Surana Vidyalaya : ಆನ್‌ಲೈನ್ ಪಾಠ ಕೇಳಿ ಕುಗ್ಗಿದ್ದ ಮಕ್ಕಳಿಗೆ ವಿಶೇಷ ತರಬೇತಿ
Surana Vidyalaya - Surana College : ಆನ್‌ಲೈನ್ ಪಾಠ ಕೇಳಿ ಕುಗ್ಗಿದ್ದ ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬಲು ಸುರಾನ ವಿದ್ಯಾಲಯದಿಂದ ವಿಶೇಷ ತರಬೇತಿ
- ರಾಹುಲ್ ಕಪೂರ್ ಮೋಟಿವೇಷನಲ್ ಸ್ಪೀಕರ್ ಅವರಿಂದ ಒಂದು ತಿಂಗಳ ತರಬೇತಿ
- ಸುರಾನಾ ವಿದ್ಯಾಲಯ ವ್ಯವಸ್ಥಾಪಕ ಟ್ರಸ್ಟಿ ಅವರಿಂದ ಪ್ರಾಯೋಜಕತ್ವ
ಬೆಂಗಳೂರು ಅಕ್ಟೋಬರ್ 28 (Surana Vidyalaya – Surana College): ಸುಮಾರು ಎರಡು ವರ್ಷಗಳಿಂದ ಶಾಲೆಗಳು ಪ್ರಾರಂಭವಾಗದೇ ಆನ್ ಲೈನ್ ಕ್ಲಾಸ್ ಮೂಲಕ ಪಾಠವನ್ನು ಕಲಿತಂತಹ ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಗರದ ಸುರಾನಾ ವಿದ್ಯಾಲಯ (Surana Vidyalaya – Surana College) ವಿದ್ಯಾರ್ಥಿಗಳಿಗಾಗಿ ವಿಶೇಷ ತರಬೇತಿಯನ್ನು ನೀಡಿದೆ.
ಒಂದು ತಿಂಗಳ ಕಾಲ ಮೋಟಿವೇಷನಲ್ ತರಬೇತಿಯ ಮೂಲಕ ಮಕ್ಕಳ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವ ತರಬೇತಿಯನ್ನು ನೀಡಿ ಅವರಿಗೆ ಇಂದು ಪ್ರಮಾಣ ಪತ್ರ ಹಾಗೂ ಸ್ಪರ್ಧೆಗಳಲ್ಲಿ ಗೆದ್ದಂತಹವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ತರಬೇತಿಯ ಪ್ರಾಯೋಜತ್ವ ವಹಿಸಿಕೊಂಡಿದ್ದ ಸುರಾನಾ ವಿದ್ಯಾಲಯದ ವ್ಯವಸ್ಥಾಪಕ ಟ್ರಸ್ಟಿ ಡಾ. ಅರ್ಚನಾ ಸುರಾನಾ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ, ಕರೋನಾ ಸಾಂಕ್ರಾಮಿಕ ರೋಗ ಎಲ್ಲಾ ಕ್ಷೇತ್ರದವರನ್ನೂ ಬಹಳಷ್ಟು ಕಾಡಿದೆ.
ಇದೇ ರೀತಿಯಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಹಪಾಠಿಗಳ ಜೊತೆಗೂಡಿ ಕಲಿತು ನಲಿಯಬೇಕಿದ್ದ ಮಕ್ಕಳನ್ನೂ ತಟ್ಟಿದೆ. ಸುಮಾರು ಎರಡು ವರ್ಷಗಳ ಕಾಲ ಭೌತಿಕ ಶಾಲೆಗಳಿಲ್ಲದೆ ನಲುಗಿದ್ದಾರೆ. ಕೇವಲ ಆನ್‌ಲೈನ್ ಮೂಲಕ ಪಡೆದ ಶಿಕ್ಷಣದಿಂದ ಮಾನಸಿಕವಾಗಿ ಕುಗ್ಗಿದ್ದನ್ನು ನಾವು ಮನಗೊಂಡಿದ್ದೇವೆ.
ಈ ನಿಟ್ಟಿನಲ್ಲಿ ಮಕ್ಕಳು ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದಂತೆ ತರಬೇತಿ ನೀಡುವ ಉದ್ದೇಶದಿಂದ ದೇಶದ ಪ್ರಖ್ಯಾತ ಮೋಟಿವೇಷನಲ್ ಸ್ಪೀಕರ್ ರಾಹುಲ್ ಕಪೂರ್ ಅವರಿಂದ ತರಬೇತಿಯನ್ನು ಆಯೋಜಿಸಲಾಗಿತ್ತು.
ಒಂದು ತಿಂಗಳ ಕಾಲ ನಡೆದಂತಹ ಈ ತರಬೇತಿ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಮಾನಸಿಕ ಸ್ಥೈರ್ಯ, ಭೌತಿಕ ದೈನಂದಿನ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳಬೇಕಾದ ಶಿಸ್ತು, ನೈತಿಕ ಮೌಲ್ಯ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು. ಸುಮಾರು 600 ಜನ ವಿದ್ಯಾರ್ಥಿಗಳು ಈ ತರಬೇತಿಯ ಪ್ರಯೋಜನ ಪಡೆದುಕೊಂಡರು ಎಂದು ಹೇಳಿದರು.
ಸುರಾನಾ ವಿದ್ಯಾಲಯದ ಪ್ರಾಂಶುಪಾಲರಾದ ಸಂದೀಪ್ ಪೈ ಮಾತನಾಡಿ, ಮನೆಯಲ್ಲೇ ಕುಳಿತು ಆನ್‌ಲೈನ್ ಪಾಠ ಕೇಳಿ ಮಾನಸಿಕ ಸಮತೋಲನ ಅಥವಾ ಕುಗ್ಗಿರುವ ಈ ಸಂಧರ್ಭದಲ್ಲಿ ಅವರ ಚೈತನ್ಯಕ್ಕೆ ಇಂಬು ಕೊಡುವ ನಿಟ್ಟಿನಲ್ಲಿ ಇಗ್ನೈಟ್ ಯುವರ್ ಇನ್ನರ್ ಪೋಟೇನ್ಶಿಯಲ್ ಎನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಮಕ್ಕಳ ಸಾಂಘಿಕ ಶಕ್ತಿಯನ್ನು ಮನೆಯಲ್ಲೇ ಕುಳಿತು ಒಗ್ಗೂಡಿಸುವ ಕೆಲವನ್ನು ಸುರಾನಾ ವಿದ್ಯಾಲಯ ಶಾಲೆ ಮಾಡಲಾಯಿತು. ಒಂದು ತಿಂಗಳ ಕಾಲ ನಿರಂತರವಾಗಿ ಈ ಮಕ್ಕಳಿಗೆ ವಿವಿದ ಕ್ವಿಜ್ ವಿವಿಧ ವರ್ಕ್‌ಶಾಪ್, ಸೆಶನ್ಸ್ ಎಲ್ಲವನ್ನೂ ಮಾಡಿ ಅವರ ದೈನಂದಿನ ರೀತಿಯ ಚಟುವಟಿಕೆಗಳನ್ನ ಉತ್ಸುಕತೆಯಿಂದ ತುಂಬುವುದು ಹೇಗೆ ಅನ್ನೋದನ್ನ ಕಲಿಸಲಾಯಿತು.
ಒಂದು ತಿಂಗಳ ಮಾನಸಿಕ ರಿಫ್ರೇಶ್‌ಮೆಂಟ್ ಮೂಲಕ ಮಾಡಿದ ಕೆಲವೇ ಶಾಲೆಗಳಲ್ಲಿ ನಮ್ಮದೂ ಒಂದು. ಇದರ ಮಖ್ಯ ರೂವಾರಿ ಡಾ ಅರ್ಚನಾ ಸುರಾನಾ, ಇಡೀ ಕಾರ್ಯಕ್ರಮವನ್ನು ಡಾ ಅರ್ಚನಾ ಸುರಾನಾ ಅವರು ಪ್ರಾಯೋಜಿಸಿದ್ದಾರೆ ಎಂದು ತಿಳಿಸಿದರು.
ತರಬೇತಿಯಲ್ಲಿ ಪಾಲ್ಗೊಂಡಿದ್ದ ಶಾಲಾ ಮಕ್ಕಳಿಗೆ ಇಂದು ಪ್ರಮಾಣ ಪತ್ರ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.
Follow us On
Google News |