ಮಾರ್ಚ್‌ 21 ರಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ

ಮಾರ್ಚ್ 21 ಮಂಗಳವಾರದಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಮನೆ ಮನೆಗೆ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು (Bengaluru): ಮಾರ್ಚ್ 21 ಮಂಗಳವಾರದಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಮನೆ ಮನೆಗೆ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್‍ಡಿ ಕುಮಾರಸ್ವಾಮಿರವರು ಚಾಲನೆ ನೀಡಲಿದ್ದಾರೆ ಎಂದು ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಡಾ. ಸಯ್ಯದ್ ಮೋಹಿದ್ ಅಲ್ತಾಫ್ ಹೇಳಿದರು.

ಇಂದು ಈ ಬಗ್ಗೆ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮವು ಮಧ್ಯಾಹ್ನ 2 ಗಂಟೆಗೆ ಹೆಬ್ಬಾಳದ ಶ್ರೀ ರಾಧಾಕೃಷ್ಣ ದೇವಸ್ಥಾನದಿಂದ ಆರಂಭಗೊಂಡು, 10 ಕಿಲೋಮಿಟರ್ ದೂರದ ವರೆಗೆ ರೋಡ್ ಶೋ ನಡೆಯಲಿದೆ ಎಂದರು.

ಸಂಜೆ 5 ಗಂಟೆಗೆ ಎಚ್ ಎಂ ಟಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಅವರು ಪಾಲ್ಗೊಳ್ಳಲಿದ್ದಾರೆ.

ಮಾರ್ಚ್‌ 21 ರಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ - Kannada News

ಈ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ – ಜೆಡಿಎಸ್‌ನ ರಾಜ್ಯಾಧ್ಯಕ್ಷರಾದ ಶ್ರೀ ಸಿಎಂ ಇಬ್ರಾಹಿಂ, ವಿಧಾನಸಭಾ ಶಾಸಕರಾದ ಶ್ರೀ ಬಂಡೆಪ್ಪ ಖಾಶೆಂಪೂರ್, ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷರಾದ ಒಬೈದುಲ್ಲಾ ಖಾನ್ ಆಜ್ಮಿ ಮತ್ತು ಪಕ್ಷದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಪಂಚರತ್ನ ರಥಯಾತ್ರೆಯಲ್ಲಿ ಪಕ್ಷದ ಪ್ರಮುಖ ಮುಖಂಡರು, ನಾಯಕರು,  ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಪಂಚರತ್ನ ರಥಯಾತ್ರೆ ಮಾರ್ಗ ನಕ್ಷೆ

1)ಸಂಜಯನಗರ ರಾಧಾ ಕೃಷ್ಣ ದೇವಸ್ಥಾನ

2) ನಾಗಶೆಟ್ಟಿ ಹಳ್ಳಿ ಬಸ್ ನಿಲ್ದಾಣ

3) ಭೂಪಸಂದ್ರ ಮುಖ್ಯ ರಸ್ತೆ

4) ಹೆಬ್ಬಾಳ ಫ್ಲೈಓವರ್ ಸುಮಂಗಲಿ ಸೇವಾಶ್ರಮ ರಸ್ತೆ

5) ಕನಕನಗರ ರಸ್ತೆ

6) ದೇವೇಗೌಡ ರಸ್ತೆ

7) ರವೀಂದ್ರನಾಥ ಟ್ಯಾಗೋರ್ ವೃತ್ತ

8) ಎಚ್.ಎಮ್.ಟಿ  ಮೈದಾನ (ಬಹಿರಂಗ ಸಭೆ)

Pancharatna Rath Yatra in Hebbal Assembly Constituency on March 21

Follow us On

FaceBook Google News

Advertisement

ಮಾರ್ಚ್‌ 21 ರಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ - Kannada News

Pancharatna Rath Yatra in Hebbal Assembly Constituency on March 21

Read More News Today