ಜಪಾನ್ ನಲ್ಲಿ ಭಾರತೀಯರಿಗೆ ಹೆಚ್ಚಿನ ಉದ್ಯೋಗಾವಕಾಶ; ಜಪಾನ್ ರಾಯಭಾರಿ ಎಚ್.ಇ. ಸತೋಷಿ ಸುಜುಕಿ
ಹಿಂದಿ ಭಾಷೆಯಲ್ಲಿ ಜಪಾನೀಸ್ ಕಲಿಕೆಯ ವಿಶ್ವದಲ್ಲೇ ಪ್ರಪ್ರಥಮ ಪುಸ್ತಕ ಮಾಂತೇನ್ ಬಿಡುಗಡೆ, ದಕ್ಷಿಣ ಭಾರತದ ಭಾಷೆಗಳಲ್ಲೂ ತರ್ಜುಮೆಗೆ ಸಿದ್ದತೆ
ಬೆಂಗಳೂರು (Bengaluru): ಜಪಾನ್ ದೇಶದಲ್ಲಿ ವೃದ್ದಾಪ್ಯರ ಸಂಖ್ಯೆ ಹೆಚ್ಚಿದೆ. ಇವರ ಆರೈಕೆ, ಹಾಸ್ಪಿಟಾಲಿ ಮತ್ತು ಕೃಷಿ ಮತ್ತು ಇತರೆ ಕ್ಷೇತ್ರಗಳಲ್ಲೂ ಉದ್ಯೋಗಾವಕಾಶಗಳು ಹೆಚ್ಚಿದ್ದು, ಭಾರತೀಯರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಲು ನಾವೀಸ್ ಸಂಸ್ಥೆ ಹೊರತಂದಿರುವ ಹಿಂದಿ ಭಾಷೆಯಲ್ಲಿ ಜಪಾನೀಸ್ ಕಲಿಕೆಯ ವಿಶ್ವದ್ಲಲೇ ಪ್ರಪ್ರಥಮ ಪುಸ್ತಕ ಮಾಂತೇನ್ ನಂತಹ ಭಾರತೀಯ ಭಾಷೆಯ ಪುಸ್ತಕಗಳು ಸಹಾಯ ಮಾಡಲಿವೆ ಎಂದು ಜಪಾನ್ ದೇಶದ ರಾಯಭಾರಿ ಎಚ್.ಇ ಸತೋಷಿ ಸುಜುಕಿ ಅಭಿಪ್ರಾಯಪಟ್ಟರು.
ಇಂದು ಬೆಂಗಳೂರಿನಲ್ಲಿ ʼನವೀಸ್ ಹ್ಯೂಮನ್ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ʼ ಸಂಸ್ಥೆಯು ಹೊರತಂದಿರುವ ಹಿಂದಿ ಭಾಷೆಯ ಮೂಲಕ ಜಪಾನೀಸ್ ಕಲಿಕೆಯ ವಿಶ್ವದ ಪ್ರಪ್ರಥಮ ಪುಸ್ತಕ ʼಮಾಂತೇನ್ʼ ಎನ್ನುವ ಪುಸ್ತಕವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು,
ಜಪಾನ್ ಹಾಗೂ ಭಾರತ ದೇಶ ಬಹಳ ಆತ್ಮೀಯ ಸಂಬಂಧವನ್ನು ಹೊಂದಿವೆ. ದಶಕಗಳ ಈ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಜಪಾನ್ ದೇಶದಲ್ಲಿ ವೃದ್ದರ ಸಂಖ್ಯೆ ಹೆಚ್ಚಿದೆ. ಅವರ ಆರೈಕೆಗೆ ಅಗತ್ಯವಿರುವ ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲದ ಅಗತ್ಯತೆ ಹೆಚ್ಚಾಗಿದೆ. ಅದರಲ್ಲೂ ಜಪಾನೀಸ್ ಭಾಷೆಯನ್ನು ಕಲಿತಿರುವಂತಹ ಆರೈಕೆ ಕ್ಷೇತ್ರದ ಜನರಿಗೆ ಉತ್ತಮ ಬೇಡಿಕೆಯೂ ಇದೆ.
ಜಪಾನ್ ದೇಶದಲ್ಲಿ ಉದ್ಯೋಗ ಪಡೆಯಲು ಜಪಾನೀಸ್ ಭಾಷೆಯನ್ನು ಕಲಿತಿರುವುದು ಕಡ್ಡಾಯ. ಆ ಭಾಷೆಯನ್ನು ಸುಲಭವಾಗಿ ಕಲಿಯುವ ನಿಟ್ಟಿನಲ್ಲಿ ಪ್ರಪ್ರಥಮವಾಗಿ ಭಾರತೀಯ ಭಾಷೆ ಹಿಂದಿಯಲ್ಲಿ ಹೊರತಂದಿರುವ ಮಾಂತೇನ್ (ಹಿಂದಿ-ಜಪಾನೀಸ್) ಪುಸ್ತಕ ಬಹಳಷ್ಟು ಅನುಕೂಲಕಾರಿಯಾಗಲಿದೆ. ಭಾರತೀಯ ಯುವ ಜನತೆ ಈ ಉದ್ಯೋಗಾವಕಾಶಗಳ ಸದುಪಯೋಗ ಪಡೆದುಕೊಳ್ಳುವಂತೆ ಜಪಾನ್ ದೇಶದ ರಾಯಭಾರಿ ಎಚ್.ಇ ಸತೋಷಿ ಸುಜುಕಿ ಕರೆ ನೀಡಿದರು.
ಇದನ್ನೂ ಓದಿ : ವೆಬ್ ಸ್ಟೋರೀಸ್
ನಾವೀಸ್ ಸಂಸ್ಥೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಸಂಬಂದಮ್ ರಾಜಕುಮಾರ್ ಮಾತನಾಡಿ, ನಮ್ಮ ಸಂಸ್ಥೆ ಜಪಾನ್ ದೇಶದ ಜೊತೆ ಉತ್ತಮ ಸಂಬಂಧ ಹೊಂದಿದೆ. ಭಾರತದಲ್ಲಿ ಜಪಾನ್ ಭಾಷೆ ಕಲಿಸುವ ತರಬೇತಿ ಕೇಂದ್ರವಾಗಿರುವ ನವೀಸ್, ಕಳೆದ 20 ವರ್ಷಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿಗೆ ಜಪಾನ್ ಭಾಷೆಯ ತರಬೇತಿ ನೀಡಿದೆ.
ನವೀಸ್ ಸಂಸ್ಥೆಯಲ್ಲಿ ಜಪಾನ್ ಭಾಷೆ ಕಲಿಸುವ 13 ಬೋಧಕರಿದ್ದು ಎಲ್ಲರೂ ಸ್ಥಳೀಯ ಜಪಾನೀ ಭಾಷೆಯಲ್ಲಿ ತರಬೇತು ಪಡೆದ ಶಿಕ್ಷಕರಾಗಿದ್ದಾರೆ. ಜಪಾನ್ ಭಾಷೆಯನ್ನು ಹೆಚ್ಚು ಹೆಚ್ಚು ಜನರಿಗೆ ಕಲಿಸಬೇಕು ಎನ್ನುವ ಮಹಾತ್ವಾಕಾಂಕ್ಷೆ ಹೊಂದಿರುವ ಸಂಸ್ಥೆ ಫೆಬ್ರುವರಿ 2021 ರಲ್ಲಿ ಇಂಗ್ಲಿಷ್ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ವಿಶೇಷ ಕೌಶಲ ಬಯಸುವ ಉದ್ಯಮದಲ್ಲಿ ತೊಡಗಿರುವವರಿಗಾಗಿ ಇಂಗ್ಲಿಷ್ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದ ಸಂಸ್ಥೆಯು ಇದೀಗ ಹಿಂದಿ ಮಾತೃಭಾಷಿಗರಿಗೆ ಸುಲಭವಾಗಲೆಂದು ಹಿಂದಿ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.
2019 ಮಾರ್ಚ್‌ನಿಂದ ಇದುವರೆಗೆ 69 ನರ್ಸ್‌ಗಳನ್ನು ಆರೈಕೆದಾರರಾಗಿ ಜಪಾನ್‌ಗೆ ಕಳುಹಿಸಿಕೊಟ್ಟಿದೆ ನವೀಸ್. ಭಾರತದಿಂದ ಶೇ 70ರಷ್ಟು ಆರೈಕೆದಾರರನ್ನು ನಿಯೋಜಿಸಿಕೊಡುವ ಜವಾಬ್ದಾರಿಯನ್ನು ಸಂಸ್ಥೆ ಹೊತ್ತುಕೊಂಡಿದ್ದು, ಈ ವರ್ಷ 400 ಭಾರತೀಯರನ್ನು ಉದ್ಯೋಗಕ್ಕೆ ಜಪಾನ್ ದೇಶಕ್ಕೆ ಕಳುಹಿಸಿಕೊಡುವ ಗುರಿಯನ್ನು ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಇತರೆ ಬಾಷೆಗಳಲ್ಲೂ ತರ್ಜುಮೆ ಮಾಡುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಸಿಇಓ ಥಕಾಕೋ ಓಶಿಬುಚಿ, ಆಪರೇಷನ್ಸ್ ಮ್ಯಾನೇಜರ್ ರಾಜೇಶ್ವರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Follow us On
Google News |
Advertisement