ನೈಟ್ ಕರ್ಫ್ಯೂ: ಮದ್ಯದಂಗಡಿಗಳು ಬಂದ್

ಬ್ರಿಟನ್ ನಲ್ಲಿ ಕೊರೊನಾ ವೈರಸ್ ಹೊಸ ತಳಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬುಧವಾರ (ಡಿ.23) ರಾತ್ರಿಯಿಂದಲೇ ಜನವರಿ 2 ರವರೆಗೆ ಮತ್ತೊಮ್ಮೆ ನೈಟ್ ಕರ್ಫ್ಯೂ ಜಾರಿಗೊಳಿಸಿ ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ.

(Kannada News) : Liquor stores are closed on Night Curfew : ಬ್ರಿಟನ್ ನಲ್ಲಿ ಕೊರೊನಾ ವೈರಸ್ ಹೊಸ ತಳಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬುಧವಾರ (ಡಿ.23) ರಾತ್ರಿಯಿಂದಲೇ ಜನವರಿ 2 ರವರೆಗೆ ಮತ್ತೊಮ್ಮೆ ನೈಟ್ ಕರ್ಫ್ಯೂ ಜಾರಿಗೊಳಿಸಿ ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ.

ಇದರಿಂದಾಗಿ ಹೊಸ ವರ್ಷಾಚರಣೆ ಸಂಭ್ರಮಿಸುವ ಉತ್ಸುಕತೆಯಲ್ಲಿದ್ದ ಪಾರ್ಟಿ ಪ್ರೀಯರಿಗೆ ನಿರಾಸೆಯುಂಟಾಗಿದೆ. ಅಲ್ಲದೇ, ರಾತ್ರಿ ಕರ್ಪ್ಯೂನಿಂದಾಗಿ ಕ್ರಿಸ್ ಮಸ್ ಹಾಗೂ ಹೊಸ ವರ್ಷ ಸಂಭ್ರಮ ಸಡಗರದ ಮೇಲೆ ಕರಿನೆರಳು ಆವರಿಸಿದೆ.

ಇದರ ಬೆನ್ನಲ್ಲೇ ಗಾಯದ ಮೇಲೆ ಬರೆ ಎಳದಂತೆ ಮದ್ಯ ಪ್ರಿಯರಿಗೆ ಅಬಕಾರಿ ಸಚಿವ ಎಚ್.ನಾಗೇಶ್ ಅಘಾತ ನೀಡಿದ್ದಾರೆ. ಈ ಬಗ್ಗೆ ಕೋಲಾರದಲ್ಲಿ ಮಾತನಾಡಿರುವ ಅಬಕಾರಿ ಸಚಿವ ಎಚ್. ನಾಗೇಶ್ ಅವರು, ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಹಿನ್ನಲೆಯಲ್ಲಿ ರಾತ್ರಿ 10 ಗಂಟೆಯ ನಂತರ ಮದ್ಯ ಮಾರಾಟವನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದಿದ್ದಾರೆ.

ಹಾಗಾಗಿ ರಾಜ್ಯದಲ್ಲಿ 10 ಗಂಟೆಗೆ ಮದ್ಯದ ಅಂಗಡಿಗಳು ಬಂದ್ ಆಗಲಿವೆ. ಜೊತೆಗೆ ಈ ಮಾರ್ಗಸೂಚಿಯನ್ನು ಪಾಲಿಸದಿದ್ದಲ್ಲಿ ಲಿಕ್ಕರ್ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ರಾಜ್ಯದಲ್ಲಿ ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್ ಎಲ್ಲವೂ ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಬಂದ್ ಆಗಲಿವೆ. ಸರ್ಕಾರಕ್ಕೆ ಮದ್ಯದಿಂದ ಬರುವ ಆದಾಯಕ್ಕಿಂತ ಜನರ ಜೀವ ರಕ್ಷಣೆ ಸರ್ಕಾರಕ್ಕೆ ಮುಖ್ಯವಾಗಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದರು.

Web Title : Liquor stores are closed on Night Curfew