ಆತ್ಮಹತ್ಯೆ ಮಾಡಿಕೊಂಡ ಪುನೀತ್ ಅಭಿಮಾನಿ ಕುಟುಂಬವನ್ನು ಭೇಟಿ ಮಾಡಿದ ರಾಘವೇಂದ್ರ ರಾಜ್‌ಕುಮಾರ್
News in Kannada : ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹೆಸರು ಕೇಳಿದರೇನೇ ಏನೋ ವೈಬ್ರೇಷನ್ ಕಣ್ಣಿನ ಮುಂದೆ ಬಂದು ನಿಲ್ಲೋ ಮೈಕಟ್ಟು, ಬಾಯಿ ತುಂಬಾ ಹೆಂಗಳೆಯರನ್ನು "ಅಮ್ಮಾ" ಅನ್ನುತ್ತಿದ್ದ ಕರ್ನಾಟಕದ ಪ್ರತಿ ಮನೆಯ ಮಗ. ನಮ್ಮನ್ನು ಆಗಲಿ ಸ್ಯಾಂಡಲ್ ವುಡ್ ಅನಾಥವಾಗಿಸಿದ್ದಾರೆ.
ಬೆಂಗಳೂರು (News in Kannada) : ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹೆಸರು ಕೇಳಿದರೇನೇ ಏನೋ ವೈಬ್ರೇಷನ್ ಕಣ್ಣಿನ ಮುಂದೆ ಬಂದು ನಿಲ್ಲೋ ಮೈಕಟ್ಟು, ಬಾಯಿ ತುಂಬಾ ಹೆಂಗಳೆಯರನ್ನು “ಅಮ್ಮಾ” ಅನ್ನುತ್ತಿದ್ದ ಕರ್ನಾಟಕದ ಪ್ರತಿ ಮನೆಯ ಮಗ. ನಮ್ಮನ್ನು ಆಗಲಿ ಸ್ಯಾಂಡಲ್ ವುಡ್ ಅನಾಥವಾಗಿಸಿದ್ದಾರೆ.
ಅವರ ಸ್ಥಾನಕ್ಕೆ ಇನ್ನಾರು ಹೋಲುವುದಿಲ್ಲ, ಕಹಿ ಸತ್ಯ ತಿಳಿದ ಕ್ಷಣ ಪ್ರತಿ ಮನೆಯಲ್ಲೂ ಸೂತಕದ ಛಾಯೆ, ಮನೆ ಮಗನೆ ನಿಧನನಾದ ಕೊರಗು, ಕಳವಳ… ರಾಜ್ಯದ ಮೂಲೆ ಮೂಲೆಯಿಂದ ಅಪ್ಪು ಕೊನೆ ದರ್ಶನ ಪಡೆಯಲು ಜನರು ತಂಡೋಪ ತಂಡವಾಗಿ ಬಂದರು…. ಜೊತೆಗೆ ರಾಜ್ಯದಲ್ಲಿ ಅವರ ಸಾವನ್ನು ಸಹಿಸದೆ ಕೆಲವರು ಆತ್ಮಹತ್ಯೆ ಮಾರ್ಗವನ್ನು ಹಿಡಿದರು.
ಅವರ ಸಾವನ್ನು ಸಹಿಸಲಾಗದೆ ಚನ್ನಪಟ್ಟಣ ತಾಲೂಕಿನ ಎಲೆಕೇರಿ ನಿವಾಸಿ ವೆಂಕಟೇಶ್ (25) ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪುನೀತ್ ಸಹೋದರ ರಾಘವೇಂದ್ರ ರಾಜ್ ಕುಮಾರ್ ಬುಧವಾರ ವೆಂಕಟೇಶ್ ಕುಟುಂಬಕ್ಕೆ ಭೇಟಿ ನೀಡಿದ್ದರು. ದಯವಿಟ್ಟು ಅಭಿಮಾನಿಗಳು ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು, ವೆಂಕಟೇಶ್ ಕುಟುಂಬಕ್ಕೆ ಧೈರ್ಯ ತುಂಬಿದರು.
Follow us On
Google News |