ಕೊರೊನಾ ವೈರಸ್ ಹರಡದಂತೆ ಹಾಲು ಮತ್ತು ಹಾಲಿನ ಉತ್ಪನ್ನ ವಿತರಣೆಗೆ ಮುಂಜಾಗ್ರತಾ ಕ್ರಮ ಕೈಗೊಂಡ ಹೆರಿಟೇಜ್ ಫುಡ್ಸ್ ಲಿಮಿಟೆಡ್

Heritage Foods Ltd takes precautionary measures for milk and milk product delivery without spreading coronavirus

Kannada News Today :

ಪ್ರಸ್ತುತದ ಸಾರ್ವಜನಿಕ ಆರೋಗ್ಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಹೆರಿಟೇಜ್ ಫುಡ್ಸ್ ಲಿಮಿಟೆಡ್ ತನ್ನ ಗ್ರಾಹಕರು ಮತ್ತು ಉದ್ಯೋಗಿಗಳ ಕಲ್ಯಾಣಕ್ಕೆ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ. ಕಾರ್ಪೊರೇಟ್ ಮತ್ತು ಆಡಳಿತ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಮನೆಯಿಂದಲೇ ತಮ್ಮ ಕೆಲಸವನ್ನು ನಿರ್ವಹಿಸುವ ಅವಕಾಶವನ್ನು ಆವರ್ತ ಆಧಾರದಲ್ಲಿ ಕಲ್ಪಿಸಿದೆ.

ಉತ್ಕೃಷ್ಟ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನೀಡುತ್ತಿರುವ ಹೆರಿಟೇಜ್ ಫುಡ್ಸ್ ತನ್ನ ಸಂಸ್ಕರಣಾ ಘಟಕಗಳಲ್ಲಿ ಎಲ್ಲ ಅಗತ್ಯ ಆಹಾರ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಾಹನ ಸಿಬ್ಬಂದಿ ಸೇರಿದಂತೆ ಫ್ಯಾಕ್ಟರಿಯ ಎಲ್ಲ ಉದ್ಯೋಗಿಗಳಿಗೆ ಪ್ರತಿದಿನ ಘಟಕಕ್ಕೆ ಪ್ರವೇಶಿಸುವ ಮುನ್ನ ತಪಾಸಣೆ ನಡೆಸಲಾಗುತ್ತದೆ.

“ಉತ್ಪನ್ನಗಳನ್ನು ಸುರಕ್ಷಿತವಾಗಿ ವಿತರಿಸಲು ಹಾಗೂ ಪೂರೈಸಲು ನಾವು ಮುಖದ ಮಾಸ್ಕ್‍ಗಳು, ಕೈ ಗವಸು ಮತ್ತು ಸ್ಯಾನಿಟೈಸರ್‍ಗಳನ್ನು ನಮ್ಮ ಎಲ್ಲ ವ್ಯಾಪಾರ ಸಿಬ್ಬಂದಿ ಮತ್ತು ವಿತರಣಾ ತಂಡಕ್ಕೆ ಒದಗಿಸಲಾಗುತ್ತದೆ.

ನಮ್ಮ ವಿತರಣಾ ವಾಹನದ ಚಾಲಕ, ಮಾರಾಟ ಸಿಬ್ಬಂದಿ, ವಿತರಣಾ ತಂಡದ ಸದಸ್ಯರಿಗೆ ನಿರಂತರವಾಗಿ ಆರೋಗ್ಯ ತಪಾಸಣೆಗಳನ್ನು ಮಾಡುತ್ತಿದ್ದೇವೆ ಹಾಗೂ ಯಾವುದೇ ರೋಗಲಕ್ಷಣ ಕಂಡುಬರುವ ಉದ್ಯೋಗಿಗಳಿಗೆ ತಕ್ಷಣವೇ ಸೂಕ್ತ ವೈದ್ಯಕೀಯ ತಪಾಸಣೆಗಳನ್ನು ನಡೆಸಲು ಸೌಲಭ್ಯ ಕಲ್ಪಿಸಲಾಗುತ್ತದೆ.

ಹೆರಿಟೇಜ್ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಸುಲಲಿತವಾಗಿ ಪೂರೈಸಲು ಅಗತ್ಯ ಕ್ರಮ ಕೈಗೊಂಡಿದೆ. ಮನೆಗಳಿಗೇ ನೇರವಾಗಿ ವಿತರಿಸುವ ಹಾಗೂ ಇ-ಕಾಮರ್ಸ್ ವಾಹಿನಿ ಮೂಲಕ ಕ್ರಮಗಳನ್ನು ಕೈಗೊಂಡಿದೆ.

ನಮ್ಮ ಗ್ರಾಹಕರು ಹೆಚ್ಚುವರಿ ಮುಂಜಾಗ್ರತಾ ಕ್ರಮವಾಗಿ ಹಾಲು/ ಮೊಸರು ಪ್ಯಾಕೆಟ್‍ಗಳನ್ನು ಬಳಸುವ ಮುನ್ನ ನೀರಿನಿಂದ ತೊಳೆದು, ಒರೆಸಿದ ಬಳಿಕ ಪ್ಯಾಕೆಟ್ ತೆರೆಯಬೇಕು” ಎಂದು ಹೆರಿಟೇಜ್ ಫುಡ್ಸ್ ಲಿಮಿಡೆಟ್‍ನ ಕಾರ್ಯನಿರ್ವಾಹಕ ನಿರ್ದೇಶಕಿ ಬ್ರಹ್ಮಿಣಿ ನಾರಾ, ಹೇಳಿದರು.

Web Title : Heritage Foods Ltd takes precautionary measures for milk and milk product delivery without spreading coronavirus