ಬೆಂಗಳೂರು ಮಸಾಜ್ ಪಾರ್ಲರ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ಯತ್ನ ಆರೋಪಿ ಬಂಧನ
ಬೆಂಗಳೂರಿನ ಮಸಾಜ್ ಪಾರ್ಲರ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಬಂಧಿಸಲಾಗಿದೆ
ಜಯನಗರ, ಬೆಂಗಳೂರು (Bengaluru): ಬೆಂಗಳೂರಿನ ಮಸಾಜ್ ಪಾರ್ಲರ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಬಂಧಿಸಲಾಗಿದೆ.
ಬೆಂಗಳೂರು ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಸಾಜ್ ಸೆಂಟರ್ ಇದೆ. ಅಲ್ಲಿ 21 ವರ್ಷದ ಯುವತಿ ಕೆಲಸ ಮಾಡುತ್ತಿದ್ದಾಳೆ. ಮಸಾಜ್ ಸೆಂಟರ್ ನ ಮಹಿಳಾ ಮಾಲೀಕಿ ಹಾಗೂ ರವೀಂದ್ರ ಶೆಟ್ಟಿ (ವಯಸ್ಸು 42) ಸ್ನೇಹಿತರಾಗಿದ್ದರು. ಇದರಿಂದಾಗಿ ರವೀಂದ್ರ ಶೆಟ್ಟಿ ಮಸಾಜ್ ಸೆಂಟರ್ ಗೆ ಆಗಾಗ ಭೇಟಿ ನೀಡುವುದನ್ನು ರೂಢಿ ಮಾಡಿಕೊಂಡಿದ್ದರು.
ಈ ವೇಳೆ ಯುವತಿ ಒಂಟಿಯಾಗಿರುವಾಗ ಮಸಾಜ್ ಸೆಂಟರ್ ಗೆ ಬಂದ ರವೀಂದ್ರ ಶೆಟ್ಟಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡದಂತೆ ರವೀಂದ್ರ ಶೆಟ್ಟಿ ಬೆದರಿಕೆ ಹಾಕಿದ್ದಾರಂತೆ. ಘಟನೆಯ ಬಗ್ಗೆ ಆಕೆ ಯಾರಿಗೂ ಹೇಳಿರಲ್ಲ. ಕೊನೆಗೆ ಯುವತಿ ಮನೆಯವರಿಗೆ ಹೇಳಿದ್ದಾಳೆ. ನಂತರ ಯುವತಿಯ ಪೋಷಕರು ರವೀಂದ್ರ ಶೆಟ್ಟಿ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರವೀಂದ್ರ ಶೆಟ್ಟಿಯನ್ನು ಬಂಧಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ.
Man arrested for Trying rape young girl at massage center in Bengaluru
Follow us On
Google News |
Advertisement