ಮಂಕಿಪಾಕ್ಸ್ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ; ಆರೋಗ್ಯ ಸಚಿವ ಸುಧಾಕರ್
ಮಂಕಿಪಾಕ್ಸ್ ಬಗ್ಗೆ ಜನ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಬೆಂಗಳೂರು (Bengaluru): ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಥಿಯೋಪಿಯಾ ಮೂಲದ 55 ವರ್ಷದ ವ್ಯಕ್ತಿಗೆ ಮಂಕಿಪಾಕ್ಸ್ (Monkeypox) ಲಕ್ಷಣಗಳು ಕಂಡುಬಂದಿವೆ. ಈ ಕುರಿತು ನಿನ್ನೆ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಸುಧಾಕರ್ ಅವರನ್ನು ಸುದ್ದಿಗಾರರು ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಅವರು..
ಬೆಂಗಳೂರಿನಲ್ಲಿ ಮಂಕಿಪಾಕ್ಸ್ ಲಕ್ಷಣಗಳಿರುವ ವ್ಯಕ್ತಿಯ ರಕ್ತದ ಮಾದರಿಯನ್ನು ಪಡೆದು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಂಕಿಪಾಕ್ಸ್ ಮಾರಣಾಂತಿಕ ರೋಗವಲ್ಲ. ಹಾಗಾಗಿ ಜನರು ಭಯ ಪಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಮಂಕಿಪಾಕ್ಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮಂಕಿಪಾಕ್ಸ್ ಚಿಕಿತ್ಸೆಗಾಗಿ ಸಾಕಷ್ಟು ವೈದ್ಯಕೀಯ ಸೌಲಭ್ಯಗಳು ಲಭ್ಯವಿದೆ. ಈ ರೋಗಕ್ಕೆ ತುತ್ತಾದವರು ಸಾಯುವುದಿಲ್ಲ. ಹಾಗಾಗಿ ಮಂಕಿಪಾಕ್ಸ್ ಬಗ್ಗೆ ಜನರು ಚಿಂತಿಸಬೇಡಿ ಎಂದು ವಿನಂತಿಸುತ್ತೇನೆ…. ಎಂದರು.
People need not panic about monkeypox Says Health Minister Sudhakar
ಇವುಗಳನ್ನೂ ಓದಿ…
13 ವರ್ಷ ಪೂರೈಸಿದ ಮಗಧೀರ ಚಿತ್ರದ ಕುತೂಹಲಕಾರಿ ಸಂಗತಿಗಳು
ಪುಷ್ಪ 2 ಚಿತ್ರದ ಅಲ್ಲು ಅರ್ಜುನ್ ಹೊಸ ಲುಕ್ ವೈರಲ್
ಮಹೇಶ್ ಬಾಬುಗೆ ವಿಲನ್ ಆದ ರಿಯಲ್ ಸ್ಟಾರ್ ಉಪೇಂದ್ರ
ಎಲ್ಲಾ ನಟಿಯರಿಗೂ ವಿಜಯ್ ದೇವರಕೊಂಡ ಬೇಕಂತೆ
ಚಿರಂಜೀವಿ ಸಲ್ಮಾನ್ ಖಾನ್ ಪ್ರಭುದೇವ ಒಂದೇ ಸೆಟ್ಟಲ್ಲಿ
ಸಲ್ಮಾನ್ ಖಾನ್ ಚಿತ್ರಕ್ಕೆ ಕಿಚ್ಚ ಸುದೀಪ್ ಆಕ್ಷನ್ ಕಟ್
Follow us On
Google News |
Advertisement