ಆಧಾರ್ ಇಲ್ವ, ಆಗಾದ್ರೆ ಅಂತ್ಯಕ್ರಿಯೆ ಇಲ್ಲ. ಬೆಂಗಳೂರಿನಲ್ಲಿ ಅಮಾನುಷ ಘಟನೆ

If No Aadhaar, there is no funeral, cremation incident in Bangalore

ಕನ್ನಡ ನ್ಯೂಸ್ ಟುಡೇ

ಬೆಂಗಳೂರು : ಅಯ್ಯೋ ರಾಮ, ಇದೆಂತ ಕಾಲ ಬಂತಪ್ಪ ಅಂದು ಕೊಳ್ಳೋದು ಬಿಟ್ರೆ ನಾವು ನೀವು ಏನು ಮಾಡೋಕೆ ಆಗುತ್ತೆ ಹೇಳಿ. ಇತ್ತೀಚಿಗೆ ಆಧಾರ್ ಹಾವಳಿ ಜಾಸ್ತಿ ಆಯ್ತು ಅನ್ನಿಸ್ತಾ ಇಲ್ವಾ ? ಹೌದು ಈ ಹಿಂದೆ ಅದಕ್ಕೆ ಲಿಂಕ್ ಮಾಡಿ , ಇದಕ್ಕೆ ಲಿಂಕ್ ಮಾಡಿ ಅನ್ನುತ್ತಿದ್ದ ಆಧಾರ್ ಕಾರ್ಡ್ ಈಗ ಅಂತ್ಯಕ್ರಿಯೆ ವೇಳೆಯೂ ಬಾಲ ಬಿಚ್ಚಿದೆ.

ಪಡಿತರಕ್ಕೆ ಆಧಾರ್, ಮನೆಗೆ ಆಧಾರ್, ಟ್ಯಾಕ್ಸಿಗಳಿಗೆ ಆಧಾರ್, ಅನಿಲಕ್ಕೆ ಆಧಾರ್, ನೀರಿಗಾಗಿ ಆಧಾರ್, ಆಧಾರ್ ಆಧಾರ್ ಆಧಾರ್, ಆಧಾರ್ ಸಂಖ್ಯೆ ಇಲ್ಲದಿದ್ದುದಕ್ಕೆ ಅಂತ್ಯಕ್ರಿಯೆಯನ್ನು ನಿರ್ಬಂಧಿಸಿದ ಅಮಾನವೀಯ ಘಟನೆ ಬೆಂಗಳೂರಿನ ಮಹಾನಗರದಲ್ಲಿ ನಡೆದಿದೆ. ಶವಾಗಾರದ ಸಂಘಟಕರು ಮಹಿಳೆಯ ಅಂತ್ಯಕ್ರಿಯೆಗೆ ಆಧಾರ್ ಇಲ್ಲವೆಂದು, ಅಂತ್ಯಕ್ರಿಯೆಗೆ ಅನುಮತಿಸದೆ, ಮೊದಲೇ ದುಃಖದಲ್ಲಿದ್ದ ಕುಟುಂಬವನ್ನು ಇನ್ನಷ್ಟು ಬಾದಿಸಿದೆ.. 

ಅಂತ್ಯಕ್ರಿಯೆಗೆ ಆಧಾರ್ ಕಾರ್ಡ್ ವಿವರಗಳನ್ನು ನೀಡಬೇಕೆಂದು ಶವಾಗಾರದವರು ಒತ್ತಾಹಿಸಿದ್ದಾರೆ. ಅಂತ್ಯಕ್ರಿಯೆಗಾಗಿ ಶವವನ್ನು ಸ್ಮಶಾನಕ್ಕೆ ಕರೆದೊಯ್ದಾಗ, ಸಂಘಟಕರು ಆಧಾರ್ ಮಾಹಿತಿ ಕೇಳಿದ್ದಾರೆ,  ಅದಕ್ಕೆ ಮೃತರ ಕುಟುಂಬ ಸದಸ್ಯರು, ಆಧಾರ್ ಕೇಳುವುದು ಸೂಕ್ತವಲ್ಲ, ಹಾಗೂ ಅದು ಖಡ್ಡಾಯವಲ್ಲ, ಎಂದರೂ, ಅವರು ಅದನ್ನು ಲೆಕ್ಕಿಸಲಿಲ್ಲ. ‘ಆಧಾರ್ ಇಲ್ಲವಾದರೆ, ಅಂತ್ಯಕ್ರಿಯೆ ಇಲ್ಲ . ಎಂದು ಕಡಾಖಂಡಿತವಾಗಿ.’ ಹೇಳಿದ್ದಾರೆ.

ಆದರೆ ಮೃತ ವ್ಯಕ್ತಿಯ ದೂರವಾಣಿ ಸಂಖ್ಯೆ ಕಾರ್ಯನಿರ್ವಹಿಸದ ಕಾರಣ ಆಧಾರ್ ವಿವರಗಳನ್ನು ಸಂಗ್ರಹಿಸುವುದು ಕಷ್ಟಕರವಾಗಿತ್ತು. ಕೊನೆಗೆ ಆಕೆಗೆ ದೂರವಾಣಿ ಸಂಖ್ಯೆ ಪಡೆದು ಮತ್ತು ಆಧಾರ್ ಸಂಖ್ಯೆ ತಿಳಿದು ವಿವರಗಳನ್ನು ಕೊಟ್ಟು ಅಂತ್ಯಕ್ರಿಯೆಗೆ ಅನುಮತಿ ಪಡೆಯಲಾಯಿತು.

ಈ ಸಂಬಂಧದ ಬಾರೀ ಟೀಕೆಗಳು ವ್ಯಕ್ತವಾಗಿದ್ದು, ಅಮಾನುಷ ಘಟನೆಯನ್ನು ಹಲವರು ಟೀಕಿಸಿದ್ದಾರೆ. ಅಂತ್ಯಕ್ರಿಯೆಗೆ  ವೈದ್ಯರ ಸಾವಿನ ಪ್ರಮಾಣಪತ್ರ ಅಥವಾ ಸತ್ತವರ ಸಂಬಂಧಿಕರ ಘೋಷಣೆ ಸಾಕು, ಆಧಾರ್ ಕಡ್ಡಾಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Web Title : If No Aadhaar, there is no funeral, cremation incident in Bangalore
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ  Facebook  | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.