ಅಂಬೇಡ್ಕರ್ ಜಯಂತಿಯಂದು ಬಿಡುಗಡೆಯಾಗಿರುವ ಕೆಜಿಎಫ್ 2 ಚಿತ್ರ ಶತದಿನೋತ್ಸವ ಆಚರಿಸಲಿ – ಪ್ರಸನ್ನ ಪಿ ಗೌಡ

ಕೆಜಿಎಫ್ 2 ಚಿತ್ರದ ಬಿಡುಗಡೆಯ ಸಲುವಾಗಿ ಯಶ್ ಅಭಿಮಾನಿಗಳ ವತಿಯಿಂದ ರಾಜ್ಯದ ಹಲವೆಡೆ ಹಲವಾರು ರೀತಿಯ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ .

Online News Today Team

ಕೆಜಿಎಫ್ 2 ಚಿತ್ರದ ಬಿಡುಗಡೆಯ ಸಲುವಾಗಿ ಯಶ್ ಅಭಿಮಾನಿಗಳ ವತಿಯಿಂದ ರಾಜ್ಯದ ಹಲವೆಡೆ ಹಲವಾರು ರೀತಿಯ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ .

ಬೆಂಗಳೂರು ಗ್ರಾಮಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬಸ್ ನಿಲ್ದಾಣದಲ್ಲಿ ಇಂದು ದೊಡ್ಡಬಳ್ಳಾಪುರ ತಾಲ್ಲೂಕು ಯುವ ಕೇಸರಿ ಯಶ್ ಬಾಸ್ ಅಭಿಮಾನಿಗಳ ಸಂಘ ಹಾಗೂ ಪ್ರಸನ್ನ ಫೌಂಡೇಶನ್ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಮುಖ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

ಕಾರ್ಯಕ್ರಮದಲ್ಲಿ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಸನ್ನ ಫೌಂಡೇಶನ್ಸ್ ನ ಸಂಸ್ಥಾಪಕ ಅಧ್ಯಕ್ಷರಾದ ಪ್ರಸನ್ನ ಪಿ ಗೌಡರವರು ಆಗಮಿಸಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಸನ್ನ ಪಿ ಗೌಡರವರು ಕನ್ನಡದ ಸಿನಿಮಾಗಳು ಪ್ರಪಂಚದಾದ್ಯಂತ ಪ್ರಸಾರವಾಗುತ್ತಿರುವುದು ಹೆಮ್ಮೆಯ ವಿಷಯ ಇದೇ ರೀತಿ ಮುಂದೆಯೂ ಕೂಡ ಕನ್ನಡದ ಕಂಪು ಎಲ್ಲೆಲ್ಲೂ ಬೀರಲಿ ಕನ್ನಡಿಗರು ಹೆಮ್ಮೆಯಿಂದ ಬದುಕುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲೂಕು ಯುವ ಕೇಸರಿ ಯಶ್ ಬಾಸ್ ಅಭಿಮಾನಿಗಳ ಸಂಘ ಹಾಗೂ ಪ್ರಸನ್ನ ಫೌಂಡೇಶನ್ ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಹರೀಶ್, ದೊಡ್ಡಬಳ್ಳಾಪುರ

Follow Us on : Google News | Facebook | Twitter | YouTube