My Father is MLA: ಅರವಿಂದ ಲಿಂಬಾವಳಿ ಪುತ್ರಿ ಬದಲು ಸ್ನೇಹಿತನನ್ನು ಕೂರಿಸಿದ ಪೊಲೀಸರ ನಡೆ ಅಕ್ಷಮ್ಯ !
My Father is MLA: ಪೋಲಿಸರ ಮತ್ತು ಪತ್ರಕರ್ತರ ಮೇಲೆ ದರ್ಪತೋರಿಸಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ರೇಣುಕಾ ಬದಲಿಗೆ ಆಕೆಯ ಸ್ನೇಹಿತನಿಗೆ ದಂಡ ವಿಧಿಸಿದ್ದು ಗಮನಿಸಿದರೆ ಪೋಲಿಸರು ಬಿಜೆಪಿಗೆ ಹೆದರಿದ್ದಾರೆ...
My Father is MLA: ಬೆಂಗಳೂರಿನಲ್ಲಿ ಎಸಿಪಿ ಕಾರನ್ನೇ ಓವರ್ ಟೇಕ್ ಮಾಡಿದ್ದಲ್ಲದೆ ಪೋಲಿಸರ ಮತ್ತು ಪತ್ರಕರ್ತರ ಮೇಲೆ ದರ್ಪತೋರಿಸಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ರೇಣುಕಾ ಬದಲಿಗೆ ಆಕೆಯ ಸ್ನೇಹಿತನಿಗೆ ದಂಡ ವಿಧಿಸಿದ್ದು ಗಮನಿಸಿದರೆ ಪೋಲಿಸರು ಬಿಜೆಪಿಗೆ ಹೆದರಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಜ್ಯೋತಿ ಗೊಂಡಬಾಳ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಮಾಧ್ಯಮಗಳಲ್ಲಿ ಬಂದ ವೀಡಿಯೊ ವರದಿಗಳಲ್ಲಿ ಅತ್ಯಂತ ಸ್ಪಷ್ಟವಾಗಿ ಆಕೆಯೇ ವಾಹನ ಚಲಾಯಿಸುತ್ತಿರುವುದು ಕಾಣಿಸುತ್ತದೆ, ಮೊದಮೊದಲು ಪೊಲೀಸರು ಆಕೆಯೊಂದಿಗೆ ಜೋರಾಗಿ ಮಾತನಾಡುತ್ತಿದ್ದರು, ನಂತರ ಆಕೆ ಶಾಸಕರ ಪುತ್ರಿ ಎಂದು ತಿಳಿದ ತಕ್ಷಣ ಕೈಕಟ್ಟಿಕೊಂಡು ಅಸಹಾಯಕತೆ ತೋರಿಸಿದರು, ಅಲ್ಲಿ ಮಾಧ್ಯಮದವರು ಇದ್ದರು ಎಂಬ ಒಂದೇ ಕಾರಣಕ್ಕೆ ಆಕೆಯ ಬದಲಿಗೆ ಸ್ನೇಹಿತನಿಗೆ ದಂಡ ವಿಧಿಸಿದ್ದು ಗಮನಿಸಿದರೆ ಜನಸಾಮಾನ್ಯರಿಗೆ ಮಾತ್ರ ಕಾನೂನು ಎಂಬುದು ಸಾಬೀತಾಗಿದೆ.
Karnataka | This was a case of rash driving, she (MLA Aravind Limbavali's daughter) was stopped by police. Her friend was driving the car, they paid a fine and went: State Home Minister Araga Jnanendra pic.twitter.com/cBpGpHBhwj
ಈಗ ಇಂತಹ ಕಾನೂನುಗಳ ವಿರುದ್ಧ ಮತ್ತು ಪೊಲೀಸ್ ಇಲಾಖೆಯ ವೈಖರಿ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು ಇದು ಅಕ್ಷಮ್ಯ ಎಂದಿದ್ದಾರೆ.
ಓವರ್ ಟೇಕ್ ಮಾಡಿದ್ದಕ್ಕೆ ದಂಡ ಹಾಕಲು ಬರಲ್ಲ, ದಂಡ ಕಟ್ಟುವುದಿಲ್ಲ ಎಂದು ಪೋಲಿಸರಿಗೆ ಜೋರು ಧ್ವನಿಯಲ್ಲಿ ಮಾತನಾಡಿದ್ದರು ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ದೇಶದಲ್ಲಿ ಪ್ರಸ್ತುತ ಇಂತಹ ಕಾನೂನು ಜಾರಿಯಲ್ಲಿದೆ ಎಂಬುದನ್ನು ತೋರಿಸಿಕೊಡುತ್ತದೆ.
ಕೆಲವು ಟಿವಿ ವಾಹಿನಿಗಳು ಸಹ ಅವರ ನಡೆಯ ಕುರಿತು ಸೈಲಂಟಾಗಿ ವರ್ತಿಸಿರುವುದು ಸಹ ಅತ್ಯಂತ ನಾಚಿಕೆಗೇಡಿನ ಮತ್ತು ಹೊಣೆಗೇಡಿತನಕ್ಕೆ ಸಾಕ್ಷಿಯಾಗಿದೆ, ಆಕೆಯ ಜಾಗದಲ್ಲಿ ನಮ್ಮ ಪಕ್ಷದವರು ಇದ್ದಿದ್ದರೆ ಇಡೀ ದಿನ ವಾಹಿನಿಗಳಲ್ಲಿ ಅದೇ ಸುದ್ದಿ… ರಾಜ್ಯದ ತುಂಬ ಪ್ರತಿಭಟನೆ ಆಗಿರುತ್ತಿದ್ದವು. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದ್ದು ಬರುವ ದಿನಗಳಲ್ಲಿ ಮಾಧ್ಯಮಗಳ ಆಯ್ಕೆ ಕುರಿತು ನಾವು ಪ್ರಗತಿಪರ ಸೆಕ್ಯುಲರ್ ಜನರಿಗೆ ಪಾಠ ಮಾಡಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
police fined a friend instead of a Arvind Limbavali Daughter
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019