ನಿರಂತರ ಅನ್ನದಾಸೋಹಕ್ಕೆ ಎರಡನೇ ವರ್ಷದ ಸಂಭ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದರ್ಗಜೋಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸತತವಾಗಿ ಎರಡು ವರ್ಷಗಳಿಂದ ನಿರಾಶ್ರಿತ ಕಡುಬಡವರಿಗೆ ಅನ್ನದಾಸೋಹ ಕಾರ್ಯಕ್ರಮ ಸಾಗುತ್ತಿದ್ದು. ಇಂದಿಗೆ ಎರಡು ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅನ್ನದಾಸೋಹ ಸಮಿತಿಯು ಎರಡನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

Online News Today Team

ಕಾರ್ಯಕ್ರಮದ ದಾನಿಗಳಾಗಿ ದಿಲೀಪ್ ಕುಮಾರ್ ರವರು ಸಹಾಯ ನೀಡಿದ್ದು ಇಂತಹ ಜನಪರ ಕಾರ್ಯಕ್ರಮಗಳು ಸದಾ ಸಾಗಲಿ ನಿರಾಶ್ರಿತ ಕಡುಬಡವರ ಹಸಿವನ್ನು ನೀಗಿಸುವ ಇಂತಹ ಕಾರ್ಯಕ್ರಮಗಳಿಗೆ ಸಾಕಷ್ಟು ದಾನಿಗಳು ಸಹಾಯ ಹಸ್ತ ನೀಡಲಿ ಸತತವಾಗಿ ಎರಡು ವರ್ಷಗಳಿಂದ ನಿರಂತರ ಅನ್ನದಾಸೋಹ ಕಾರ್ಯದಲ್ಲಿ ತೊಡಗಿರುವ ಮಲ್ಲೇಶ್ ಮತ್ತು ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಆಯೋಜಕರಾದ ಮಲ್ಲೇಶ್ ಮಾತನಾಡಿ ದಾನಿಗಳ ನೆರವಿನಿಂದ ಈ ಕಾರ್ಯವು ಸದಾ ಸಾಗುತ್ತಿದ್ದು ಮುಂದೆಯೂ ಕೂಡ ಹಸಿದ ಹೊಟ್ಟೆಗಳಿಗೆ ಊಟ ನೀಡುವ ಹಾಗೂ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಬೇಕಾಗುವ ಸಾಮಗ್ರಿಗಳು ನೀಡುವ ಕಾರ್ಯ ಮುಂದುವರೆಯಲಿದೆ ಇಂದಿನ ಕಾರ್ಯಕ್ರಮದಲ್ಲಿ ಆಹಾರದ ದಾನಿಗಳಾಗಿ ದಿಲೀಪ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಪುಸ್ತಕ ದಾನಿಗಳಾಗಿ ಮೆಹಬೂಬ್ ರವರು ಹಾಗೂ ಪಿ .ಸಿ. ಲಕ್ಷ್ಮೀನಾರಾಯಣ, ಶಶಿಕಲಾ ನಾಗರಾಜ್ ರವರು ತಮ್ಮ ಸಹಾಯ ಹಸ್ತ ನೀಡಿದ್ದಾರೆ ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಮಾಜಿ ನಗರಸಭಾ ಸದಸ್ಯರು ಮಾಜಿ ಲಯನ್ಸ್ ಅಧ್ಯಕ್ಷರು ಆದಂತಹ ಪಿ ಸಿ ಲಕ್ಷ್ಮಿ ನಾರಾಯಣ್, ದರ್ಗಜೋಗಹಳ್ಳಿಗ್ರಾಮ ಪಂಚಾಯಿತಿ ಸದಸ್ಯರಾದ ಶಶಿಕಲ ನಾಗರಾಜ್, ಮೆಹಬೂಬ್, ಯೋಗ ಕೃಷ್ಣಪ್ಪ, ಹಾಗೂ ಅನ್ನದಾಸೋಹ ಸಮಿತಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ಹರೀಶ್, ದೊಡ್ಡಬಳ್ಳಾಪುರ

Follow Us on : Google News | Facebook | Twitter | YouTube