Puneeth Rajkumar: ಪುನೀತ್, ಅಶ್ವಿನಿ ಲವ್ ಸ್ಟೋರಿ.. ಆ ಸಮಯದಲ್ಲಿ ಎಷ್ಟು ಸೆನ್ಸೇಷನ್ ಆಗಿತ್ತು ಗೊತ್ತಾ..!
Puneeth Rajkumar Love Story : ಪುನೀತ್, ಅಶ್ವಿನಿ ಲವ್ ಸ್ಟೋರಿಯಲ್ಲಿ ಹಲವು ಸಿನಿಮಾ ಟ್ವಿಸ್ಟ್‌ಗಳು ನಡೆದಿವೆ. ಪುನೀತ್ ಪ್ರಪೋಸ್ ಮಾಡಿದ ತಕ್ಷಣ.. ಆಕೆ ಒಪ್ಪಿದರೂ ಅವರ ಹಿರಿಯರು ಒಪ್ಪಲಿಲ್ಲ.
Puneeth Rajkumar Love Story : ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಫಿಟ್ನೆಸ್ ಗೆ ಆದ್ಯತೆ ನೀಡುವ ತಮ್ಮ ನೆಚ್ಚಿನ ನಾಯಕ, ಅದೇ ಕಸರತ್ತು ಮಾಡುತ್ತಾ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದನ್ನು ಅಭಿಮಾನಿಗಳು ಅರಗಿಸಿಕೊಳ್ಳಲಾಗುತ್ತಿಲ್ಲ.
ಈ ಸಂದರ್ಭದಲ್ಲಿ ಅಭಿಮಾನಿಗಳು ಪುನೀತ್ ಅವರ ಹಿಂದಿನ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. ಅವರು ತುಂಬಾ ಪ್ರೀತಿಸುವ ಹೆಂಡತಿಗೆ, ಹೆಚ್ಚಾಗಿ ಹಚ್ಚಿಕೊಂಡಿದ್ದ ಮಕ್ಕಳು ಸೇರಿದಂತೆ ಅವರ ಪ್ರೇಮ ವಿವಾಹದ ಬಗ್ಗೆ ಚರ್ಚೆಯ ಮೆಲುಕು ಹಾಕುತ್ತಿದ್ದಾರೆ.
1976ರಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಪುನೀತ್ ಈಗ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. 1999ರಲ್ಲಿ ಪುನೀತ್ ಅವರ ಪ್ರೇಮಕಥೆ ಸಂಚಲನ ಮೂಡಿಸಿತ್ತು. ಪುನೀತ್ ರಾಜ್‌ಕುಮಾರ್, ಅಶ್ವಿನಿ ರೇವಂತ್.. ಕಾಮನ್ ಫ್ರೆಂಡ್ ಆಗಿದ್ದರು. ಹೀಗೆ ಅವರ ಸ್ನೇಹ, ಕೊನೆಗೆ ಮದುವೆಯವರೆಗೂ ಹೋಯಿತು.
ಆದರೆ, ಈ ನಡುವೆ ಇವರಿಬ್ಬರ ಪ್ರೇಮಕಥೆಯಲ್ಲಿ ಹಲವು ಸಿನಿಮಾ ಟ್ವಿಸ್ಟ್‌ಗಳು ನಡೆದಿವೆ. ಪುನೀತ್ ಪ್ರಪೋಸ್ ಮಾಡಿದ ತಕ್ಷಣ.. ಆಕೆ ಒಪ್ಪಿದರೂ ಅವರ ಹಿರಿಯರು ಒಪ್ಪಲಿಲ್ಲ. ಮಗನ ನಿರ್ಧಾರಕ್ಕೆ ಪುನೀತ್ ಪೋಷಕರು ಮೊದಲಿನಿಂದಲೂ ಬೆಂಬಲ ನೀಡಿದ್ದರು. ಕೊನೆಗೆ ಅಶ್ವಿನಿಯ ಮನೆಯವರೂ ಒಪ್ಪಿಗೆ ಸೂಚಿಸಿದಾಗ ಇವರಿಬ್ಬರ ಪ್ರೇಮ ಕಥೆ ಅಂತ್ಯವಾಯಿತು.
1981 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅಶ್ವನಿ ಮದುವೆಯ ನಂತರ ಹಲವಾರು ಚಿತ್ರಗಳಿಗೆ ವಸ್ತ್ರ ವಿನ್ಯಾಸಕಿ ಮತ್ತು ನಿರ್ಮಾಪಕಿಯಾಗಿಯೂ ಕೆಲಸ ಮಾಡಿದರು. ದಂಪತಿಗೆ ಪ್ರಸ್ತುತ ಧೃತಿ ಮತ್ತು ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬ ಮಗಳು ಅಮೆರಿಕದಲ್ಲಿ ಇದ್ದಾರೆ.
ಪುನೀತ್ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ, ಕಂಠೀರವ ಸ್ಟುಡಿಯೋ ದಲ್ಲಿ ಜನಸಾಗರವೇ ಹರಿದು ಬರುತ್ತಿದೆ, ರಾಜ್ಯದ ಮ್ಯೂಲ್ ಮೂಲೆಯಿಂದ ಜನರು ಇನ್ನೂ ಬರುತ್ತಲೇ ಇದ್ದಾರೆ….
Follow us On
Google News |