Welcome To Kannada News Today

MetroRide: ಇಂದಿರಾನಗರ ಮೆಟ್ರೋ ನಿಲ್ದಾಣದಿಂದ ಮೆಟ್ರೋರೈಡ್ ಕಾರ್ಯಾಚರಣೆ ಆರಂಭ

MetroRide - Indiranagar: ಭಾರತದ ಮೊದಲ ಎಐ- ಚಾಲಿತ ಎಲೆಕ್ಟ್ರಿಕ್ ಸಾರಿಗೆ ವೇದಿಕೆಯಾಗಿರುವ ಮೆಟ್ರೋರೈಡ್ ತನ್ನ ಸೇವೆಯನ್ನು ಇದೀಗ ಬೆಂಗಳೂರಿನ ಇಂದಿರಾನಗರದಲ್ಲಿಯೂ ಆರಂಭಿಸಿದೆ. ಮೆಟ್ರೋ ನಿಲ್ದಾಣದಿಂದ ಮೆಟ್ರೋರೈಡ್ ಕಾರ್ಯಾಚರಣೆ ಆರಂಭಗೊಂಡಿದೆ.

🌐 Kannada News :

MetroRide – Indiranagar: ಇನ್ನು ಮುಂದೆ ಇಂದಿರಾನಗರ ಮೆಟ್ರೋ ನಿಲ್ದಾಣದಿಂದ ಎಂಬಸಿ ಗಾಲ್ಫ್ ಲಿಂಕ್ಸ್ ವರೆಗೆ ಸೇವೆ ಒದಗಿಸಲಿರುವ ಎಲೆಕ್ಟ್ರಿಕ್ ಸಾರಿಗೆ ವ್ಯವಸ್ಥೆಯಾದ ಮೆಟ್ರೋರೈಡ್, ಭಾರತದ ಮೊದಲ ಎಐ- ಚಾಲಿತ ಎಲೆಕ್ಟ್ರಿಕ್ ಸಾರಿಗೆ ವೇದಿಕೆಯಾಗಿರುವ ಮೆಟ್ರೋರೈಡ್ ತನ್ನ ಸೇವೆಯನ್ನು ಇದೀಗ ಬೆಂಗಳೂರಿನ ಇಂದಿರಾನಗರದಲ್ಲಿಯೂ ಆರಂಭಿಸಿದೆ.

ಇದರ ಮೂಲಕ ಪ್ರಯಾಣಿಕರು ಇಂದಿರಾನಗರ ಮೆಟ್ರೋ ನಿಲ್ದಾಣದಿಂದ ತಮ್ಮ ಸ್ಥಳಗಳನ್ನು ತಲುಪಲು ಎಲೆಕ್ಟ್ರಿಕ್ ಆಟೋಗಳನ್ನು ಬಳಸಬಹುದಾಗಿದ್ದು, ಇದರ ಆರಂಭಿಕ ಪ್ರಯಾಣ ದರ 10 ರೂಪಾಯಿಗಳಿಂದ ಆರಂಭವಾಗಲಿದೆ.

ಪ್ರಸ್ತುತ ಮೆಟ್ರೋರೈಡ್ 100 ಅಡಿ ರಸ್ತೆ ಮಾರ್ಗವಾಗಿ ಇಂದಿರಾನಗರ ಮೆಟ್ರೋ ನಿಲ್ದಾಣದಿಂದ ಎಂಬಸಿ ಗಾಲ್ಫ್ ಲಿಂಕ್ಸ್(ಇಜಿಎಲ್) ಅನ್ನು ಸಂಪರ್ಕಿಸಲಿದೆ. ಇದರ ಮೂಲಕ ಪ್ರಯಾಣಿಕರು ತಮ್ಮ ಮೆಟ್ರೋ ಪ್ರಯಾಣವನ್ನು ಕೈಗೆಟುಕುವ ದರದಲ್ಲಿ, ತ್ವರಿತವಾಗಿ ಮತ್ತು ಕಾರ್ಬನ್ ಮುಕ್ತವಾಗಿ ಕೈಗೊಳ್ಳಲು ಸಹಕಾರಿಯಾಗಲಿದೆ.

ಈ ಸೇವೆಯನ್ನು ಆರಂಭಿಸಿದ ಸಂದರ್ಭದಲ್ಲಿ ಮಾತನಾಡಿದ ಮೆಟ್ರೋರೈಡ್‍ನ ಸಿಇಒ ಮತ್ತು ಸಹ-ಸಂಸ್ಥಾಪಕ ಗಿರೀಶ್ ನಾಗಪಾಲ್ ಅವರು, “ನಮ್ಮ ನಗರಗಳಲ್ಲಿ ಇರುವ ಮೊದಲ ಮತ್ತು ಕೊನೆಯ ಸ್ಥಳಗಳ ನಡುವಿನ ಸಂಪರ್ಕದ ಸಮಸ್ಯೆಯನ್ನು ಬಗೆಹರಿಸಲು ನಾವು ಬದ್ಧರಾಗಿದ್ದೇವೆ.

ಈ ನಿಟ್ಟಿನಲ್ಲಿ ನಾವು ಸರ್ಕಾರ, ನಮ್ಮ ಮೆಟ್ರೋ ಮತ್ತು ಸಂಚಾರ ವಿಭಾಗದ ಅಧಿಕಾರಿಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಜನರು ಹಸಿರು ಸಾರಿಗೆ ಪರಿಹಾರಗಳು ಮತ್ತು ಹಂಚಿಕೆ ಸಾರಿಗೆ ವ್ಯವಸ್ಥೆಗಳತ್ತ ಗಮನಹರಿಸುವಂತೆ ಮಾಡುವಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ’’ ಎಂದರು.

ಮೆಟ್ರೋರೈಡ್, ಇಂದಿರಾನಗರ
ಮೆಟ್ರೋರೈಡ್, ಇಂದಿರಾನಗರ

ಮೆಟ್ರೋರೈಡ್‍ನ ಸಿಟಿಒ ಮತ್ತು ಸಹ-ಸಂಸ್ಥಾಪಕ ಕಮನ್ ಅಗರ್‍ವಾಲ್ ಅವರು ಮಾತನಾಡಿ, “ಇಂದಿರಾನಗರವು ಬೆಂಗಳೂರಿನ ಅತ್ಯಂತ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಇದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಟೆಕ್ ಪಾರ್ಕ್‍ಗಳು ಮತ್ತು ಕಚೇರಿಗಳು ಇದ್ದು, ಇಲ್ಲಿಗೆ ಸಂಪರ್ಕ ಕಲ್ಪಿಸುವ 100 ಅಡಿ ರಸ್ತೆಯಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದೆ.

ನಮ್ಮ ಅತ್ಯಂತ ಸರಳವಾದ ಆ್ಯಪ್ ದೈನಂದಿನ ಪ್ರಯಾಣಿಕರು ಕೇವಲ 2 ಕ್ಲಿಕ್‍ಗಳೊಂದಿಗೆ ರೈಡ್ ಅನ್ನು ಬುಕ್ ಮಾಡಲು ನೆರವಾಗುತ್ತದೆ. ಇದರ ಮೂಲಕ ಯಾವುದೇ ಸಮಸ್ಯೆ ಇಲ್ಲದೇ ಮತ್ತು ಚಿಲ್ಲರೆ ಸಮಸ್ಯೆ ಇಲ್ಲದೇ ಸುಲಭದ ಪ್ರಯಾಣ ಅನುಭವವನ್ನು ಹೊಂದಬಹುದಾಗಿದೆ’’ ಎಂದು ತಿಳಿಸಿದರು.

ಈ ಸೇವೆಯನ್ನು ಆರಂಭಿಸಿದ ಕೇವಲ 7 ತಿಂಗಳಲ್ಲಿ 75,000 ಕ್ಕೂ ಹೆಚ್ಚು ಗ್ರಾಹಕರು ಸೇವೆಯ ಪ್ರಯೋಜನ ಪಡೆದಿದ್ದಾರೆ. ಸರಾಸರಿ ಪ್ರತಿ ರೈಡ್‍ಗೆ ಕಾಯುವ ಸಮಯ 2.01 ನಿಮಿಷಗಳಾಗಿದೆ. ದಿನನಿತ್ಯದ ಪ್ರಯಾಣ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸುವ ಉದ್ದೇಶದಿಂದ ಆರಂಭವಾದ ಈ ಸೇವೆಗೆ ಗ್ರಾಹಕರ ಉತ್ಸಾಹಪೂರ್ಣ ಪ್ರತಿಕ್ರಿಯೆ ದೊರೆಯುತ್ತಿದ್ದು, ಇದರ ಯಶಸ್ಸಿಗೆ ಕಾರಣವಾಗಿದೆ.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.