Bengaluru Rains : ಸಂಪೂರ್ಣ ಜಲಾವೃತವಾಗಿರುವ ಕರ್ನಾಟಕದ ರಾಜಧಾನಿ ಬೆಂಗಳೂರು

ಬೆಂಗಳೂರು (Bengaluru): ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ (Heavy Rains) ಕರ್ನಾಟಕ ತತ್ತರಿಸಿದೆ. ಅದರಲ್ಲೂ ರಾಜ್ಯದ ರಾಜಧಾನಿ ಬೆಂಗಳೂರು (Bangalore) ನಗರ ತತ್ತರಿಸಿದೆ. ಬೆಂಗಳೂರಿಗರ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಪ್ರಮುಖ ರಸ್ತೆಗಳು ನದಿಗಳಾಗಿವೆ.

ಮನೆ, ಐಟಿ ಕಚೇರಿಗಳಿಗೆ ಮೊಣಕಾಲಿನವರೆಗೂ ನೀರು ನುಗ್ಗಿದೆ. ನಗರದಲ್ಲಿ ಶಾಲೆಗಳಿಗೆ ರಜೆ (School Holiday) ಘೋಷಿಸಲಾಗಿದೆ. ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಹೇಳುತ್ತಿವೆ. ಈ ನಡುವೆ ಬೆಂಗಳೂರಿನ ಸಿದ್ಧಾಪುರದಲ್ಲಿ ವಿದ್ಯುತ್ ಸ್ಪರ್ಶದಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಪ್ರವಾಹವನ್ನು ತಡೆಯುವಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಗಳೆಲ್ಲ ಜಲಾವೃತಗೊಂಡಿರುವುದರಿಂದ ಕಾಲೋನಿಗಳಿಂದ ಹೊರಗೆ ಬರಲೂ ಸಹ ಪರಸ್ಥಿತಿ ಇಲ್ಲ. ಅನೇಕ ನೌಕರರು ಟ್ರ್ಯಾಕ್ಟರ್ ಮತ್ತು ಜೆಸಿಬಿಗಳ ಸಹಾಯದಿಂದ ಕಚೇರಿಗಳಿಗೆ ತೆರಳಿದರು. ಅನೇಕ ಕಂಪನಿ ಸಿಇಒಗಳು ಮತ್ತು ಐಟಿ ಉದ್ಯೋಗಿಗಳು ತಮ್ಮ ಕಷ್ಟಗಳನ್ನು ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Heavy Rains Hit Bengaluru

ಏತನ್ಮಧ್ಯೆ, ಖ್ಯಾತ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಬೆಂಗಳೂರಿನಲ್ಲಿ ಇಂತಹ ಭೀಕರ ಪ್ರವಾಹವನ್ನು ನೋಡಿರಲಿಲ್ಲ ಮತ್ತು ಈ ಪ್ರವಾಹವು ಹಾನಿಯನ್ನುಂಟುಮಾಡಿದೆ ಎಂದು ಹೇಳಿದರು. UnAcademy ನಿರ್ದೇಶಕ ಗೌರವ್ ಮುಂಜಾಲ್ ಅವರು ಟ್ವಿಟರ್‌ನಲ್ಲಿ ಪ್ರವಾಹದಿಂದ ತಮ್ಮ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಅವರು ವಾಸಿಸುವ ಕಾಲೋನಿ ಜಲಾವೃತವಾಗಿದ್ದು, ಅವರ ಇಡೀ ಕುಟುಂಬವು ಟ್ರ್ಯಾಕ್ಟರ್‌ನಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಿದೆ ಎಂದು ಅವರು ಸಂಬಂಧಿಸಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಧಾರಾವಾಹಿ ನಟಿ ಮಹಾಲಕ್ಷ್ಮಿ ಮದುವೆಗೆ ಕಾರಣ ಹೊರಬಿತ್ತು

ಅತಿವೃಷ್ಟಿ, ಪ್ರವಾಹದಿಂದ ಬೆಂಗಳೂರು ಜನತೆ ತೀವ್ರ ತೊಂದರೆ ಅನುಭವಿಸುತ್ತಿರುವಾಗ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ರಾಜಕೀಯ ಮಾಡುತ್ತಿದ್ದಾರೆ. ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಮೂಲಕ ತಮ್ಮ ಇಮೇಜ್ ಅನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರದ ವೈಫಲ್ಯ ಮತ್ತು ಯೋಜಿತವಲ್ಲದ ಆಡಳಿತವೇ ಬೆಂಗಳೂರು ಪ್ರವಾಹಕ್ಕೆ ಮತ್ತು ಪ್ರಸ್ತುತ ಪರಿಸ್ಥಿತಿಗೆ ಕಾರಣ ಎಂದು ಅವರು ಆರೋಪಿಸಿದರು. ಇಡೀ ಬೆಂಗಳೂರಿನಲ್ಲಿ ಪ್ರವಾಹ ಉಂಟಾಗಿಲ್ಲ, ಕೆಲವೇ ಪ್ರದೇಶಗಳಲ್ಲಿ ಮಾತ್ರ ಪ್ರವಾಹ ಉಂಟಾಗಿದೆ ಎಂದು ಹೇಳುವ ಮೂಲಕ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡಲು ಯತ್ನಿಸಿದರು. ಇನ್ನೊಂದು ಕಾರಣವೆಂದರೆ ಮಹದೇವಪುರ ಭಾಗದಲ್ಲಿ 69 ಕೆರೆಗಳಿದ್ದು, ಅವು ತುಂಬಿ ಹರಿಯುತ್ತಿರುವುದರಿಂದ ಪ್ರವಾಹ ಉಂಟಾಗಿದೆ.

ಇದನ್ನೂ ಓದಿ : ವೆಬ್ ಸ್ಟೋರೀಸ್

ಕರ್ನಾಟಕದಲ್ಲಿ ಮಂಗಳವಾರ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿ ಕುರಿತು ಸಿಎಂ ಬೊಮ್ಮಾಯಿ ನಡೆಸಿದ ಪರಾಮರ್ಶೆಯಲ್ಲಿ ಪಕ್ಕದಲ್ಲೇ ಕುಳಿತಿದ್ದ ಕಂದಾಯ ಸಚಿವ ಆರ್.ಅಶೋಕ್ ಏನೂ ಆಗಿಲ್ಲವೆಂಬಂತೆ ಗಡತ್ತಾಗಿ ಮಲಗಿದ್ದರು. ಪ್ರತಿಪಕ್ಷ ಕಾಂಗ್ರೆಸ್ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ.  ‘ಪ್ರವಾಹದಲ್ಲಿ ಜನ ಮುಳುಗಿದರೆ, ಸಚಿವರು ನಿದ್ದೆಯಲ್ಲಿ ಮುಳುಗಿದರು’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿತು.

Heavy Rains Hit Bengaluru