Focus, ಕಟ್ಟಡಗಳ ಸುಸ್ಥಿರತೆಗೆ ‘ಫೋಕಸ್’ ಆದ್ಯತೆ

Focus, ಜನರಿಗೆ ಎಲ್ಲಾ ರೀತಿಯ ಮೂಲಸೌಕರ್ಯಗಳು ಉತ್ತಮವಾಗಿರಿಸುವ ದಿಸೆಯಲ್ಲಿ ಫೋರಂ ಆಫ್ ಕ್ರಿಟಿಕಲ್ ಯುಟಿಲಿಟಿ ಸರ್ವೀಸಸ್ (ಫೋಕಸ್) ಅಸ್ತಿತ್ವಕ್ಕೆ ಬಂದಿದೆ

ಬೆಂಗಳೂರು, ಏಪ್ರಿಲ್‌ 30: Forum of Critical Utility Services (Focus) – ಕಟ್ಟಡಗಳು ಸುಸ್ಥಿತಿ ಮತ್ತು ಸುರಕ್ಷಿತವಾಗಿರುವ ನಿಟ್ಟಿನಲ್ಲಿ ಹಾಗೂ ಅಲ್ಲಿ ವಾಸವಾಗಿರುವ ಜನರಿಗೆ ಎಲ್ಲಾ ರೀತಿಯ ಮೂಲಸೌಕರ್ಯಗಳು ಉತ್ತಮವಾಗಿರಿಸುವ ದಿಸೆಯಲ್ಲಿ ಫೋರಂ ಆಫ್ ಕ್ರಿಟಿಕಲ್ ಯುಟಿಲಿಟಿ ಸರ್ವೀಸಸ್ (ಫೋಕಸ್ – Focus) ಅಸ್ತಿತ್ವಕ್ಕೆ ಬಂದಿದೆ.

ಈ ಫೋಕಸ್ ಸಂಸ್ಥೆಯು ಬಿಲ್ಡರ್, ಆರ್ಕಿಟೆಕ್ಟ್, ಡೆವಲಪರ್ ಗಳು ಸೇರಿದಂತೆ ಕಟ್ಟಡಕ್ಕೆ ಸಂಬಂಧಿಸಿದ ಹಲವಾರು ಕ್ಷೇತ್ರಗಳ ಪರಿಣತರನ್ನು ಒಂದೆಡೆ ಸೇರಿಸಿ ತನ್ನ ಮೊದಲ ‘ಅಂತಾರಾಷ್ಟ್ರೀಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಶುಕ್ರವಾರ ಆಯೋಜಿಸಿತ್ತು.

ಈ ಸಮ್ಮೇಳನದಲ್ಲಿ ಕಟ್ಟಡಗಳು ಸ್ಮಾರ್ಟ್ ಆಗಿರುವುದು, ಸುರಕ್ಷಿತವಾಗಿರುವ ವಿಚಾರವನ್ನು ಪ್ರಮುಖವಾಗಿ ಚರ್ಚಿಸಲಾಯಿತು. ಈ ಕ್ರಮಗಳನ್ನು ಸಮರ್ಪಕವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ಹೆಜ್ಜೆಯನ್ನಿಡಬೇಕೆಂಬುದರ ಬಗ್ಗೆ ಸಂಬಂಧಿಸಿದ ಪರಿಣತರು ವಿಸ್ತೃತವಾಗಿ ಸಮಾಲೋಚನೆ ಮಾಡಿದರು.

Focus, ಕಟ್ಟಡಗಳ ಸುಸ್ಥಿರತೆಗೆ 'ಫೋಕಸ್' ಆದ್ಯತೆ - Kannada News

ಕಟ್ಟಡಕ್ಕೆ ಅಗತ್ಯವಾಗಿರುವ ಪ್ಲಂಬಿಂಗ್, ಏರ್ ಕಂಡೀಶನಿಂಗ್, ಲಿಫ್ಟ್, ಅಗ್ನಿಶಾಮಕದಂತಹ ಚಟುವಟಿಕೆಗಳಲ್ಲಿ ಯಾವುದೇ ಲೋಪವಾದರೂ ಅದನ್ನು ಕ್ಷಿಪ್ರಗತಿಯಲ್ಲಿ ಆ್ಯಪ್ ಆಧಾರಿತವಾಗಿ ಪರಿಹರಿಸುವ ಕ್ರಮಗಳನ್ನು ಅಳವಡಿಸುವ ಬಗ್ಗೆಯೂ ಚರ್ಚಿಸಲಾಯಿತು.

Focus, ಕಟ್ಟಡಗಳ ಸುಸ್ಥಿರತೆಗೆ 'ಫೋಕಸ್' ಆದ್ಯತೆ
Focus, ಕಟ್ಟಡಗಳ ಸುಸ್ಥಿರತೆಗೆ ‘ಫೋಕಸ್’ ಆದ್ಯತೆ

ಆಟೋಡೆಸ್ಕ್ ಕನ್ ಸ್ಟ್ರಕ್ಷನ್ ಕ್ಲೌಡ್, ಟೊಪಾಸ್ ಫೈರ್ ಸಿಸ್ಟಮ್ಸ್, ಓರಿಯೆಂಟ್ ಫೈರ್ ಕರ್ಟೇನ್ಸ್, ನೆಕ್ಸಿಯಾನ್, ಬಿಎನ್ ಬಿ, ಐಪಿಇಸಿ ಪ್ರಾಜೆಕ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಗ್ರಿಪ್ಲಿಟೆಕ್, ಡ್ಯುರೆನ್ಸ್, ಕೇಪ್ ಎಲೆಕ್ಟ್ರಿಕ್ ಸೇರಿದಂತೆ ಹಲವಾರು ಕಂಪನಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದವು.

ತಂತ್ರಜ್ಞಾನದ ಮೂಲಕ ನಿರ್ಮಾಣ ಉದ್ಯಮದ ಡಿಜಿಟಲ್ ರೂಪಾಂತರದ ವಿಚಾರವನ್ನು ಈ ಸಮ್ಮೇಳನದಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಹಲವಾರು ಪರಿಣತರು ತಮ್ಮ ತಮ್ಮ ಕ್ಷೇತ್ರಗಳ ಬಗ್ಗೆ ವಿಷಯ ಮಂಡಿಸಿದರು. ಹೀಗೆ ಒಟ್ಟಾರೆ ಭಾರತೀಯ ನಿರ್ಮಾಣ ಉದ್ಯಮದ 300 ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಈ ಸಮ್ಮೇಳನವನ್ನು ಫೋಕಸ್ ನ ರಾಷ್ಟ್ರೀಯ ಅಧ್ಯಕ್ಷ ಸುರೇಶ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಎಆರ್.ಜತಿನ್ ಶಾ ಮತ್ತು ಆಶಿಶ್ ರಹೇಜಾ, ಸಂಸ್ಥಾಪಕ ಸದಸ್ಯ ಡೊಮೆನಿಕ್ ಕೆ.ಪಿ., ಫೋಕಸ್ ಬೆಂಗಳೂರು ಚಾಪ್ಟರ್ ನ ಸಂವಹನ ಮುಖ್ಯಸ್ಥ ವೆಂಕಟರೆಡ್ಡಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

Building sustainability to get priority from Forum

The Forum of Critical Utility Services (Focus) has come up with a way to ensure that buildings are sustainable and
secure, and that all kinds of infrastructures are good for people living there.

Follow us On

FaceBook Google News

Read More News Today