Big News, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ! ಮೇರು ನಟ ವಿಧಿವಶ
puneeth rajkumar no more : ಕನ್ನಡ ಚಿತ್ರರಂಗದ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ, ಕೋಟ್ಯಂತರ ಅಭಿಮಾನಿಗಳ ಮೇರು ನಟ ಇನ್ನಿಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಧಿವಶ.
ಬೆಂಗಳೂರು, 29 ಅಕ್ಟೋಬರ್ 2021 ನಟ ಪುನೀತ್ ರಾಜ್ ಕುಮಾರ್ ನಿಧನ (puneeth rajkumar no more) : ಇಲ್ಲಿಯ ತನಕ ಪುನೀತ್ ರಾಜ್ ಕುಮಾರ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ, ಇನ್ನೇನು ಚೇತರಿಸಿಕೊಂಡು ಮತ್ತೆ ಮಾಮೂಲಿನಂತೆ ಆಗಲಿದ್ದಾರೆ, ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದ ಕೋಟ್ಯಂತರ ಅಭಿಮಾನಿಗಳ ಮೊರೆ ದೇವರಿಗೆ ಮುಟ್ಟಿಲ್ಲ.
ಇಂದು ಓರ್ವ ಮೇರು ನಟ ನಮ್ಮನ್ನೆಲ್ಲಾ ಅಗಲಿದ್ದಾರೆ, ಪುನೀತ್ ರಾಜ್ ಕುಮಾರ್ ನಿಧನ ಸುದ್ದಿ ಅರಗಿಸಿ ಕೊಳ್ಳಲು ಕನ್ನಡ ಚಿತ್ರರಂಗಕ್ಕೆ ಸಾಧ್ಯವೇ ಇಲ್ಲ.
ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಪುನೀತ್ ರಾಜ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದರು, ಜಿಮ್ ನಲ್ಲಿ ವರ್ಕ್ ಔಟ್ ಮಾಡುವಾಗ ಲಘು ಹೃದಯಾಘಾತ ಆಗಿದ್ದು ತಕ್ಷಣ ಹತ್ತಿರದಲ್ಲಿ ಇದ್ದ ಕ್ಲಿನಿಕ್ ನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ವಿಕ್ರಂ ಆಸ್ಪತ್ರೆಗೆ ಸೇರಿಸಲಾಯಿತು….
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ… ಲಕ್ಷಾಂತರ ದಕ್ಷಿಣ ಚಿತ್ರರಂಗದ ಅಭಿಮಾನಿಗಳಿಗೆ ಇದು ನಿಜಕ್ಕೂ ಶಾಕಿಂಗ್ ಸುದ್ದಿ, ಕನ್ನಡದ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎಂದು ಊಹಿಸಲೂ ಸಾಧ್ಯವಾಗದು….
ವಿಚಾರ ತಿಳಿಯುತ್ತಿದ್ದಂತೆ ಸಹೋದರರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜಕುಮಾರ್ ಸೇರಿ ಕುಟುಂಬದ ಎಲ್ಲ ಸದಸ್ಯರು ಆಸ್ಪತ್ರೆ ತಲುಪಿದ್ದರು, ಎಲ್ಲಾ ಅಭಿಮಾನಿಗಳು ಸೇರಿದಂತೆ ಕುಟುಂಬದವರು ಕಣ್ಣೀರು ಹಾಕಿ…. ಪವರ್ ಸ್ಟಾರ್ ಚೇತರಿಕೆಗೆ ಪ್ರಾರ್ಥಿಸಿದ್ದರು.
ಅವರು ಇಂದು ಬೆಳಿಗ್ಗೆ ತಾನು ಗಾಜನೂರಿಗೆ ಹೋಗಬೇಕು ಎಂಬ ಬಗ್ಗೆ ಮಾತನಾಡಿದ್ದರಂತೆ…. ಇಹಲೋಕ ತ್ಯಜಿಸಿದ ಮೇರು ನಟ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿದ್ದಾರೆ…. ತನ್ನ ಸ್ವಭಾವ ನಡವಳಿಕೆ ಸೇರಿದಂತೆ ಮಾನವೀಯತೆ ಗುಣಗಳು ಸಹ ನಟನೆಯ ಜೊತೆ ಪುನೀತ್ ಅಳವಡಿಸಿಕೊಂಡು ಲಕ್ಷಾಂತರ ಜನರ ಮನಗೆದ್ದಿದ್ದ ಕನ್ನಡದ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲ…
ಸಾವಿನಲ್ಲೂ ಸಾರ್ಥಕತೆ ಮೆರೆದ ಅಪ್ಪು ಪುನೀತ್ ರಾಜ್‌ಕುಮಾರ್
ಪುನೀತ್ ರಾಜ್ ಕುಮಾರ್ ರವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ, ಆ ಮೂಲಕ ಇತರರಿಗೆ ಮಾರ್ಗದರ್ಶನವಾಗಿದ್ದಾರೆ, ಹೌದು … ಅವರು ನೇತ್ರದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ನಟ ಪುನೀತ್ ರಾಜ್‌ಕುಮಾರ್ ಅವರಿಂದ ನೇತ್ರ ದಾನ ಮಾಡಲು ನಿರ್ಧರಿಸಲಾಗಿದೆ. ಇದರೊಂದಿಗೆ ನಟ ಅಪ್ಪು ಪುನೀತ್ ಅಪ್ಪನ ಹಾದಿಯಲ್ಲೇ ಸಾಗಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಸಂಜೆ ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶ
ಸಂಜೆ ಐದು ಗಂಟೆ ಬಳಿಕ ನಟ ಪುನೀತ್ ರಾಜ್‌ಕುಮಾರ್ ಮೃತದೇಹ ಕಂಠೀರವ ಕ್ರೀಡಾಗಂಣಕ್ಕೆ ಸ್ಥಳಾಂತರ ಮಾಡುವ ಸಾಧ್ಯತೆ ಇದ್ದು ಸಂಜೆ ಬಳಿಕ ಅಭಿಮಾನಿಗಳ ದರ್ಶನಕ್ಕೆ ಪ್ರಾರ್ಥಿವ ಶರೀರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಎಲ್ಲ ಕಾನೂನು ಸುವ್ಯವಸ್ಥೆ ಮಾಡಲಾಗುತ್ತಿದೆ. ಮಾಜಿ ಸಿಎಂ ಬಿಎಸ್ ವೈ ಮತ್ತು ಹಾಲಿ ಸಿಎಂ ಬೊಮ್ಮಾಯಿ ಸಹ ಸ್ಥಳದಲ್ಲಿಯೇ ಇದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಬಿಗಿ ಭದ್ರತೆ
ಕಂಠೀರವ ಕ್ರೀಡಾಂಗಣದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಸ್ಥಳಕ್ಕೆ ಬೆಂಗಳೂರು ನಗರ ಡಿಸಿ ಮಂಜುನಾಥ್ ಆಗಮಿಸಿದ್ದಾರೆ. ಸಿದ್ಧತೆಗಳ ಕುರಿತು ಅವರು ಪರಿಶೀಲಿಸುತ್ತಿದ್ದಾರೆ. ಈ ನಡುವೆ ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಕ್ರಿಕೆಟಿಗರು ಸಂತಾಪ ಸೂಚಿಸುತ್ತಿದ್ದಾರೆ. ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಆರ್.ವಿನಯ್ ಕುಮಾರ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.
Follow us On
Google News |