ಇಂದಿರಾನಗರ 100 ಅಡಿ ರಸ್ತೆ ಅವ್ಯವಸ್ಥೆ : ‘ಕೂ’ ನಲ್ಲಿ ಜನರ ಆಕ್ರೋಶ

Indiranagar 100 feet road: ರಾಜ್ಯ ರಾಜಧಾನಿ ಬೆಂಗಳೂರಿನ ಐಷಾರಾಮಿ ಪ್ರದೇಶಗಳಲ್ಲಿ ಒಂದು ಎಂದೇ ಕರೆಸಿಕೊಳ್ಳುವ ಇಂದಿರಾನಗರ 100 ಅಡಿ ರಸ್ತೆ ಗುಂಡಿಗಳಿಂದನೇ ತುಂಬಿ ಹೋಗಿದ್ದು, ಅವ್ಯವಸ್ಥೆಯ ಆಗರವಾಗಿದೆ.

ಬೆಂಗಳೂರು (Indiranagar 100 feet road) : ರಾಜ್ಯ ರಾಜಧಾನಿ ಬೆಂಗಳೂರಿನ ಐಷಾರಾಮಿ ಪ್ರದೇಶಗಳಲ್ಲಿ ಒಂದು ಎಂದೇ ಕರೆಸಿಕೊಳ್ಳುವ ಇಂದಿರಾನಗರ 100 ಅಡಿ ರಸ್ತೆ ಗುಂಡಿಗಳಿಂದನೇ ತುಂಬಿ ಹೋಗಿದ್ದು, ಅವ್ಯವಸ್ಥೆಯ ಆಗರವಾಗಿದೆ.

ಇಂದಿರಾನಗರ ನೂರು (100) ಅಡಿ ರಸ್ತೆ, ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆ ಜೊತೆ ಹಳೆ ಮದ್ರಾಸ್ ರಸ್ತೆ ಸಂಪರ್ಕಿಸುತ್ತದೆ. ಒಂದು ಕೊನೆಯಲ್ಲಿ ಮಧ್ಯಂತರ ವರ್ತುಲ ರಸ್ತೆ ಫ್ಲೈಓವರ್ ಜಂಕ್ಷನ್ (ದೊಮ್ಮಲೂರು ಜಂ‍ಕ್ಷನ್), ಮತ್ತೊಂದು ಕೊನೆಯಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆ ಇದೆ. ಕಳೆದ ಕೆಲವು ವರ್ಷಗಳಿಂದ 100 ಅಡಿ ರಸ್ತೆ ಬೆಂಗಳೂರು ವಾಣಿಜ್ಯಿಕವಾಗಿ ಪ್ರಮುಖ ಉನ್ನತ ರಸ್ತೆಗಳಾಗಿ ಮಾರ್ಪಟ್ಟಿದೆ.indiranagar 100 feet road

ರಸ್ತೆಯ ಕೆಟ್ಟ ಪರಿಸ್ಥಿತಿ ಬಗ್ಗೆ ಸಾರ್ವಜನಿಕರು (Koo App) ಕೂ ಮಾಡಿದ್ದೂ, ದಿನ ಬೆಳಿಗ್ಗೆ ಈ ರಸ್ತೆಯಲ್ಲಿ ಕಚೇರಿಗೆ ಹೋಗುವುದೆಂದರೆ ಯಮ ಯಾತನೆ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಇಂದಿರಾನಗರ 100 ಅಡಿ ರಸ್ತೆ ಅವ್ಯವಸ್ಥೆ : 'ಕೂ' ನಲ್ಲಿ ಜನರ ಆಕ್ರೋಶ - Kannada News

‘ಐಟಿ ಕಂಪೆನಿಗಳೇ ಸಾಲು ಸಾಲು ಚಕ್ಕಳ ಮಕ್ಕಳ ಹಾಕಿ ಕೂತಂತಿರುವ ಇಂದಿರಾನಗರದ ರೋಡು ಮೈಕೈ ತೂತು ಮಾಡಿಕೊಂಡು ಸೊರಗಿ ಸತ್ತು ಹೋಗಿದೆ.. ಅದರ ಅವಸ್ಥೆ ನೋಡಿದರೆ ಆ ರೋಡಿಗೆ ಜನ್ಮವಿತ್ತವರ ಮುಖ ನೋಡ್ಬೇಕಲ್ಲ ಅನ್ಸತ್ತೆ, ಅದನ್ನ ಏನಾದ್ರು ಮಾಡ್ರಿ ರೀ ಶ್ರೀಮಾನ್ ಬೆಂಗಳೂರನವ್ರೆ! ಪಾಪ ಕೆಂಪೇಗೌಡ್ರು!’ ಎಂದು ಸುನಿಲ್ ಎನ್ನುವವರು ಕೂ (Koo Kannada) ಮಾಡಿದ್ದಾರೆ.

ಕಷ್ಟಕಷ್ಟ. ಬೆಂಗಳೂರಿನ ಇಂದಿರಾನಗರದ ೧೦೦ ಅಡಿ ವರ್ತುಲ ರಸ್ತೆಯಲ್ಲಿ ಪ್ರಯಾಣ ದೇವರಿಗೂ ಬೇಡ.  ಬಿಬಿಎಂಪಿ ರಸ್ತೆ ರಿಪೇರಿ ಮಾಡೋದಾದ್ರೂ ಯಾವಾಗ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಗಣೇಶ್

‘ಇಂದಿರಾ ನಗರದ 100 ಅಡಿ ವರ್ತುಲ ರಸ್ತೆಯಲ್ಲಿ ಸಾಗುವುದು ಜೀವ ಪಣಕ್ಕಿಟ್ಟು ನಡೆಸುವ ಯಾವುದೇ ಸಾಹಸಮಯ ಪ್ರದರ್ಶನ ನೀಡುವ ಸ್ಟಂಟ್ ಗಳಿಗೆ ಹೋಲಿಸಿದರೆ ಅದಕ್ಕಿಂತ ಕಡಿಮೆ ಅನುಭವನ್ನಂತೂ ನೀಡಲಾರದು. ನೀವೂ ಈ ಮಾರ್ಗದಲ್ಲಿ ಸಂಚರಿಸಿದ್ದರೆ ನಿಮ್ಮ ಅನಿಸಿಕೆ ಏನು?’ ಎಂದು ನರೇಶ್ ಕೂ ಮಾಡಿದ್ದಾರೆ.

Follow us On

FaceBook Google News